Published on: November 22, 2022

ಸಹ್ಯಾದ್ರಿ ಕೆಂಪು ಮುಕ್ತಿ

ಸಹ್ಯಾದ್ರಿ ಕೆಂಪು ಮುಕ್ತಿ

http://fabcare.com/bags-shoe-care ಸುದ್ದಿಯಲ್ಲಿ ಏಕಿದೆ?

buy provigil cheap online ‘ಸಹ್ಯಾದ್ರಿ ಕೆಂಪು ಮುಕ್ತಿ’ ಹೆಸರಿನ ಕೆಂಪಕ್ಕಿಯ ಭತ್ತದ ತಳಿಯನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಮುಖ್ಯಾಂಶಗಳು

  • ಸದ್ಯ ರಾಜ್ಯದ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಾರರು, ಕೇರಳ ಮೂಲದ ‘ಜ್ಯೋತಿ’ ತಳಿಯ ಕೆಂಪಕ್ಕಿಯ ಭತ್ತ ಬೆಳೆಯುತ್ತಿದ್ದಾರೆ. ಅದಕ್ಕೆ ಬೆಂಕಿ ರೋಗ ಬಾಧಿಸಲಿದೆ. ಪರಿಹಾರ ಹುಡುಕಲು ವಿಶ್ವವಿದ್ಯಾಲಯ ಮುಂದಾಗಿದೆ.
  • ಅಭಿವೃದ್ಧಿ: ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಈ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿದೆ.
  • ಇಳುವರಿ :ನೂತನ ತಳಿ ಭತ್ತವನ್ನು ವಲಯ, ರಾಷ್ಟ್ರೀಯ ಮಟ್ಟದಲ್ಲಿ ‍ಪ್ರಾಯೋಗಿಕ ಹಂತದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಹೆಕ್ಟೇರ್‌ಗೆ 60 ಕ್ವಿಂಟಲ್‌ ಇಳುವರಿ ಬಂದಿದೆ. ದೇಶದ ವಿವಿಧ ಭಾಗಗಳ 60 ಕಡೆ ಕ್ಷೇತ್ರ ಪ್ರಯೋಗ ನಡೆದಿದೆ. ಉಳಿದ ತಳಿಗಳಿಗಿಂತ ಶೇ 21.30ರಷ್ಟು ಹೆಚ್ಚು ಇಳುವರಿ ದೊರೆತಿದೆ. 2021–22ರಲ್ಲಿ ರಾಜ್ಯದಲ್ಲಿ 5,000 ಎಕರೆಯಲ್ಲಿ ‘ಸಹ್ಯಾದ್ರಿ ಕೆಂಪು ಮುಕ್ತಿ’ ತಳಿಯ ಭತ್ತ ಬೆಳೆಯಲಾಗಿದೆ. ಹೆಕ್ಟೇರ್‌ಗೆ 7,000ದಿಂದ 7,500 ಕೆ.ಜಿ ಹೆಚ್ಚು ಇಳುವರಿ ನೀಡಿದೆ.

ವಿಶೇಷತೆ

  • ಸಹ್ಯಾದ್ರಿ ಕೆಂಪು ಮುಖ್ತಿ ಎಂಬುದು ಕೆಂಪು ಕಜೆ ಅಕ್ಕಿ ತಳಿಯಾಗಿದ್ದು, ಇದಕ್ಕೆ ಕಣೆ ಕೀಟ, ಕೊಳವೆ ಕೀಟದ ಕಾಟ ಇರುವುದಿಲ್ಲ.
  • ಮಳೆ ಬಂದರೂ ಭತ್ತದ ಗಿಡ ತಡೆದು ನಿಲ್ಲುತ್ತದೆ.
  • ಅಧಿಕ ಇಳುವರಿ ಬರುತ್ತದೆ.
  • ಭಾರತೀಯ ಭತ್ತ ತಳಿ ಸಂಶೋಧನಾ ಸಂಸ್ಥೆ ನಡೆಸಿದ ಇಳುವರಿ ಪರೀಕ್ಷೆಯಲ್ಲಿ ‘ಸಹ್ಯಾದ್ರಿ ಕೆಂಪು ಮುಕ್ತಿ’ ತಳಿ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ. 69 ವಿವಿಧ ತಳಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
  • ‘ಇದು ಜ್ಯೋತಿ ಭತ್ತಕ್ಕೆ ಪರ್ಯಾಯ.
  • ಬೆಂಕಿ ರೋಗಕ್ಕೆ ಬಹಳಷ್ಟು ಪ್ರತಿರೋಧ ಗುಣಹೊಂದಿದೆ.
  • ಈ ತಳಿಯ ಭತ್ತದ ಸಸಿ 10 ದಿನ ನೀರಿನಲ್ಲಿದ್ದರೂ ತಾಳಿಕೆಯ ಶಕ್ತಿ ಹೊಂದಿದೆ’.