Published on: October 17, 2022

ಸುದ್ಧಿ ಸಮಾಚಾರ – 17 ಅಕ್ಟೋಬರ್ 2022

ಸುದ್ಧಿ ಸಮಾಚಾರ – 17 ಅಕ್ಟೋಬರ್ 2022

  • ದೇಶದ ಕೆಲ ರಾಜ್ಯಗಳು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳ ದೇವಸ್ಥಾನಗಳಲ್ಲಿ ಈಗಲೂ ಮುಂದುವರಿದಿರುವ ದೇವದಾಸಿ ಪದ್ಧತಿನಿರ್ಮೂಲನೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ವರದಿ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ಸಿ) ನೋಟಿಸ್ ಜಾರಿ ಮಾಡಿದೆ.
  • ಜಲಾಂತರ್ಗಾಮಿ ‘ಐಎನ್ಎಸ್ ಅರಿಹಂತ’ದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (ಎಸ್ಎಲ್ಬಿಎಂ) ಬಂಗಾಳ ಕೊಲ್ಲಿಯಲ್ಲಿ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ
  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1980 ರ ದಶಕದಲ್ಲಿ ಅಭಿವೃದ್ಧಿಪಡಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಗೆ ಪರ್ಯಾಯವಾಗಿ ಹೊಸ ರಾಕೆಟ್ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಇಸ್ರೋದ ಹಾಲಿ ವರ್ಕ್‌ಹಾರ್ಸ್ ಉಡಾವಣಾ ನೌಕೆ PSLV ಬದಲಿಗೆ ನೆಕ್ಸ್ಟ್ ಜನರೇಷನ್ ಲಾಂಚ್ ವೆಹಿಕಲ್ (ಎನ್‌ಜಿಎಲ್‌ವಿ) ಹೆಸರಿನ ರಾಕೆಟ್ ಅನ್ನು ಅಭಿವೃದ್ಧಿಪಡಿಸಲಾತ್ತಿದೆ
  • ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 107 ನೇ ಸ್ಥಾನದಲ್ಲಿರುವುದು ಜನರಿಗೆ ಆಹಾರ ಭದ್ರತೆ ಮತ್ತು ಅದರ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸದ ರಾಷ್ಟ್ರ ಎಂಬ ದೇಶದ ವರ್ಚಸ್ಸನ್ನು ಕಳಂಕಗೊಳಿಸುವ ನಿರಂತರ ಪ್ರಯತ್ನದ ಭಾಗವಾಗಿದೆ ಮತ್ತು ಹಸಿವು ಸೂಚ್ಯಂಕ ದೋಷಪೂರಿತ ಮಾನದಂಡವಾಗಿದೆ ಎಂದು ಕೇಂದ್ರ ರ್ಕಾರ ಪ್ರತಿಪಾದಿಸಿದೆ
  • ಏಷ್ಯಾ ಕಪ್ 2022:  ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿರುವ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ 2022ರ ಫೈನಲ್ ಪಂದ್ಯದಲ್ಲಿ ಲಂಕಾ ವಿರುದ್ಧ ಭರ್ಬರಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಮಹಿಳಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
    • ಇಲ್ಲಿಯವರೆಗೂ ಏಷ್ಯಾಕಪ್ 8 ಆವೃತ್ತಿಗಳು ನಡೆದಿದ್ದು ಇದರಲ್ಲಿ ಭಾರತ ಬರೋಬ್ಬರಿ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
    • ಇನ್ನುಳಿದಂತೆ 2018ರ ಟೂರ್ನಿಯಲ್ಲಿ ಬಾಂಗ್ಲಾದೇಶ ಚಾಂಪಿಯನ್ ಆಗಿದ್ದು ಭಾರತ ರನ್ ಅಪ್ ಆಗಿತ್ತು.