Published on: September 28, 2021

ಸುದ್ಧಿ ಸಮಾಚಾರ 28 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 28 ಸೆಪ್ಟೆಂಬರ್ 2021

  • ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ‘ದೇಖೋ ಮೇರಿ ದಿಲ್ಲಿ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.
  • ಏಷ್ಯಾದ ಅತ್ಯಂತ ಉದ್ದದ ಮತ್ತು ಅತಿ ಎತ್ತರದಲ್ಲಿರುವ ಜೊಜಿಲಾ ಸುರಂಗ ಮಾರ್ಗವು 2026ರಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ವರ್ಷದ ಎಲ್ಲಾ ಋತುವಿನಲ್ಲೂ ಸಂಚಾರಕ್ಕೆ ಅವಕಾಶವಿರುವ ಈ ಸುರಂಗಮಾರ್ಗವು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರಾಂತದ ನಡುವೆ ಸಂಪರ್ಕವನ್ನು ಸುಲಭಗೊಳಿಸುತ್ತದೆ.
  • ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಇಬ್ಬರು ಅಧಿಕಾರಿಗಳು ನೇಪಾಳದಲ್ಲಿನ ಮೌಂಟ್ ಮನಸ್ಲು ಪರ್ವತವನ್ನು ಅಳತೆ ಮಾಡಿದ್ದಾರೆ. ಇದು ಪ್ರಪಂಚದ ಎಂಟನೇ ಅತಿ ಎತ್ತರದ ಶಿಖರವಾಗಿದೆ.
  • ಭಾರತೀಯ ಮೃಗಾಲಯ ಸರ್ವೇಕ್ಷಣಾ ಸಂಸ್ಥೆಯು (ಝಡ್ಎಸ್ಐ) ಲಂಡನ್ನ ರಾಷ್ಟ್ರೀಯ ಇತಿಹಾಸ ಸಂಗ್ರಹಾಲಯದ (ಎನ್ಎಚ್ಎಂ) ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಒಡಂಬಡಿಕೆಯ ಅವಧಿ ಐದು ವರ್ಷಗಳು. ಪ್ರಾಣಿ ಮಾದರಿಗಳ ಸಂರಕ್ಷಣೆ, ಸಂಗ್ರಹ, ಅಧ್ಯಯನ ಕುರಿತು ಒಟ್ಟಾಗಿ ಕಾರ್ಯನಿರ್ವಹಿಸುವುದು ಹಾಗೂ ದತ್ತಾಂಶ ಮತ್ತು ಪೂರಕ ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ
  • ಭಾರತವು ಚಿಪ್ಗಳ ಕೊರತೆಯನ್ನು ಬಗೆಹರಿಸಲು ತೈವಾನ್ ಜತೆಗೆ ಚಿಪ್ಗಳ ಉತ್ಪಾದನೆಗೆ ಬೃಹತ್ ಘಟಕ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಅಂದಾಜು 55,500 ಕೋಟಿ ರೂ. ಮೊತ್ತದ ಒಪ್ಪಂದ ನಿರೀಕ್ಷಿಸಲಾಗಿದೆ.
  • ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಸೆ.27 ರಂದು ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದೆ. ಕ್ಷಿಪಣಿ- ಆಕಾಶ್ ಪ್ರೈಮ್ ಎಂದು ಇದಕ್ಕೆ ನಾಮಕರಣ ಮಾಡಲಾಗಿದ್ದು, ತನ್ನ ಮೊದಲ ಪರೀಕ್ಷೆಯಲ್ಲಿ ಶತ್ರು ಯುದ್ಧವಿಮಾನದ ಮಾದರಿಯಲ್ಲಿದ್ದ ಮಾನವ ರಹಿತ ವೈಮಾನಿಕ ಟಾರ್ಗೆಟ್ ನ್ನು ಈ ಕ್ಷಿಪಣಿ ನಾಶ ಮಾಡುವುದರಲ್ಲಿ ಯಶಸ್ವಿಯಾಗಿದೆ.