Published on: July 5, 2022
ವೈಮಾನಿಕ ತರಬೇತಿ ಶಾಲೆ!
ವೈಮಾನಿಕ ತರಬೇತಿ ಶಾಲೆ!
ಸುದ್ದಿಯಲ್ಲಿ ಏಕಿದೆ?
ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಲಬುರಗಿ ಯಲ್ಲಿ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಉತ್ತರ ಕರ್ನಾಟಕ ಭಾಗದ ಯುವಕರು ಇಲ್ಲಿಯೇ ಪೈಲಟ್ ತರಬೇತಿ ಪಡೆಯಬಹುದು.
ಮುಖ್ಯಾಂಶಗಳು
- ಏಷ್ಯಾ ಫೆಸಿಪಿಕ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿ ಮತ್ತು 100 ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಅಗತ್ಯವಿರುವ ಭೂಮಿ ಮತ್ತು ಮೂಲ ಸೌಕರ್ಯಗಳು ಪ್ರಾಧಿಕಾರ ಒದಗಿಸಿದ್ದು, ಇನ್ನು ಮುಂದೆ ಪೈಲಟ್ ತರಬೇತಿ ಪಡೆಯಲು ಉತ್ತರ ಕರ್ನಾಟಕ ಭಾಗದ ಯುವಕರು ಮುಂಬೈ, ಹೈದರಾಬಾದ್, ಬೆಂಗಳೂರು ನಗರಕ್ಕೆ ಹೋಗುವುದು ತಪ್ಪಲಿದೆ.
- ಸುಮಾರು 100 ಜನರು ಇಲ್ಲಿ ಪೈಲಟ್ ತರಬೇತಿ ಪಡೆಯಬಹುದಾಗಿದೆ. ಜೊತೆಗೆ ಇದರಿಂದ ಈ ಭಾಗದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’.
-
ಮೊದಲು ಬೆಂಗಳೂರಿನ ಜಕ್ಕೂರಿನಲ್ಲಿ ಮಾತ್ರ ವೈಮಾನಿಕ ತರಬೇತಿ ಶಾಲೆ ಇತ್ತು. ಈಗ ಕಲಬುರಗಿ , ಹುಬ್ಬಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿಯೂ ತರಬೇತಿ ಶಾಲೆ ಇದೆ. ಇದರಿಂದಾಗಿ ರಾಜ್ಯದ ಯುಕವರು ಇಲ್ಲಿಯೇ ತರಬೇತಿ ಪಡೆಯಬಹುದಾಗಿದೆ.