Published on: September 14, 2022

ವೆಂಚುರೈಸ್ ಕರ್ನಾಟಕ ಸ್ಟಾರ್ಟ್ಅಪ್ ಚಾಲೆಂಜ್

ವೆಂಚುರೈಸ್ ಕರ್ನಾಟಕ ಸ್ಟಾರ್ಟ್ಅಪ್ ಚಾಲೆಂಜ್

where to buy priligy in australia ಸುದ್ದಿಯಲ್ಲಿ ಏಕಿದೆ?

Romita ಉತ್ಪಾದನೆ ಮತ್ತು ಸುಸ್ಥಿರತೆ-ಸಂಬಂಧಿತ ವಲಯಗಳಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿ, ಬೆಂಬಲಿಸುವ ‘ವೆಂಚುರೈಸ್‌’ ಸ್ಪರ್ಧೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿದೆ.

ಮುಖ್ಯಾಂಶಗಳು

  • ವೆಂಚುರೈಸ್ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ – ಇನ್ವೆಸ್ಟ್ ಕರ್ನಾಟಕ 2022 ರ ಭಾಗವಾಗಿದ್ದು, ಬೆಂಗಳೂರಿನಲ್ಲಿ ನವೆಂಬರ್ 2 ರಿಂದ ನವೆಂಬರ್ 4 ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ.
  • ಉತ್ಪಾದನೆ ಮತ್ತು ಸಂಬಂಧಿತ ವಲಯಗಳಲ್ಲಿನ ಸ್ಟಾರ್ಟ್ ಅಪ್‌ಗಳಿಗೆ ರಾಜ್ಯವನ್ನು ಆದ್ಯತೆಯ ತಾಣವಾಗಿ ರೂಪಿಸುವುದು ಆದ್ಯತೆಯಾಗಿದೆ.
  • ಅಮೆಜಾನ್‌ ಪ್ರಾಯೋಜಿತ ಈ ‘ಸ್ಟಾರ್ಟ್‌ಅಪ್ ಪಿಚ್ ಚಾಲೆಂಜ್‌’ನ ಸುಗಮ ನಿರ್ವಹಣೆಗಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜತೆ ಟಿಐಇ ಕೈ ಜೋಡಿಸಿದೆ.

ಏನಿದು ಚಾಲೆಂಜ್‌?

  • ಮುಂದಿನ 2 ತಿಂಗಳ ಅವಧಿಯಲ್ಲಿ ನಡೆಯಲಿರುವ ಈ ಸ್ಪರ್ಧೆಯ ಮೊದಲ ಹಂತ ಆನ್‌ಲೈನ್ ಅರ್ಜಿ ಸಲ್ಲಿಕೆ. ಆನ್‌ಲೈನ್ ಪಿಚಿಂಗ್ ಎರಡನೇ ಭಾಗವಾದರೆ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.

ಬಹುಮಾನ

  • ಸ್ಪರ್ಧೆಯ ವಿಜೇತರಿಗೆ 100,000 ಡಾಲರ್‌ ನಗದು ಬಹುಮಾನ ಘೋಷಿಸಲಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿಯಾಗುವ ಅವಕಾಶದ ಜತೆಗೆ, ಹೂಡಿಕೆದಾರರು ಹಾಗೂ ಮಾರ್ಗದರ್ಶಕರ ಜತೆ ಮಾತುಕತೆಗೆ ಅವಕಾಶ ಕಲ್ಪಿಸಲಾಗುತ್ತದೆ.