Published on: September 27, 2022

ಸುದ್ಧಿ ಸಮಾಚಾರ – 27 ಸೆಪ್ಟೆಂಬರ್ 2022

ಸುದ್ಧಿ ಸಮಾಚಾರ – 27 ಸೆಪ್ಟೆಂಬರ್ 2022

 • ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾರಂಭಿಸಿರುವ ಎಕ್ಸ್ಪ್ರೆಸ್ ಕ್ಲಿನಿಕ್ ದೇಶಕ್ಕೆ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ನಗರದ 20 ಕಡೆಗಳಲ್ಲಿ ಇದೆ ಮಾದರಿಯ ಕ್ಲಿನಿಕ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು

 • ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿಸಂರಕ್ಷಿತ ಪ್ರದೇಶದಲ್ಲಿ (ಬಿಆರ್ಟಿ) ಹಲ್ಲಿಯ ಹೊಸ ಪ್ರಭೇದ (‘ಉಮಾಶಂಕರ್ ಕುಬ್ಜ ಹಲ್ಲಿ’)ಪತ್ತೆಯಾಗಿದೆ. ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ದಿ ಎನ್ವಿರಾನ್ಮೆಂಟ್ (ಏಟ್ರೀ) ಸಂಶೋಧಕ ಡಾ.ಅರವಿಂದ್ ಎನ್.ಎ. ಹಾಗೂ ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್ ಅವರು ಹಲ್ಲಿಯ ಹೊಸ ಪ್ರಬೇಧವನ್ನು ಪತ್ತೆ ಮಾಡಿದ್ದು, ಅಧ್ಯಯನ ನಡೆಸಿ ಅದನ್ನು ‘ಕುಬ್ಜ ಹಲ್ಲಿ’ ಎಂದು ಗುರುತಿಸಿದ್ದಾರೆ.
 • ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನದಂದು (ಸೆಪ್ಟೆಂಬರ್ 15) ಭಾರತದಲ್ಲಿ ಪ್ರತಿ ವರ್ಷ ಎಂಜಿನಿಯರ್ಗಳ ದಿನ ಆಚರಿಸಲಾಗುತ್ತದೆ. ಈ ದಿನ ವಿಶೇಷವಾಗಿ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಸ್ಮರಿಸುವುದು ಹಾಗೂ ಇಂಜಿನಿಯರ್ಗಳ ಕೊಡುಗೆಯ ಬಗ್ಗೆ ಸಮಾಜಕ್ಕೆ ತಿಳಿಸಿಕೊಡುವ ಕಾರ್ಯಕ್ರಮಗಳು ದೇಶದ ತುಂಬ ನಡೆಯುತ್ತವೆ.
 • ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂಸೇವಕಿ ರಾಷ್ಟ್ರ ಪ್ರಶಸ್ತಿಗೆ ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿನಿ ಕುಡ್ಲಾದ ಕುವರಿ ರಶ್ಮಿ ಆಯ್ಕೆಯಾಗಿದ್ದಾರೆ.
 • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತದ ಸಾಂಪ್ರದಾಯಿಕ ಅಥವಾ ಪಾರಂಪರಿಕ ಜ್ಞಾನದ ಡಿಜಿಟಲ್ ಲೈಬ್ರರಿಗಳ ಡೇಟಾಬೇಸ್ ಉಪಯೋಗಿಸಲು ಪೇಟೆಂಟ್ ಕಚೇರಿಗಳ ಜೊತೆಗೆ ಸಾಮಾನ್ಯ ಜನರಿಗೂ ಅನುಮತಿ ನೀಡಲಾಯಿತು.
 • ಮಹಾರಾಷ್ಟ್ರದಲ್ಲಿ ಖ್ಯಾತ ಔಷಧ ತಯಾರಿಕಾ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಪೌಡರ್ ಉತ್ಪಾದನಾ ಪರವಾನಗಿ ರದ್ದು ಮಾಡಲಾಗಿದೆ.
 • ಚುನಾವಣೆಗೆ ಸ್ಪರ್ಧಿಸುವುದು ವ್ಯಕ್ತಿಯ ಮೂಲಭೂತ ಹಕ್ಕೂ ಅಲ್ಲ, ಕಾನೂನಿನ ಅನ್ವಯ ಸಾಮಾನ್ಯ ಹಕ್ಕೂ ಅಲ್ಲ, ಇದು ಶಾಸನದಿಂದ ನೀಡಲ್ಪಟ್ಟ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.
 • ಮೃತ ಸೈನಿಕರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆಯುದ್ಧ ಹಾಗೂ ಯುದ್ಧದ ಮಾದರಿ ಕಾರ್ಯಾಚರಣೆಗಳಲ್ಲಿ ಮೃತಪಟ್ಟ, ರಾಜ್ಯದ ಮೂಲನಿವಾಸಿ ಸೈನಿಕರ ಅವಲಂಬಿತ ಕುಟುಂಬದ ಒಬ್ಬರು ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿದೆ.
 • ಶೆಫಾಲಿ ರಾಜ್ದಾನ್‌ ನೆದರ್ಲೆಂಡ್ಸ್‌ಗೆ ಅಮೆರಿಕದ ರಾಯಭಾರಿ: ಭಾರತ ಮೂಲದ ಅಮೆರಿಕನ್, ರಾಜಕೀಯ ಕಾರ್ಯಕರ್ತೆ ಶೆಫಾಲಿ ರಾಜ್ದಾನ್ ದುಗ್ಗಲ್ ಅವರನ್ನು ನೆದರ್ಲ್ಯಾಂಡ್ಸ್‌ಗೆ ತನ್ನ ರಾಯಭಾರಿಯಾಗಿ ಅಮೆರಿಕ ನಿಯೋಜಿಸಿದೆ.ಕಾಶ್ಮೀರಿ ಪಂಡಿತ ಸಮುದಾಯದವರಾದ ರಜ್ದಾನ್ ದುಗ್ಗಲ್ ಅವರು ಹರಿದ್ವಾರದಲ್ಲಿ ಜನಿಸಿದ್ದರು. ಮಿಯಾಮಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ರಜ್ದಾನ್ ದುಗ್ಗಲ್, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ್ದಾರೆ. ರಜ್ದಾನ್ ದುಗ್ಗಲ್ ಒಬ್ಬ ಅನುಭವಿ ರಾಜಕೀಯ ಕಾರ್ಯಕರ್ತೆ, ಮಹಿಳಾ ಹಕ್ಕುಗಳ ವಕೀಲೆ ಮತ್ತು ಮಾನವ ಹಕ್ಕುಗಳ ಪ್ರತಿಪಾದಕಿ. ಅವರು ಅಮೆರಿಕದ ‘ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಕೌನ್ಸಿಲ್‌’ಗೂ ನೇಮಕಗೊಂಡಿದ್ದರು. ಪಾಶ್ಚಿಮಾತ್ಯ ಪ್ರಾದೇಶಿಕ ಸಲಹೆಗಾರರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.
 • ವಿಶ್ವ ಕುಸ್ತಿ: ವಿನೇಶಾ ಫೋಗಾಟ್‌: ಭಾರತದ ವಿನೇಶಾ ಫೋಗಾಟ್‌53 ಕೆಜಿ ವಿಭಾಗದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಅವರು ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಪದಕ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಶ್ರೇಯ ಸಂಪಾದಿಸಿದರು. 28 ವರ್ಷದ ವಿನೇಶಾ ಅವರಿಗೆ ಕಜಕಸ್ತಾನದ ನೂರ್ ಸುಲ್ತಾನ್‌ನಲ್ಲಿ 2019ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಕಂಚು ಒಲಿದಿತ್ತು.
 • ಕೆನ್ಯಾದ ನೂತನ ಅಧ್ಯಕ್ಷರಾಗಿ ವಿಲಿಯಂ ರುಟೊ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆಗಸ್ಟ್ 9ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಲಿಯಂ ಅವರು, ವಿರೋಧಪಕ್ಷದ ನಾಯಕ ರೈಲಾ ಒಡಿಂಗಾ ಅವರ ವಿರುದ್ಧ ಗೆಲುವು ಸಾಧಿಸಿದ್ದರು.