Published on: March 6, 2023

ಸಗಣಿಯಿಂದ ತಯಾರಾದ ಪೇಂಟ್

ಸಗಣಿಯಿಂದ ತಯಾರಾದ ಪೇಂಟ್


ಸುದ್ದಿಯಲ್ಲಿ ಏಕಿದೆ? ಛತ್ತೀಸ್ ಗಢದ ಬಲೋದ್ ಜಿಲ್ಲಾಧಿಕಾರಿಗಳ ಕಚೇರಿ, ಹಳೆಯ ಮಾದರಿಯನ್ನು ಹೊಸದಾಗಿ ಅಳವಡಿಸಿಕೊಂಡು ಗಮನ ಸೆಳೆಯುತ್ತಿದೆ. ಕಚೇರಿಗೆ ಬಣ್ಣ ಹಾಕುವ ವಿಷಯದಲ್ಲಿ ಸಂಪೂರ್ಣ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಹಸುವಿನ ಸಗಣಿ ಪ್ರಮುಖ ಘಟಕಾಂಶವಾಗಿರುವ ನೈಸರ್ಗಿಕ, ಪರಿಸರ ಸ್ನೇಹಿ ಪೇಂಟ್ ನ್ನು ಹಚ್ಚಲಾಗಿದೆ. 


ಮುಖ್ಯಾಂಶಗಳು

 • ಸರ್ಕಾರಿ ಕಟ್ಟಡಗಳನ್ನು ಅತ್ಯಾಧುನಿಕ, ಆಕರ್ಷಕವಾಗಿ ಕಾಣುವಂತೆ ಮಾಡಲು ಹೊಸ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ.
 • ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಹಾಗೂ ಶಾಲೆಗಳಿಗೆ ನೈಸರ್ಗಿಕ ಎಮಲ್ಷನ್ ಬಣ್ಣ ಹಾಕಬೇಕೆಂಬ ಸರ್ಕಾರದ ನಿರ್ಧಾರದ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಈ ಪರಿಸರ ಸ್ನೇಹಿ ಬಣ್ಣ ಹಾಕಲಾಗಿದೆ.
 • ಬಲೋದ್ ನಲ್ಲಿ ಈಗಾಗಲೇ ಸಗಣಿ ಆಧಾರಿತ ವಿಷಕಾರಿಯಲ್ಲದ, ವಾಸನೆ ರಹಿತ ಬಣ್ಣ (ಪೇಂಟ್) ತಯಾರಿಕೆ ಘಟಕಗಳಿವೆ. ಈ ಪೇಂಟ್ ತಯಾರಕ ಘಟಕಗಳನ್ನು ಗೋಶಾಲೆಗಳಲ್ಲೇ ಸ್ಥಾಪಿಸಲಾಗಿದ್ದು, ಮಹಿಳಾ ಸ್ವಸಹಾಯ ಗುಂಪುಗಳು ಇದರಲ್ಲಿ ತೊಡಗಿಸಿಕೊಂಡಿವೆ. ಇದೇ ಮಾದರಿಯ ಪೇಂಟ್ ಘಟಕಗಳು ಬೇರೆ ಜಿಲ್ಲೆಗಳಲ್ಲೂ ಸ್ಥಾಪನೆಯಾಗಿವೆ.

 ಪ್ರಯೋಜನಗಳು

 • ಇದು ಬಹುರಾಷ್ಟ್ರೀಯ ಕಂಪನಿಗಳಿಗಿಂತ 30% ಅಗ್ಗವಾಗಿದೆ.
 • ಸಗಣಿ ಆಧರಿತ ಪೇಂಟ್ಗಳು ಕಡಿಮೆ ಖರ್ಚಿನದ್ದಾಗಿದ್ದು, ಗೋಧನ್ ನ್ಯಾಯ ಯೋಜನೆಯಡಿ ಉತ್ತೇಜಿಸಲಾಗುತ್ತಿದೆ. ಇದರಲ್ಲಿ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ವಾಸನೆಯಿಲ್ಲದ ಗುಣಗಳು ಇವೆ.
 • ಈ ರೀತಿಯ ಪೇಂಟ್ ಗಳನ್ನು ಬಳಕೆ ಮಾಡುವುದರಿಂದ ಗ್ರಾಮೀಣ ಆರ್ಥಿಕತೆಯೂ ವೃದ್ಧಿಯಾಗಲಿದ್ದು, ಮಹಿಳೆಯರ ಆದಾಯವೂ ಹೆಚ್ಚಳವಾಗಲಿದೆ.

‘ಗೋಧನ್ ನ್ಯಾಯ ಯೋಜನೆ’

 • ಗೋಧನ್ ನ್ಯಾಯ ಯೋಜನೆ’ 21 ಜುಲೈ 2020 ರಂದು ಛತ್ತೀಸ್‌ಗಢದಿಂದ ರಾಜ್ಯದ ಮೊದಲ ಹಬ್ಬವಾದ ಹರೇಲಿಯ ಸಂದರ್ಭದಲ್ಲಿ ಪ್ರಾರಂಭಿಸಲಾಗಿದೆ
 • ಇದರ ಅಡಿಯಲ್ಲಿ, ಪ್ರತಿ ಕೆ.ಜಿ.ಗೆ 2 ರೂ.ಯಂತೆ ರಾಜ್ಯ ಸರ್ಕಾರವು ಹಸುವಿನ ಸಗಣಿಯನ್ನು ಸಂಗ್ರಹಿಸುತ್ತದೆ ರಾಜ್ಯದ ರೈತರು ಮತ್ತು ಜಾನುವಾರು ಸಾಕಣೆದಾರರಿಗೆ  ಇದು ಆದಾಯಕ್ಕೆ ಕಾರಣವಾಗುತ್ತದೆ ಮತ್ತು ಆರಂಭದಲ್ಲಿ ಗ್ರಾಮೀಣ ವಲಯ ನಂತರ ರಾಜ್ಯಾದ್ಯಂತ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.
 • ಹಸುವಿನ ಸಗಣಿ ಸಂಗ್ರಹಿಸಿದ ನಂತರ, ಸರ್ಕಾರವು ಮಹಿಳಾ ಸ್ವ-ಸಹಾಯ ಗುಂಪು (WSHG) ಮೂಲಕ ಸಂಗ್ರಹಿಸಿದ ಹಸುವಿನ ಸಗಣಿಯನ್ನು ವರ್ಮಿಕಾಂಪೋಸ್ಟ್ ಆಗಿ ಪರಿವರ್ತಿಸುತ್ತದೆ ಮತ್ತು ನಂತರ ಸಾವಯವ ಗೊಬ್ಬರವನ್ನು ಸಹಕಾರ ಸಂಘಗಳ ಮೂಲಕ ರೈತರ ರಸಗೊಬ್ಬರ ಅಗತ್ಯವನ್ನು ಪೂರೈಸಲು ಮಾರಾಟ ಮಾಡಲಾಗುವುದು.
 • ಹೆಚ್ಚುವರಿ ಸಾವಯವ ಗೊಬ್ಬರವನ್ನು ಮಾರಾಟಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.

ಮಹತ್ವ

 • ಜಾನುವಾರುಗಳನ್ನುತೆರೆದ ಮೇಯಿಸುವಿಕೆ ಅಭ್ಯಾಸ ಮತ್ತು ಬೀದಿ ಪ್ರಾಣಿಗಳಿಂದ ರಸ್ತೆಯಲ್ಲಿ ಅಪಘಾತಗಳನ್ನು ತಡೆಯುತ್ತದೆ.
 • ಇದು ಬಿಡಾಡಿ ದನಗಳ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ ಮತ್ತು ದೇಶವು ವಿಶಾಲವಾದ ಜಾನುವಾರುಗಳನ್ನು ಹೊಂದಿರುವುದರಿಂದ ದೇಶದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುತ್ತದೆ.
 • ಪಶು ಸಂಗೋಪನೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಮತ್ತು ಸಾವಯವ ಗೊಬ್ಬರವು ಸ್ಥಳೀಯ ಮಟ್ಟದಲ್ಲಿ ಕೈಗೆಟುಕುವ ಬೆಲೆಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ಪ್ರೋತ್ಸಾಹಿಸಲಾಗುವುದು, ಇದರ ಪರಿಣಾಮವಾಗಿ ರೂಪುಗೊಳ್ಳುವ ಸಮುದಾಯಕ್ಕೆ ಭಾರಿ ಆರ್ಥಿಕ ಲಾಭ ದೊರೆಯುತ್ತದೆ