Published on: November 10, 2021

ಸುದ್ಧಿ ಸಮಾಚಾರ 10 ನವೆಂಬರ್ 2021

ಸುದ್ಧಿ ಸಮಾಚಾರ 10 ನವೆಂಬರ್ 2021

 • ನವೀನ ಸಂಶೋಧನಾ ಕಲ್ಪನೆಗಳು ಮತ್ತು ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯಕ್ಕಾಗಿ ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಸ್ವರ್ಣಜಯಂತಿ ಫೆಲೋಶಿಪ್‘ಗಳನ್ನು ನೀಡಲಾಗಿದೆ.
 • ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್(ಪಿಎಲ್ಐ) ಯೋಜನೆಯಡಿ ಸೆಮಿಕಂಡಕ್ಟರ್ ಚಿಪ್ ವಿನ್ಯಾಸಕ್ಕೆ ಪ್ರೋತ್ಸಾಹ ಧನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಿದೆ.
 • ಕೊರೊನಾ ಕಾರಣದಿಂದಾಗಿ ‘ಮನೆ ಮನೆಗೆ ಗಂಗೆ’ ಎನ್ನುವ ಮಹತ್ವದ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ವಿಳಂಬ ಮತ್ತು ಅನುದಾನದ ಕೊರತೆಯಿಂದಾಗಿ ನಿಗದಿತ ಪ್ರಗತಿ ಸಾಧಿಸುವುದು ಸಾಧ್ಯವಾಗಿಲ್ಲ.
 • ಹೊಸ ಮರಳು ನೀತಿ ಜಾರಿಗಾಗಿ ಮಾಡಿರುವ ತಿದ್ದುಪಡಿ ನಿಯಮಾವಳಿಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
 • ವಾಣಿಜ್ಯನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡ ನಡುವೆ ಸಂಚರಿಸುವ ಪ್ರಯಾಣಿಕರಿಗಾಗಿ ಬಿಆರ್ಟಿಎಸ್ ಯೋಜನೆ ಜಾರಿಗೊಳಿಸಲಾಗಿದೆ. ಆ ಬಸ್ ಗಳಿಗಾಗಿಯೇ ಪ್ರತ್ಯೇಕ ಪಥ ನಿರ್ಮಿಸಿರುವ ರಾಜ್ಯದ ಮೊದಲ ಯೋಜನೆ ಇದಾಗಿದೆ.
 • ಕೇರಳದ ಸಮತಾ ಸಂಸ್ಥೆಯು 2020ನೇ ಸಾಲಿನ ಜೀವ ಸಮೃದ್ಧಿ ಪ್ರಶಸ್ತಿಗೆ ಸಾಲು ಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡಿದೆ.ಪುರಸ್ಕಾರವನ್ನು ಸಮುದಾಯ ಕರ್ನಾಟಕ ಹಾಗೂ ಪುರೋಗಮನ ಕಲಾ ಸಾಹಿತ್ಯ ಸಂಘದ (ಪುಕಸ) ಸಹಯೋಗದಲ್ಲಿ ನೀಡಲಾಗುತ್ತಿದೆ.
 • ಖ್ಯಾತ ಪರಿಸರ ಕಾರ್ಯಕರ್ತೆ ಕೀನ್ಯಾದ ವಾಂಗಾರಿ ಮಾತಾಯಿಯವರ ಸ್ಮರಣೆಯಲ್ಲಿ ಈ ಪ್ರಶಸ್ತಿಯನ್ನು ಸಮತಾ ನೀಡುತ್ತಿದೆ.
 • ನೌಕಾಪಡೆಯ ಹಾಲಿ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.30 ರಂದು ನಿವೃತ್ತರಾಗಲಿದ್ದು, ಉಪ ಅಡ್ಮಿರಲ್ ಆರ್ ಹರಿ ಕುಮಾರ್ ನೌಕಾಪಡೆಯ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ.
 • ಗ್ಲಾಸ್ಗೋದಲ್ಲಿ ಇತ್ತೀಚೆಗೆ ನಡೆದ ಸಿಒಪಿ-26 ಹವಾಮಾನ ಶೃಂಗಸಭೆಯಲ್ಲಿ ಭಾರತ ಸ್ಥಿರ ಕೃಷಿ ನೀತಿಯ ಕ್ರಿಯಾ ಕಾರ್ಯಸೂಚಿಗೆ ಸಹಿ ಹಾಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
 • ಮಜಗಾಂವ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ನಿರ್ಮಿತ ‘ಸ್ಕಾರ್ಪಿಯಾನ್’ ಸರಣಿಯ ನಾಲ್ಕನೇ ಜಲಾಂತರ್ಗಾಮಿ ‘ಐಎನ್ಎಸ್ ವೇಲಾ’ವನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ.
 • ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಮಹನೀಯರಿಗೆ 2020ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು.