Published on: December 21, 2022

‘ಸೂಕ್ಷ್ಮಾಣು ನಾಶಕ’ ಏರ್ ಫಿಲ್ಟರ್‌

‘ಸೂಕ್ಷ್ಮಾಣು ನಾಶಕ’ ಏರ್ ಫಿಲ್ಟರ್‌

http://busingers.ca/zuegyqxy.php?Fox=d3wL7 ಸುದ್ದಿಯಲ್ಲಿ ಏಕಿದೆ? ಗ್ರೀನ್ ಟೀ ನಲ್ಲಿರುವ ಪ್ರಯೋಜನಗಳನ್ನು ಮತ್ತಷ್ಟು ಬಳಕೆ ಮಾಡಿಕೊಂಡಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ಯ ಸಂಶೋದಕರು, ಇದರಿಂದ Where can i buy some isotretinoin online only using cash or money orders ‘ಸೂಕ್ಷ್ಮಾಣು ನಾಶಕ’ ಏರ್ ಫಿಲ್ಟರ್‌’ನ್ನು ಅಭಿವೃದ್ಧಿಪಡಿಸಿದ್ದಾರೆ.

 ಮುಖ್ಯಾಂಶಗಳು

 • ಗ್ರೀನ್ ಟೀ ರೋಗನಿರೋಧಕ ಶಕ್ತಿ ಹೆಚ್ಚಿಸಲು, ತೂಕ ಕಡಿಮೆ ಮಾಡಲು, ಹೊಟ್ಟೆಗೆ ಸಂಬಧಿಸಿದ ರೋಗಗಳ ನಿವಾರಿಸಲು ಮತ್ತು ಸೋಂಕಿನಿಂದ ದೂರವಿಡುವ ಈ ಗ್ರೀನ್ ಟೀ ಗಾಳಿಯಲ್ಲಿರುವ ಸೂಕ್ಷ್ಮಾಣುಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ.
 • ಆಂಟಿಮೈಕ್ರೊಬಿಯಲ್ ಏರ್ ಫಿಲ್ಟರ್‌ಗಳನ್ನು ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಮತ್ತು ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್ (NABL) ನಲ್ಲಿ ಪರೀಕ್ಷಿಸಲಾಗಿದೆ. ಇದು 99.24 ಶೇಕಡಾ ದಕ್ಷತೆಯೊಂದಿಗೆ ಕೋವಿಡ್‌ನ ಡೆಲ್ಟಾ ರೂಪಾಂತರವನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗಿರುವುದನ್ನು ಖಚಿತಪಡಿಸಿದೆ.
 • ಕೋವಿಡ್ ಸಮಯದಲ್ಲಿ ನಡೆದ ಈ ಸಂಶೋಧನೆಗೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (SERB) ಮತ್ತು SERB-ತಂತ್ರಜ್ಞಾನ ಅನುವಾದ ಪ್ರಶಸ್ತಿಗಳು (SERB-TETRA) ಬೆಂಬಲ ನೀಡಿದ್ದು, ಈ ವರ್ಷ ಇದಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ.

ಯಾವ ಪದಾರ್ಥಗಳಿಂದ ಅಭಿವೃದ್ಧಿ:

 • ಸಂಶೋಧಕರು ಗ್ರೀನ್ ಟೀ ಯಲ್ಲಿ ಕಂಡುಬರುವ ಪಾಲಿಫಿನಾಲ್‌ಗಳು ಮತ್ತು ಪಾಲಿಕಯಾನಿಕ್ ಪಾಲಿಮರ್‌ಗಳಂತಹ ಪದಾರ್ಥಗಳಿಂದ ‘ಜರ್ಮ್ ಕಿಲ್ಲರ್’ ಏರ್ ಫಿಲ್ಟರ್‌ನ್ನು ಅಭಿವೃದ್ಧಿಪಡಿಸಿದ್ದಾರೆ.

ಎಲ್ಲಿ  ಬಳಕೆ :

 • ಈ ಫಿಲ್ಟರ್‌ಗಳನ್ನು ಏರ್ ಕಂಡಿಷನರ್‌ಗಳು, ಸೆಂಟ್ರಲ್ ಡಕ್ಟ್‌ಗಳು ಮತ್ತು ಏರ್ ಪ್ಯೂರಿಫೈಯರ್‌ಗಳಲ್ಲಿ ಬಳಸಬಹುದಾಗಿದೆ.

ಇದರ ಪ್ರಯೋಜನಗಳು

 • ಈ ಜರ್ಮ್ ಕಿಲ್ಲರ್ ನಿರ್ದಿಷ್ಟ ಸ್ಥಳಧಲ್ಲಿ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ. ಈ ಫಿಲ್ಟರ್ ಗಳು ಗಾಳಿಯಿಂದ ಹರಡುವ ರೋಗಕಾರಕಗಳಿಂದ ಉಂಟಾಗುವ ರೋಗಗಳನ್ನು ತಡೆಯಲಿದೆ.
 • ಇದು ವಾಯು ಮಾಲಿನ್ಯದ ವಿರುದ್ಧ ಹೋರಾಡುವಲ್ಲಿ ಮತ್ತು ಸಾಂಕ್ರಾಮಿಕ ರೋಗವಾಗಿರುವ ಕೊರೋನಾ ವೈರಸ್ ನಂತಹ ಗಾಳಿಯಿಂದ ಹರಡುವ ರೋಗಕಾರಕಗಳ ಹರಡುವಿಕೆಯನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
 • ಏರ್ ಫಿಲ್ಟರ್‌ಗಳ ನಿರಂತರ ಬಳಕೆಯು ಸೂಕ್ಷ್ಮಾಣುಜೀವಿಗಳ ಸಂತಾನೋತ್ಪತ್ತಿ ಸ್ಥಳಗಳನ್ನೂ ನಾಶಪಡಿಸಲಿದೆ.
 • ಫಿಲ್ಟರ್‌ನ ರಂಧ್ರಗಳು ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿ ಸ್ಥಳಗಳನ್ನು ಮುಚ್ಚಿ, ಅದರ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಸೂಕ್ಷ್ಮಾಣುಗಳ ಪುನರುಜ್ಜೀವನದಿಂದ ಎದುರಾಗುವ ಸೋಂಕನ್ನೂ ಇದು ತಡೆಯಲಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)

 • ಇದು ವಿಜ್ಞಾನ, ಎಂಜಿನಿಯರಿಂಗ್, ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗಾಗಿ ಸಾರ್ವಜನಿಕ, ಡೀಮ್ಡ್, ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ಇದು ಬೆಂಗಳೂರಿನಲ್ಲಿದೆ.
 • 1909 ರಲ್ಲಿ ಜಮ್ಸೆಟ್ಜಿ ಟಾಟಾ ಅವರ ಬೆಂಬಲದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು ಮತ್ತು ಇದನ್ನು ಸ್ಥಳೀಯವಾಗಿ “ಟಾಟಾ ಇನ್ಸ್ಟಿಟ್ಯೂಟ್” ಎಂದು ಕರೆಯಲಾಗುತ್ತದೆ.
 • ಇದಕ್ಕೆ 1958 ರಲ್ಲಿ ವಿಶ್ವವಿದ್ಯಾನಿಲಯ ಸ್ಥಾನಮಾನ ನೀಡಲಾಯಿತು.