Published on: August 1, 2023

ಹುಲಿಗಣತಿ ವರದಿ

ಹುಲಿಗಣತಿ ವರದಿ

ಸುದ್ದಿಯಲ್ಲಿ ಏಕಿದೆ? ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಬಿಡುಗಡೆಮಾಡಿರುವ ‘ಹುಲಿಗಳ ಸ್ಥಿತಿ: ಕೋ –ಪ್ರೆಡೇಟರ್ಸ್‌ ಮತ್ತು ಪ್ರೇ ಇನ್ ಇಂಡಿಯಾ–2022’ ವರದಿಯ ಪ್ರಕಾರ, ಮಧ್ಯಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಮಧ್ಯಪ್ರದೇಶದಲ್ಲಿ 2018ರಲ್ಲಿ 526 ಇದ್ದ ಹುಲಿಗಳ ಸಂಖ್ಯೆ 2022ರಲ್ಲಿ 785ಕ್ಕೆ ಏರಿದೆ.

ಮುಖ್ಯಾಂಶಗಳು

  • ಕರ್ನಾ ಟಕ 563 ಮತ್ತು ಉತ್ತರಾಖಂಡ 560 ಹುಲಿಗಳನ್ನು ಹೊಂದುವ ಮೂಲಕ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
  • ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದ ಅರಣ್ಯಗಳಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ 259 ಹುಲಿಗಳ ಸಂಖ್ಯೆ ಹೆಚ್ಚಾಗಿದೆ.

ಕರ್ನಾಟಕದ   ಸ್ಥಿತಿ

  • ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳು ಬಂಡೀಪುರ ಅರಣ್ಯದಲ್ಲಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 150 ಹುಲಿಗಳು ಆಶ್ರಯ ಪಡೆದಿವೆ. 191 ಹುಲಿಗಳು ಈ ಅರಣ್ಯವನ್ನು ಬಳಸುತ್ತಿವೆ.
  • ಎರಡನೇ ಸ್ಥಾನದಲ್ಲಿ ಮೈಸೂರು ಜಿಲ್ಲೆಯ ನಾಗರಹೊಳೆ ಅಭಯಾರಣ್ಯ ಇದೆ. ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ (ಬಿಆರ್ಟಿ) ಮೂರನೆಯ  ಸ್ಥಾನದಲ್ಲಿದೆ.

ಹುಲಿಗಳ ಸಂಖ್ಯೆ ಹೆಚ್ಚಳ:

  • ಬಂಡೀಪುರದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವರದಿಗಳೆರಡೂ ದೃಢಪಡಿಸಿವೆ. 2018ರ ಗಣತಿ ಪ್ರಕಾರ ಬಂಡೀಪುರದಲ್ಲಿ 127 ಹುಲಿಗಳಿದ್ದವು. ಅದೀಗ 150ಕ್ಕೆ ಏರಿದೆ. ಉತ್ತರಾಖಂಡದ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ (260) ನಂತರ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅರಣ್ಯ ಎಂಬ ಹೆಗ್ಗಳಿಕೆಗೂ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬಂಡೀಪುರ ಪಾತ್ರವಾಗಿದೆ.
  • ನಾಗರಹೊಳೆ ಕಾಡಿನಲ್ಲಿ 141 ವ್ಯಾಘ್ರಗಳಿದ್ದರೆ, 185 ಹುಲಿಗಳು ಈ ಕಾಡನ್ನು ಬಳಸುತ್ತಿವೆ.
  • ಬಿಆರ್ಟಿ ಅರಣ್ಯದಲ್ಲಿ 37 ವ್ಯಾಘ್ರಗಳಿವೆ. 60 ಹುಲಿಗಳು ಈ ಕಾಡನ್ನು ಬಳಸುತ್ತಿವೆ. 2018ರ ಗಣತಿಗೆ ಹೋಲಿಸಿದರೆ ಬಿಆರ್ಟಿಯಲ್ಲಿ ಹುಲಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಈ ಹಿ ದೆ 49 ಹುಲಿಗಳಿವೆ.

ನಿಮಗಿದು ತಿಳಿದಿರಲಿ

  • ಬಂಡೀಪುರ ನ್ಯಾಷನಲ್ ಪಾರ್ಕ್ ಮತ್ತು ಹುಲಿ ಅಭಯಾರಣ್ಯ, ನಾಗರಹೊಳೆ ನ್ಯಾಷನಲ್ ಪಾರ್ಕ್ ಮತ್ತು ಹುಲಿ ಅಭಯಾರಣ್ಯ, ಬಿ.ಆರ್.ಟಿ. ( ಬಿಳಿಗಿರಿ ರಂಗನಾಥ ಟೆಂಪಲ್) ಹುಲಿ ಅಭಯಾರಣ್ಯ, ಕಾಳಿ ಹುಲಿ ಅಭಯಾರಣ್ಯ, ಭದ್ರಾ ಹುಲಿಅಭಯಾರಣ್ಯ ಕರ್ನಾಟಕದಲ್ಲಿ ಒಟ್ಟು ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ.
  • ಮಧ್ಯಪ್ರದೇಶದ ಕನ್ಹಾ, ಬಾಂಧವಗಢ, ಪನ್ನಾ, ಪೆಂ ಚ್, ಸಾತ್ಪುರ ಮತ್ತು ಸಂ ಜಯ್–ದುಬ್ರಿ ಸೇರಿ ಒಟ್ಟು ಆರು ಹುಲಿ ಸಂರಕ್ಷಿತ ಪ್ರದೇಶಗಳಿವೆ.