Published on: October 25, 2021

ಸುದ್ಧಿ ಸಮಾಚಾರ 25 ಅಕ್ಟೋಬರ್ 2021

ಸುದ್ಧಿ ಸಮಾಚಾರ 25 ಅಕ್ಟೋಬರ್ 2021

  • ಹೈದರಾಬಾದ್-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕವಾಗಿ ಮರುನಾಮಕರಣ ಮಾಡಿದ ರೀತಿಯಲ್ಲಿಯೇ ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕೆನ್ನುವ ಕೂಗಿಗೆ ಶೀಘ್ರದಲ್ಲಿಯೇ ಸರ್ಕಾರದ ಅಧಿಕೃತ ಮುದ್ರೆ ಬೀಳಲಿದೆ.
  • ಭಾರತೀಯ ಅಂಚೆ ಕರ್ನಾಟಕ ವೃತ್ತವು ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಹೊರತಂದಿರುವ ವಿಶೇಷ ಅಂಚೆ ಲಕೋಟೆ ಹಾಗೂ ಮೂರು ಪೋಸ್ಟ್ ಕಾರ್ಡ್ಗಳನ್ನು ನಜರಬಾದ್ನ ಅಂಚೆ ತರಬೇತಿ ಕೇಂದ್ರದಲ್ಲಿ ಬಿಡುಗಡೆ ಮಾಡಲಾಯಿತು.
  • ರೈತರಿಗೆ ನೀಡಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಶೀಘ್ರವೇ ಮೀನುಗಾರರಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಖಾತೆ ಸಹಾಯಕ ಸಚಿವ ಎಲ್.ಮುರುಗನ್ ತಿಳಿಸಿದ್ದಾರೆ
  • ಅಹಮದಾಬಾದ್: ಜಿಲ್ಲೆಯ ಗಿರ್ ಸೋಮನಾಥ್ ಜಿಲ್ಲೆಯ ರೈತರೊಬ್ಬರ ಮನೆಯಲ್ಲಿ ಐವಿಎಫ್ ತಂತ್ರಜ್ಞಾನದಡಿ ಗರ್ಭ ಧರಿಸಿದ್ದ ‘ಬನ್ನಿ’ ತಳಿಯ ಎಮ್ಮೆ ಗಂಡು ಕರುವಿಗೆ ಜನ್ಮನೀಡಿದೆ.
  • ಅಮೆರಿಕದಲ್ಲಿ ಕಚ್ಚಾ ಈರುಳ್ಳಿ ಸಾಲ್ಮೊನೆಲ್ಲಾ ಸೋಂಕಿನ ಹರಡುವಿಕೆಗೆ ಕಾರಣವಾಗಿದೆ. ಕರುಳಿನ ಕೆಲಸಕ್ಕೆ ಹಾನಿ ಮಾಡುವ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಈ ಕಳಪೆ ಗುಣಮಟ್ಟದ ಈರುಳ್ಳಿಯಿಂದ ಪ್ರಸರಿಸಿದೆ ಎನ್ನಲಾಗಿದೆ.
  • ಪಿ.ಎಸ್. ವಿನೋದ್ ರಾಜ್ ನಿರ್ದೇಶನದ  ‘ಕೂಳಂಗಳ್’ ತಮಿಳು ಚಿತ್ರ  94ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ಅಧಿಕೃತವಾಗಿ ಎಂಟ್ರಿಯಾಗಿದೆ.