Published on: November 29, 2022

‘ಸರಾಸ್‌ (ಎಸ್ಎಆರ್‌ಎಎಸ್) –3’

‘ಸರಾಸ್‌ (ಎಸ್ಎಆರ್‌ಎಎಸ್) –3’

Kabinda ಸುದ್ದಿಯಲ್ಲಿ ಏಕಿದೆ?

http://beccajcampbell.com/tag/50k-words-in-30-days/ ಬ್ರಹ್ಮಾಂಡದ ಉಗಮದ ಹಂತದಲ್ಲಿ ಹುಟ್ಟಿದ ಮೊದಲ ನಕ್ಷತ್ರಗಳು ಮತ್ತು ಆಕಾಶಗಂಗೆಗಳ ಸ್ವರೂಪಗಳ ಬಗ್ಗೆ ‘ಸರಾಸ್‌–3’ (ಎಸ್ಎಆರ್‌ಎಎಸ್–3) ರೇಡಿಯೊ ದೂರದರ್ಶಕ ಸುಳಿವು ನೀಡಿದೆ ಎಂದು ರಾಮನ್‌ ಸಂಶೋಧನಾ ಸಂಸ್ಥೆ ತಿಳಿಸಿದೆ.

 ‘ಸರಾಸ್‌–3’ ರೇಡಿಯೊ ದೂರದರ್ಶಕ

  • ನಿರ್ಮಾಣ : ಭಾರತದ ರಾಮನ್‌ ಸಂಶೋಧನಾ ಸಂಸ್ಥೆ
  • ಅಧ್ಯಯನ :ಈ ದೂರದರ್ಶಕ ಮೂಲಕ 20 ಕೋಟಿ ವರ್ಷಗಳ ಹಿಂದೆ ‘ಮಹಾಸ್ಫೋಟದಿಂದಾಗಿ (ಬಿಗ್‌ ಬ್ಯಾಂಗ್) ಬ್ರಹ್ಮಾಂಡದ ಉಗಮದ ಸಂದರ್ಭದ ವಿದ್ಯಮಾನ, ಆ ಬಳಿಕ ಹುಟ್ಟಿದ ನಕ್ಷತ್ರಗಳು ಮತ್ತು ಸೃಷ್ಟಿಯಾದ ಆಕಾಶಗಂಗೆಗಳ ಸ್ವರೂಪಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.
  • ‘ನೀರಿನ ಮೇಲೆ ತೇಲುವ ಸಾಮರ್ಥ್ಯ ಹೊಂದಿದೆ’.
  • ಉದ್ದೇ ಶ : ‘ಹೈಡ್ರೊಜನ್ ಪರಮಾಣುಗಳಿಂದ 21 ಸೆಂಟಿ ಮೀಟರ್ ತರಂಗಾಂತರದಲ್ಲಿ (1.4 ಗಿಗಾ ಹರ್ಟ್ಸ್‌ ) ಹೊರಹೊಮ್ಮುವ ವಿಕಿರಣಗಳಲ್ಲಿ ಅನ್ವೇ ಷಣೆ ಕೈಗೊಳ್ಳುವುದು ಈ ಉಪಕರಣದ ಮೂಲ ಉದ್ದೇಶವಾಗಿದೆ..

ರೇಡಿಯೊ ದೂರದರ್ಶಕದ ಪರೀಕ್ಷೆ

  • ‘ಸರಾಸ್’ ರೇಡಿಯೋ ದೂರದರ್ಶಕವನ್ನು ಹಲವು ಸ್ಥಳಗಳಲ್ಲಿ ಪರೀಕ್ಷೆ ಕೈಗೊಳ್ಳಲಾಯಿತು. ಮೊದಲ ಬಾರಿ ಅನಂತಪುರ ಜಿಲ್ಲೆಯ ಟಿಂಬಕ್ಟುನಲ್ಲಿ ಪರೀಕ್ಷೆ ನಡೆಸಲಾಯಿತು. ನಂತರ, ಭಾರತೀಯ ಖಗೋಳ ವೀಕ್ಷಣಾಲಯದ ನೆರವಿನಿಂದ ಲಡಾಕ್ನಲ್ಲಿ ಪ್ರಯೋಗ ಕೈಗೊಳ್ಳಲಾಯಿತು’.
  • ಚಿಕ್ಕಬಳ್ಳಾ ಪುರದಲ್ಲಿ ಮೊದಲ ಪರೀಕ್ಷೆ :‘ಸರಾಸ್ ದೂರದರ್ಶಕದ ಪರೀಕ್ಷೆಯನ್ನು 2020ರ ಆರಂಭದಲ್ಲಿ ಚಿಕ್ಕಬಳ್ಳಾಪುರದ ದಂಡಿಗಾನಹಳ್ಳಿ ಕೆರೆ ಪ್ರದೇಶದಲ್ಲಿ ಮತ್ತು ಶರಾವತಿ ಹಿನ್ನೀ ರಿನ ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು.. ಆಕಾಶದಿಂದ ಹೊರಹೊಮ್ಮುವ ರೇಡಿಯೊ ತರಂಗಗಳ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಲು ಈ ಪ್ರಯೋಗಗಳು ನೆರವಾದವು.

ರಾಮನ್‌ ಸಂಶೋಧನಾ ಸಂಸ್ಥೆ

  • ವೈಜ್ಞಾನಿಕ ಸಂಶೋಧನೆಗಾಗಿ ಒಂದು ಸಂಸ್ಥೆಯಾಗಿದೆ
  • ಸ್ಥಾಪನೆ:1948
  • ಸ್ಥಳ: ಬೆಂಗಳೂರು
  • ಸ್ಥಾಪಿಸಿದವರು: ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ. ರಾಮನ್
  • ಅಂಗಸಂಸ್ಥೆ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
  • ಇದು ಸರ್ ಸಿ.ವಿ. ರಾಮನ್ ಅವರ ಖಾಸಗಿ ಒಡೆತನದ ಸಂಸ್ಥೆಯಾಗಿ ಪ್ರಾರಂಭವಾದರೂ, ಈಗ ಭಾರತ ಸರ್ಕಾರದಿಂದ ಧನಸಹಾಯ ಪಡೆಯುತ್ತದೆ.