Published on: October 6, 2021

ಸುದ್ಧಿ ಸಮಾಚಾರ 06 ಅಕ್ಟೋಬರ್ 2021

ಸುದ್ಧಿ ಸಮಾಚಾರ 06 ಅಕ್ಟೋಬರ್ 2021

  • ಡಿಜಿಟಲ್ ಸಿಎಂ ಡ್ಯಾಶ್ ಬೋರ್ಡ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ವ್ಯವಸ್ಥೆಗಳ ಮಾದರಿಯಲ್ಲಿ ಸಿಎಂ ಡ್ಯಾಶ್ ಬೋರ್ಡ್ ನ್ನು ರಚಿಸಲಾಗಿದೆ.
  • ಹೃದಯ ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಅಳವಡಿಸುವ ಕೃತಕ ಹೃದಯ ಉಪಕರಣವನ್ನು ಮರಳಿ ಹೊರತೆಗೆಯುವುದು ಅತ್ಯಂತ ಕ್ಲಿಷ್ಟಕರ ಕ್ರಿಯೆ. ಈ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ಯಶಸ್ವಿಯಾಗಿ ನಡೆಸಿದೆ.  ಈ ಮಾದರಿಯ ಯಶಸ್ವಿ ಶಸ್ತ್ರಚಿಕಿತ್ಸೆ ದೇಶದಲ್ಲೇ ಮೊದಲಿನದ್ದಾಗಿದೆ.
  • ರಷ್ಯಾದ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಒಂದಾದ ಎಸ್ – 400 ಕ್ಷಿಪಣಿ ವ್ಯವಸ್ಥೆಯನ್ನು ಈ ವರ್ಷದ ಅಂತ್ಯದ ವೇಳೆಗೆ ವಾಯುಪಡೆಗೆ ಸೇರಿಸಲಾಗುವುದು ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.
  • ನಮ್ಮ ಸೌರಮಂಡಲದಲ್ಲಿ ಅಸ್ತಿತ್ವದಲ್ಲಿ ಇರಬಹುದಾದ 9ನೇ ಗ್ರಹ ಪ್ಲ್ಯಾನೆಟ್ ಎಕ್ಸ್ ಬಗ್ಗೆ ಈಗ ಮತ್ತೆ ಚರ್ಚೆಗಳು ಶುರುವಾಗಿವೆ. ಪ್ಲ್ಯಾನೆಟ್ ಎಕ್ಸ್ ಅಸ್ತಿತ್ವದ ಬಗ್ಗೆ ಪ್ರಬಲ ಸಾಕ್ಷಿಗಳು ದೊರೆಯುತ್ತಿದ್ದು, ಈ ಕಾಲ್ಪನಿಕ ಗ್ರಹ ನೈಜ ಗ್ರಹವಾಗಿ ನಮ್ಮ ಕಣ್ಣಮುಂದೆ ಗೋಚರವಾಗಲಿದೆಯೇ ಎಂಬ ಕುತೂಹಲ ಮೂಡಿದೆ
  • 2021ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಸೈಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್, ಪ್ಯಾರಿಸಿಯವರು ಭಾಜನರಾಗಿದ್ದಾರೆ. ಸೈಕುರೊ ಮನಾಬೆ ಮತ್ತು ಕ್ಲಾಸ್ ಹ್ಯಾಸೆಲ್ಮನ್ ಅವರಿಗೆ ಭೂಮಿಯ ಹವಾಮಾನದ ಭೌತಿಕ ಮಾದರಿಗಾಗಿ, ವ್ಯತ್ಯಾಸವನ್ನು ಪರಿಮಾಣಿಸಲು ಮತ್ತು ಜಾಗತಿಕ ತಾಪಮಾನ ಅಂದಾಜು ಸಂಶೋಧನೆಗೆ ಹಾಗೂ ಜಾರ್ಜಿಯೊ ಪ್ಯಾರಿಸಿ ಅವರಿಗೆ ಪರಮಾಣುಗಳಿಂದ ಗ್ರಹಗಳ ಮಾಪಕಗಳವರೆಗೆ ಭೌತಿಕ ವ್ಯವಸ್ಥೆಯಲ್ಲಿನ ಅಸ್ವಸ್ಥತೆ ಮತ್ತು ಏರಿಳಿತಗಳ ಪರಸ್ಪರ ಪತ್ತೆಗಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಪ್ರಶಸ್ತಿ ಘೋಷಿಸಿದೆ
  • ಅಮೆರಿಕದ ಸಂಶೋಧಕರಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೂಟಿಯನ್ ಅವರಿಗೆ ಜಂಟಿಯಾಗಿ 2021ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಚರ್ಮದಲ್ಲಿನ ಸ್ಪರ್ಶ  ಮತ್ತು ತಾಪಮಾನ ಗ್ರಾಹಕ ವ್ಯವಸ್ಥೆಯ ಕುರಿತ  ಸಂಶೋಧನೆಗಳಿಗಾಗಿ ಇಬ್ಬರಿಗೂ ಬಹುಮಾನವನ್ನು ನೀಡಲಾಗಿದೆ.