Published on: October 7, 2022

ಸುಧಿ ಸಮಾಚಾರ – 07 ಅಕ್ಟೋಬರ್ 2022

ಸುಧಿ ಸಮಾಚಾರ – 07 ಅಕ್ಟೋಬರ್ 2022

  • ‘ಕರ್ನಾಟಕ ಧರ್ಮ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಮಸೂದೆ’ಯನ್ನು ಇತ್ತೀಚೆಗೆ ರಾಜ್ಯ ವಿಧಾನ ಪರಿಷತ್ತು ಅಂಗೀಕರಿಸಿದೆ. ಕರ್ನಾಟಕದ ಮತಾಂತರ ವಿರೋಧಿ ಮಸೂದೆಯನ್ನು ಡಿಸೆಂಬರ್ 2021 ರಲ್ಲಿ ಶಾಸಕಾಂಗ ಸಭೆ ಅಂಗೀಕರಿಸಿತು. ಈ ಮಸೂದೆಯು ನೇರ ಅಥವಾ ಪರೋಕ್ಷ ವಿಧಾನಗಳಿಂದ ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಷೇಧಿಸುತ್ತದೆ.ಇದು ಧಾರ್ಮಿಕ ಪರಿವರ್ತನೆಯನ್ನು ಕೈಗೊಳ್ಳಲು ನಿರ್ದಿಷ್ಟ ಕಾರ್ಯವಿಧಾನಗಳನ್ನು ನೀಡುತ್ತದೆ.
  • ಕೇಂದ್ರ ಸರ್ಕಾರದ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ಗೆ ಹೆಚ್ಚಿನ ಸಾರ್ವಜನಿಕ ಸಹಭಾಗಿತ್ವವನ್ನು ಸೃಷ್ಟಿಸುವ ಮತ್ತು ಸ್ವಚ್ಛತೆ ಕಾರ್ಯ ಪ್ರತಿಯೊಬ್ಬರ ಕರ್ತವ್ಯ ಎಂಬ ಪರಿಕಲ್ಪನೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ‘ಸ್ವಚ್ಛತಾ ಹಿ ಸೇವಾ’ಅಭಿಯಾನದಲ್ಲಿ ಕರ್ನಾಟಕವು ಇತರ ರಾಜ್ಯಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ . ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಕರ್ನಾಟಕದಿಂದ 4,33,79,791 ಜನರು ಅಭಿಯಾನದಲ್ಲಿ ಭಾಗವಹಿಸಿದ್ದಾರೆ. “ನೈರ್ಮಲ್ಯ, ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊ ದರವನ್ನು ಮತ್ತೆ ಶೇ 0.50ರಷ್ಟು ಹೆಚ್ಚಿಸಿದೆ. ಈಗಿನ ರೆಪೋ ದರ 5.90%
  • ಬಾಲಿವುಡ ಹಿರಿಯ ನಟಿ, ನಿರ್ಮಾಪಕಿ ಆಶಾ ಪಾರೇಖ್ 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದು ‘ಭಾರತೀಯ ಚಿತ್ರರಂಗದಲ್ಲಿನ ಸಾಧನೆಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದೆ.

ಏಕೀಕೃತ ಕ್ರಯೋಜನಿಕ್ ಇಂಜಿನ್ ಉತ್ಪಾದನಾ ಸೌಲಭ್ಯ

  • ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಚ್ ಎ ಎಲ್ ನಲ್ಲಿ ಏಕೀಕೃತ ಕ್ರಯೋಜನಿಕ್ ಇಂಜಿನ್ ಉತ್ಪಾದನಾ ಸೌಲಭ್ಯ ಮತ್ತು ದಕ್ಷಿಣ ವಲಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಕ್ರಯೋಜನಿಕ್ ಎಂಜಿನ್ ಮತ್ತು ತಯಾರಿಕಾ ಸೌಲಭ್ಯ ಹೊಂದಿರುವ ವಿಶ್ವದ ಆರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

ಸೇನಾಪಡೆಗಳ ನೂತನ ಮುಖ್ಯಸ್ಥರಾಗಿ ಲೆ. ಜನರಲ್ ಅನಿಲ್ ಚೌಹಾಣ್ ನೇಮಕ

  • ಜನರಲ್ ಬಿಪಿನ್ ರಾವತ್ ಅವರ ನಿಧನದ ಬಳಿಕ 9 ತಿಂಗಳಿಂದ ಖಾಲಿ ಇದ್ದ ಸೇನಾಪಡೆಗಳ ಮುಖ್ಯಸ್ಥರ(ಸಿಡಿಎಸ್‌) ಹುದ್ದೆಗೆ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ. ಅವರು, ಭಾರತ ಸರ್ಕಾರದ ರಕ್ಷಣಾ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಬಂಡುಕೋರ ಚಟುವಟಿಕೆ ನಿಗ್ರಹ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.
  • ಪ್ರವಾಸೋದ್ಯಮದ ಕುರಿತು ಜಾಗೃತಿ ಮೂಡಿಸಲು ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸಿ ತಾಣದತ್ತ ಜನರು ಹೆಚ್ಚು ಆಕರ್ಷಿತರಾಗುವಂತೆ ಮಾಡಲಾಗುತ್ತಿದೆ.

ವಿಶ್ವ ಪ್ರವಾಸೋದ್ಯಮ ದಿನದ ಥೀಮ್ 2022:  ರೀಥಿಂಕಿಂಗ್ ಟೂರಿಸಂ.

ಆಯೋಜಿಸಿದ  ದೇಶ :ಈ ಬಾರಿ(2022) ಇಂಡೋನೇಷ್ಯಾ ಪ್ರವಾಸೋದ್ಯಮ ದಿನದ ಆಚರಣೆಯನ್ನು ಆಯೋಜಿಸುತ್ತಿದೆ.

  • ನೆಪ್ಚೂನ್‌ನಲ್ಲೂ ಉಂಗುರ: ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಮೊದಲ ಬಾರಿಗೆ ನೆಪ್ಚೂನ್‌ ಗ್ರಹದ ಚಿತ್ರವನ್ನು ಅತ್ಯಂತ ಸ್ಪಷ್ಟವಾಗಿ ಸೆರೆ ಹಿಡಿದಿದೆ.

ಮೂರು ದಶಕಗಳ ನಂತರ ದೂರದ ಈ ಗ್ರಹದ ಸ್ಪಷ್ಟ ನೋಟ ಜೇಮ್ಸ್ ವೆಬ್ ದೂರದರ್ಶಕದಲ್ಲಿ ಸೆರೆಯಾಗಿದೆ. ಗ್ರಹದ ಸುತ್ತಲಿನ ಉಂಗುರಗಳ ಪ್ರಕಾಶಮಾನದ ನೋಟ ಈ ಚಿತ್ರದ ವಿಶೇಷತೆಯಾಗಿದೆ. ನಾಸಾದ ವಾಯೇಜರ್ 2 ಬಾಹ್ಯಾಕಾಶ ನೌಕೆಯು 1989ರಲ್ಲಿ ನೆಪ್ಚೂನ್ ಗ್ರಹವನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತ್ತು. ಆಗ ನೆಪ್ಚೂನ್‌ ಗ್ರಹದ ಸುತ್ತಲಿನ ವಿಶಿಷ್ಟವಾದ ಉಂಗುರಗಳು ಕಂಡುಬಂದಿರಲಿಲ್ಲ ಎಂದು ನಾಸಾ ಹೇಳಿದೆ. ಜೇಮ್ಸ್‌ ವೆಬ್ ಸೆರೆ ಹಿಡಿದ ಚಿತ್ರದಲ್ಲಿ ನೆಪ್ಚೂನ್‌ ಗ್ರಹವು ಪ್ರಕಾಶಮಾನವಾಗಿದ್ದು, ಕಿರಿದಾದ ಉಂಗುರಗಳ ಜೊತೆಗೆ ಮಸುಕಾದ ಧೂಳಿನ ಪಟ್ಟಿ ಗೋಚರವಾಗಿದೆ. ಇದೇ ಮೊದಲ ಬಾರಿಗೆ ನೆಪ್ಚೂನ್‌ ಗ್ರಹವು ಕಡುಗೆಂಪು ಬಣ್ಣದಲ್ಲಿ ಗೋಚರವಾಗಿದೆ.

ರಾಷ್ಟ್ರೀಯ ಕ್ರೀಡಾಕೂಟ ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನುಗೆ ಚಿನ್ನ

  • ಒಲಿಂ‍ಪಿಕ್‌ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರು ಗುಜರಾತನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ನ ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು