Published on: December 27, 2021

ಸುದ್ಧಿ ಸಮಾಚಾರ 27 ಡಿಸೆಂಬರ್ 2021

ಸುದ್ಧಿ ಸಮಾಚಾರ 27 ಡಿಸೆಂಬರ್ 2021

  • ರಾಜ್ಯಾದ್ಯಂತ ಮಣ್ಣಿನಲ್ಲಿ ಅಡಗಿರುವ, ಅಳಿವಿನಂಚಿಗೆ ತಲುಪುತ್ತಿರುವ 25ರಿಂದ 30ಸಾವಿರ ಸ್ಮಾರಕಗಳಿದ್ದರೂ, ಸರಕಾರದಿಂದ ಸಂರಕ್ಷಣೆ ಕಾರ್ಯ ಮಾತ್ರ ಮಂದಗತಿಯಲ್ಲಿ ನಡೆಯುತ್ತಿದೆ. ಈವರೆಗೆ ಕೇವಲ 844 ಸ್ಮಾರಕಗಳನ್ನು ಮಾತ್ರ ರಾಜ್ಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆಯಿಂದ ಪತ್ತೆ ಮಾಡಿ ಸಂರಕ್ಷಿಸಲಾಗಿದೆ. 2020-21ರ ಬಜೆಟ್‌ನಲ್ಲಿ ಐತಿಹಾಸಿಕ ದೇಗುಲ, ಪ್ರಾಚೀನ ಸ್ಥಳ, ಸ್ಮಾರಕಗಳ ಪುನರುಜ್ಜೀವನಗೊಳಿಸಲು Putatan ಸಂರಕ್ಷಣಾ ಯೋಜನೆ ಘೋಷಣೆಗೊಂಡಿತ್ತು.
  • ವಿವಿಧ ಕ್ಷೇತ್ರಗಳಲ್ಲಿ ರಾಜ್ಯಗಳ ಆಡಳಿತ ವ್ಯವಸ್ಥೆ, ವ್ಯವಸ್ಥೆಯಲ್ಲಿನ ಸುಧಾರಣೆಗಳ ಮೇಲೆ ಬೆಳಕು ಚೆಲ್ಲುವ buy modafinil sample ಉತ್ತಮ ಆಡಳಿತ ಸೂಚ್ಯಂಕ 2021 ವರದಿಯನ್ನು ಕೇಂದ್ರ ಸರ್ಕಾರವು  ಉತ್ತಮ ಆಡಳಿತ ದಿನವಾದ ಡಿ.25 ಬಿಡುಗಡೆ ಮಾಡಿದೆ. ಸಮಗ್ರ ಪಟ್ಟಿಯಲ್ಲಿ, ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 5.109 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಗುಜರಾತ್ (5.662), ಮಹಾರಾಷ್ಟ್ರ(5.425) ಹಾಗೂ ಗೋವಾ(5.348) ರಾಜ್ಯಗಳು ಮೊದಲ 3 ಸ್ಥಾನ ಪಡೆದುಕೊಂಡಿವೆ.
  • ಬ್ರಹ್ಮಾಂಡ ಸೃಷ್ಟಿಯ ರಹಸ್ಯ ಭೇದಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿವೃದ್ಧಿಪಡಿಸಿರುವ ವಿಶ್ವದ ಬೃಹತ್ ಹಾಗೂ ಬಲಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್ ‘ಜೇಮ್ಸ್ ವೆಬ್’ ಅನ್ನು ಉಡಾವಣೆ ಮಾಡಲಾಗಿದೆ.
  • ಖಗೋಳಶಾಸ್ತ್ರಜ್ಞರ ತಂಡವೊಂದು ಸುಮಾರು 70 ಹೊಸ ರೋಗ್ ಪ್ಲ್ಯಾನೆಟ್ಗಳ ಗುಚ್ಛವೊಂದನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೋಗ್ ಪ್ಲ್ಯಾನೆಟ್ಗಳ ಗುಚ್ಛ ಭೂಮಿಯಿಂದ ಸುಮಾರು 420 ಜ್ಯೋತಿರ್ವರ್ಷ ದೂರದಲ್ಲಿದ್ದು, ಯಾವ ನಕ್ಷತ್ರಗಳ ಗುರುತ್ವ ಬಲಕ್ಕೂ ಒಳಪಡದೇ ಸ್ವತಂತ್ರ್ಯವಾಗಿ ಚಲಿಸುತ್ತಿವೆ.
  • ಐದು ಮೀಟರ್ ರೆಸಲ್ಯೂಶನ್‌ವುಳ್ಳ ಭೂಮಿಯ ಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾವನ್ನು ಹೊಂದಿರುವ ಹೊಸ ಉಪಗ್ರಹ ಝಿಯುವಾನ್‌–1 02ಇ’ವನ್ನು ಚೀನಾವು ಉಡಾವಣೆ ಮಾಡಿದೆ
  • ರೈಲ್ವೆ ಹಳಿ ಮತ್ತು ರಸ್ತೆ ಮೇಲೆ ಚಲಿಸಬಲ್ಲಂತಹ ವಿಶ್ವದ ಮೊದಲ ದ್ವಿ ಮಾದರಿಯ ವಾಹನವನ್ನು ಜಪಾನ್ ಪರಿಚಯಿಸಿದೆ. ಈ ವಾಹನ ನೋಡಲು ಮಿನಿಬಸ್ ನಂತೆ ಕಾಣುತ್ತದೆ ಮತ್ತು ರಸ್ತೆ ಮೇಲೆ ಸಾಮಾನ್ಯ ರಬ್ಬರ್ ಟೈರ್‌ಗಳಲ್ಲಿ ಚಲಿಸುತ್ತದೆ. ಈ ವಾಹನ  ಕೆಳಭಾಗದಲ್ಲಿ ಉಕ್ಕಿನ ಚಕ್ರಗಳನ್ನು ಹೊಂದಿದ್ದು ಅದು ರೈಲು ಹಳಿಗಳನ್ನು ಹೊಡೆದಾಗ ಇಳಿಯುತ್ತದೆ. ಇದೇ ಈ ವಾಹನದ ವೈಶಿಷ್ಟವಾಗಿದೆ.
  • ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ವಿರುದ್ಧ ಹೋರಾಟ ನಡೆಸಿದ ಅಗ್ರಗಣ್ಯರಲ್ಲಿ ಒಬ್ಬರಾದ, ನೊಬೆಲ್‌ ಶಾಂತಿ ಪುರಸ್ಕೃತ ಡೆಸ್ಮಂಡ್‌ ಟುಟು ನಿಧನರಾಗಿದ್ದಾರೆ.