Published on: October 25, 2022

ಸಂವಹನ ಉಪಗ್ರಹಗಳು

ಸಂವಹನ ಉಪಗ್ರಹಗಳು

Inza ಸುದ್ದಿಯಲ್ಲಿ ಏಕಿದೆ?

http://hiperduct.ac.uk/pay-to-get-custom-school-essay-on-lincoln ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಭಾರವಾದ ರಾಕೆಟ್ LVM3 M2 ಉಡಾವಣೆಯಶಸ್ವಿಯಾಗಿದೆ. ಇದು ವಾಣಿಜ್ಯ ಉದ್ದೇಶದ ಮೊದಲ ಉಡಾವಣೆಯಾಗಿದ್ದು, ಬ್ರಿಟನ್‌ನ ಮೂಲದ ಒನ್‌ವೆಬ್‌ ಲಿಮಿಟೆಡ್‌ನ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಒಟ್ಟಿಗೆ ನಭಕ್ಕೆ ಕಳುಹಿಸಲಾಗಿದೆ.

ಮುಖ್ಯಾಂಶಗಳು

  • 5 ಮೀಟರ್ ಎತ್ತರದ, 644 ಟನ್‌ ತೂಕದ ರಾಕೆಟ್  ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿತು.
  • ಪ್ರಮುಖ ಹೂಡಿಕೆದಾರ: ಇದರಲ್ಲಿ ಸಾಗಿಸಲಾದ ಉಪಗ್ರಹಗಳು ಲಂಡನ್ ಮೂಲದ ಸಂವಹನ ಸಂಸ್ಥೆ ಒನ್‌ವೆಬ್ ಗೆ ಸೇರಿವೆ. ಇದರಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ ಪ್ರಮುಖ ಹೂಡಿಕೆದಾರರಾಗಿದ್ದಾರೆ.
  • ಒನ್‌ ವೆಬ್‌ ಒಂದು ಖಾಸಗಿ ಉಪಗ್ರಹ ಸಂವಹನ ಕಂಪನಿಯಾಗಿದ್ದು, ಇದರಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ ಪ್ರಮುಖ ಹೂಡಿಕೆದಾರ ಮತ್ತು ಷೇರುದಾರ. LVM3-M2 ರಾಕೆಟ್‌ 8,000 ಕೆ.ಜಿ.ವರೆಗಿನ ಉಪಗ್ರಹ ಸಾಗಿಸುವ ಸಾಮರ್ಥ್ಯ ಹೊಂದಿದೆ.
  • ಒನ್‌ ವೆಬ್‌ನ ಇನ್ನೂ 36 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮತ್ತೊಂದು ಕಾರ್ಯಾಚರಣೆ 2023ರ ಜನವರಿಯಲ್ಲಿ ನಿಗದಿಯಾಗಿದೆ.

ಉದ್ದೇಶ

  • ಇಸ್ರೋ ಅತ್ಯಂತ ಭಾರವಾದ ರಾಕೆಟ್ LVM3 ಅನ್ನು ವಾಣಿಜ್ಯದ ಉದ್ದೇಶಕ್ಕೆ ಉಡಾವಣೆ ಮಾಡಲಾಗಿದೆ. ಬ್ರಿಟನ್‌ ಮೂಲದ ಒನ್‌ವೆಬ್‌ ಲಿಮಿಟೆಡ್‌ ಎಂಬ ಕಂಪನಿಗೆ ಸೇರಿದ ಈ ಸಂವಹನ ಉಪಗ್ರಹಗಳನ್ನು ಬ್ರಾಡ್‌ಬ್ಯಾಂಡ್‌ ಸೇವೆಗಾಗಿ ಬಳಸಲಾಗುತ್ತದೆ.

ಒಬ್‌ವೆಬ್ ಲಿಮಿಟೆಡ್‌

  • ಇಸ್ರೊದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್ಐಎಲ್‌) ಗ್ರಾಹಕ ಸಂಸ್ಥೆಯಾಗಿದೆ. ಭಾರ್ತಿ ಎಂಟರ್‌ಪ್ರೈಸಸ್‌ ಈ ಒಬ್‌ವೆಬ್‌ ಕಂಪನಿಯಲ್ಲಿ ಗಣನೀಯ ಪ್ರಮಾಣದ ಹೂಡಿಕೆ ಹೊಂದಿದೆ.