Published on: September 16, 2021

ಸುದ್ಧಿ ಸಮಾಚಾರ 16 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 16 ಸೆಪ್ಟೆಂಬರ್ 2021

  • ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿನ ವಾಹನಗಳಿಗೆ ಹಂತ ಹಂತವಾಗಿ ಸಾಂದ್ರೀಕೃತ ನೈಸರ್ಗಿಕ ಅನಿಲ(ಸಿಎನ್ ಜಿ) ಬಳಕೆ ಮಾಡಲು ಉತ್ತೇಜಿಸಲು ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ ಹೊಸ ಯೋಜನೆ ಪ್ರಾರಂಭಿಸಿದೆ.
  • ದೈನಂದಿನ ಸಾಮಾನ್ಯ ಮಾಹಿತಿಗಳ ಬಗ್ಗೆಯೇ ದೇಶೀಯ ಭಾಷೆಗಳಲ್ಲಿ ಅನುವಾದಗಳು ಸಮರ್ಪಕವಾಗಿರದೇ ಇರುವ ಸಮಸ್ಯೆಗಳಿವೆ. ಇದಕ್ಕೆ ಪರಿಹಾರವೆಂಬಂತೆ ವಿದ್ಯಾರ್ಥಿಗಳಿಗೆ ಆಯಾ ಭಾಷೆಗಳಲ್ಲಿ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ‘ಉಡಾನ್’ ಎಂಬ ಯೋಜನೆಯೊಂದಕ್ಕೆ ಭಾರತೀಯ ತಂತ್ರಜ್ಞಾನ ಸಂಸ್ಥೆ- ಬಾಂಬೆ (ಐಐಟಿ)  ಚಾಲನೆ ನೀಡಿದೆ.
  • ಮುಂಬೈನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿದ್ದಾರೆ.
  • ಪ್ರಧಾನಿ ಮೋದಿಯವರು ಹೊಸ ಚಾನೆಲ್ ಸಂಸದ್ ಟಿವಿಯನ್ನು ಉದ್ಘಾಟಿಸಲಿದ್ದಾರೆ. ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ ಸಂಸದ್ ಟಿವಿ ಹೆಸರಿನ ಚಾನೆಲ್ ಆರಂಭಿಸಲಾಗುತ್ತಿದೆ. ಉಭಯ ಸದನಗಳ ಕಾರ್ಯಾಚರಣೆ ಕುರಿತು ಸಂಸದ್ ಟಿವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ನಿವೃತ್ತ ಐಎಎಸ್ ಅಧಿಕಾರಿ ಮತ್ತು ಜವಳಿ ಸಚಿವಾಲಯದ ಕಾರ್ಯದರ್ಶಿ ರವಿ ಕಪೂರ್ ಅವರು ಸಂಸದ್ ಟಿವಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
  • ಟೆಲಿಕಾಂ ಸುಧಾರಣೆಗಳಿಗೆ ಕೇಂದ್ರ ಸಚಿವ ಸಂಪುಟ ಸೆ.15 ರಂದು ಅನುಮೋದನೆ ನೀಡಿದ್ದು, ಪರಿಹಾರ ಪ್ಯಾಕೇಜ್ ಗಳನ್ನೂ ಈ ಕ್ಷೇತ್ರಕ್ಕೆ ಘೋಷಣೆ ಮಾಡಲಾಗಿದೆ.
  • ಒಡಿಶಾದ ಸಿಮಿಲಿಪಾಲ್ನಲ್ಲಿ ಕಾಣಿಸಿಕೊಂಡಿದ್ದ ‘ಕಪ್ಪು ಹುಲಿ’ಯ ಹಿಂದಿನ ರಹಸ್ಯವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಜೀನ್ನಲ್ಲಿ ಉಂಟಾದ ಒಂದು ರೂಪಾಂತರದಿಂದ ಹುಲಿಯ ಮೈ ಮೇಲಿನ ಪಟ್ಟೆಯಲ್ಲಿ ವ್ಯತ್ಯಾಸವಾಗಿ, ಅದು ಪೂರ್ತಿಯಾಗಿ ಹರಡಿದ್ದರಿಂದ ಸಹಜ ಬಣ್ಣ ಮರೆಯಾಗಿ, ಹುಲಿ ಪೂರ್ತಿಯಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ.
  • ಪ್ರತಿವರ್ಷ ಸೆಪ್ಟೆಂಬರ್ 16 ಅನ್ನು ವರ್ಲ್ಡ್ ಓಜೋನ್ ಡೇ ಎಂದು ಆಚರಿಸಲಾಗುತ್ತದೆ. ಓಜೋನ್ ಪದರ ಉಳಿಸಿ ಅಭಿಯಾನದ ಒಂದು ಭಾಗವೇ ವಿಶ್ವ ಓಜೋನ್ ದಿನಾಚರಣೆಯಾಗಿದೆ.