Published on: December 31, 2021

ಸುದ್ಧಿ ಸಮಾಚಾರ 31 ಡಿಸೆಂಬರ್ 2021

ಸುದ್ಧಿ ಸಮಾಚಾರ 31 ಡಿಸೆಂಬರ್ 2021

  • ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮ-2021′ ರ ಕರಡು ಪ್ರತಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕುಡಿಯುವ ನೀರಿಗೆ, ಖಾಲಿ ಪ್ರದೇಶಗಳಿಗೆ ತೆರಿಗೆ ವಿಧಿಸುವ ಪ್ರಸ್ತಾಪ ಇದೆ. ಈ ಬಗ್ಗೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
  • ಪ್ರತ್ಯೇಕ ಹಾಲು ಉತ್ಪಾದನಾ ಒಕ್ಕೂಟ ರಚಿಸಲು ಹಾವೇರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ಮೂಲ ಸಂಸ್ಥೆಯಿಂದ ವಿಭಜಿಸಿ ಪ್ರತ್ಯೇಕ ಒಕ್ಕೂಟ ರಚಿಸಲು ರಾಜ್ಯ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
  • ಕನ್ನಡದ ಡಿಎಸ್ ನಾಗಭೂಷಣ್, ಖ್ಯಾತ ಲೇಖಕಿ ನಮಿತಾ ಗೋಖಲೆ, ಟಿಎಂಸಿ ಶಾಸಕ ಬ್ರಾತ್ಯಾ ಬಸು ಮತ್ತು ಖ್ಯಾತ ಪಂಜಾಬಿ ಬರಹಗಾರ ಖಾಲಿದ್ ಹುಸೇನ್ ಸೇರಿದಂತೆ 20 ಮಂದಿಯ ಹೆಸರನ್ನು ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಘೋಷಿಸಲಾಗಿದೆ.
  • ಭಾರತ ತನ್ನ ವಾಯುಪಡೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ರಾಫೆಲ್ ಜೆಟ್ ಗಳನ್ನು ಖರೀದಿಸಿತ್ತು. ಈಗ ನೆರೆ ರಾಷ್ಟ್ರ ಪಾಕಿಸ್ತಾನ ಇದಕ್ಕೆ ಪ್ರತಿಸ್ಪರ್ಧಿಯಾಗಿ ತನ್ನ ಸಾರ್ವಕಾಲಿಕ ಪರಮಾಪ್ತ ಗೆಳೆಯ ಚೀನಾದಿಂದ 25 ಜೆ-10 ಜೆಟ್ ಖರೀದಿಸಿದೆ.