Published on: October 11, 2022

ಸುದ್ಧಿ ಸಮಾಚಾರ – 11 ಅಕ್ಟೋಬರ್ 2022

ಸುದ್ಧಿ ಸಮಾಚಾರ – 11 ಅಕ್ಟೋಬರ್ 2022

 • ಬೆಂಗಳೂರು ಮೈಸೂರು ನಗರಗಳ ನಡುವೆ ದಿನಪ್ರತಿ ಸಂಚರಿಸುವ ಟಿಪ್ಪು ಎಕ್ಸ್ ಪ್ರೆಸ್(ಇದನ್ನು 1980 ರಲ್ಲಿ ಪ್ರಾರಂಭಿಸಲಾಗಿತ್ತು) ರೈಲಿಗೆ ಒಡೆಯರ್ ಎಕ್ಸ್ ಪ್ರೆಸ್ ಎಂದು ಮರುನಾಮಕರಣ ಮಾಡಲಾಗಿದೆ. ಇದರ ಜೊತೆಗೆ ತಾಳಗುಪ್ಪ-ಮೈಸೂರು ನಡುವೆ ಸಂಚರಿಸುವ ತಾಳಗುಪ್ಪ ಎಕ್ಸ್​ಪ್ರೆಸ್ (Talaguppa Express) ರೈಲಿನ ಹೆಸರನ್ನು ಸಹ ಬದಲಾಯಿಸಿ ಕುವೆಂಪು ಎಕ್ಸ್​ಪ್ರೆಸ್ (Kuvempu)​ ಎಂದು ಮರುನಾಮಕರಣ ಮಾಡಲಾಗಿದೆ.
 • ನಾಸಾದ ಬಾಹ್ಯಾಕಾಶ ನೌಕೆ ‘ಡಾರ್ಟ್‌’, ಡಿಮಾರ್ಫೋಸ್‌ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಹ್ಯಾಕಾಶಲ್ಲಿ ಸಾವಿರಾರು ಕಿ.ಮೀ. ವರೆಗೂ ಕ್ಷುದ್ರಗ್ರಹದಿಂದ ಹೊಮ್ಮಿದ ದೂಳು ಹಾಗೂ ಶಿಲೆಗಳ ಚೂರುಗಳು ಚದುರಿವೆ. ಈ ವಿದ್ಯಮಾನದ ಚಿತ್ರಗಳನ್ನು ಚಿಲಿಯಲ್ಲಿರುವ ದೂರದರ್ಶಕ ಸೆರೆಹಿಡಿದಿದೆ.
 • ನೊಬೆಲ್ ಶಾಂತಿ ಪ್ರಶಸ್ತಿ: ಅ) ಬೆಲಾರಸ್ನ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬಿಲಿಯಾಟ್ಸ್ಕಿ ಆ)ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ ಇ)ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್
 • ನೊಬೆಲ್ ಸಾಹಿತ್ಯ ಪ್ರಶಸ್ತಿ: ಫ್ರೆಂಚ್ ನ  ಬರಹಗಾರ್ತಿ ಅನ್ನಿ ಎರ್ನಾಕ್ಸ್
 • ನೊಬೆಲ್ ರಾಸಾಯನ ವಿಜ್ಞಾನ ವಿಭಾಗದ ಪ್ರಶಸ್ತಿ: ಅ) ಕ್ಯಾರೊಲಿನ್ ಆರ್ ಬರ್ಟೊಝಿ ಆ) ಕೆ ಬ್ಯಾರಿ ಶಾರ್ಪ್ಲೆಸ್ ಇ)ಡೆನ್ಮಾರ್ಕಿನ ಮಾರ್ಟೆನ್ ಮೆಲ್ಡಾಲ್
 • ನೊಬೆಲ್ ಭೌತಶಾಸ್ತ್ರ ವಿಭಾಗದ ಪ್ರಶಸ್ತಿ: ಅ) ಅಲೈನ್ ಆಸ್ಪೆಕ್ಟ್ ಆ) ಜಾನ್ ಎಫ್ ಕ್ಲೌಸರ್ ಇ) ಆಂಟನ್ ಝೈಲಿಂಗರ್
 • ವೈದ್ಯಕೀಯ ಕ್ಷೇತ್ರ : ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ
 • ಅಮೆರಿಕ ಸರ್ಕಾರ, NATOಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನವನ್ನು ಕೈ ಬಿಟ್ಟಿದೆ “1961ರ ವಿದೇಶಿ ಸಹಾಯ ಕಾಯಿದೆಯ ಸೆಕ್ಷನ್ 517 ಸೇರಿದಂತೆ, ಅಮೇರಿಕ ಸಂವಿಧಾನ ಮತ್ತು ಕಾನೂನುಗಳ ಅಧ್ಯಕ್ಷರ ಅಧಿಕಾರದ ಮೂಲಕ ಅಫ್ಘಾನಿಸ್ತಾನವನ್ನು ಪ್ರಮುಖ NATO ಅಲ್ಲದ ಮಿತ್ರ ರಾಷ್ಟ್ರ ಸ್ಥಾನಮಾನವನ್ನು ಈ ಮೂಲಕ ಕೊನೆಗೊಳಿಸಲಾಗಿದೆ.
 • NON-NATO ವನ್ನು ಮೊದಲ ಬಾರಿಗೆ 1987 ರಲ್ಲಿ ರಚಿಸಲಾಯಿತು. ಈ ಪಟ್ಟಿಯಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬಹ್ರೇನ್, ಬ್ರೆಜಿಲ್, ಕೊಲಂಬಿಯಾ, ಈಜಿಪ್ಟ್, ಇಸ್ರೇಲ್, ಜಪಾನ್, ಜೋರ್ಡಾನ್, ಕುವೈತ್, ಮೊರಾಕೊ, ನ್ಯೂಜಿಲೆಂಡ್, ಪಾಕಿಸ್ತಾನ, ಫಿಲಿಪೈನ್ಸ್, ಕತಾರ್, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಟುನೀಶಿಯಾ ಸೇರಿದಂತೆ ಒಟ್ಟು 19 ರಾಷ್ಟ್ರಗಳಿದ್ದವು. ಇದೀಗ ಈ ಪಟ್ಟಿಯಿಂದ ಆಫ್ಘಾನಿಸ್ತಾನವನ್ನು ಕೈ ಬಿಡಲಾಗಿದ್ದು ಇದರೊಂದಿಗೆ ಈ ಪಟ್ಟಿಯಲ್ಲಿನ ರಾಷ್ಟ್ರಗಳ ಸಂಖ್ಯೆ 18ಕ್ಕೆ ಕುಸಿದಿದೆ.
 • ಸೌದಿ ದೊರೆ ಸಲ್ಮಾನ್ ಅವರು ತಮ್ಮ ಪುತ್ರ, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ದೇಶದ ನೂತನ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
 • ಉದ್ಯೋಗಿಗಳು ತಮ್ಮ ಆಯ್ಕೆಯ ಯೂನಿಫಾರ್ಮ್ ಧರಿಸಲು ಖ್ಯಾತ ಉಧ್ಯಮಿ ರಿಚರ್ಡ್ ಬ್ರಾನ್ಸನ್ ಒಡೆತನದ ವರ್ಜಿನ್ ಅಟ್ಲಾಂಟಿಕ್ ವಿಮಾನಯಾನ ಸಂಸ್ಥೆ ಅವಕಾಶ ಒದಗಿಸಿದ್ದು, ತನ್ನ ಸಿಬ್ಬಂದಿಗೆ ಯಾವ ಸಮವಸ್ತ್ರವನ್ನು ಧರಿಸಬೇಕೆಂಬ ಆಯ್ಕೆಯನ್ನು ನೀಡುವ ಮೂಲಕ ತನ್ನ ಲಿಂಗ ಗುರುತಿನ ನೀತಿಯನ್ನು ನವೀಕರಿಸಿದ್ದು, ಉದ್ಯೋಗಿಗಳಿಗೆ ಲಿಂಗ ಸಮವಸ್ತ್ರವನ್ನು ಧರಿಸುವ ಅಗತ್ಯವನ್ನು ತೆಗೆದುಹಾಕಿದೆ. ಏರ್‌ಲೈನ್ಸ್ ತನ್ನ ಸಿಬ್ಬಂದಿ ಮತ್ತು ಗ್ರಾಹಕರ ವೈಯಕ್ತಿಕತೆ ಆಯ್ಕೆಯನ್ನು ಗೌರವಿಸಲು ಬಯಸುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.