Published on: January 26, 2023
ಹುಲಿ ಸಂತತಿ ನಿಯಂತ್ರಣ
ಹುಲಿ ಸಂತತಿ ನಿಯಂತ್ರಣ
600 mg neurontin ಸುದ್ದಿಯಲ್ಲಿ ಏಕಿದೆ? buy real Clomiphene online ಹುಲಿಗಳೂ ಸೇರಿದಂತೆ ಹಲವು ವನ್ಯಜೀವಿಗಳ ಸಂತತಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇರಳ ಸರ್ಕಾರದ ನಡೆಗೆ ಪರಿಸರವಾದಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಉದ್ದೇಶ: ವನ್ಯಜೀವಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ, ಹೆಚ್ಚುತ್ತಿರುವ ಮಾನವ–ಪ್ರಾಣಿ ಸಂಘರ್ಷದ ಘಟನೆಗಳನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇ ಶವಾಗಿದೆ.
ಮುಖ್ಯಾಂಶಗಳು
- ವಯನಾಡ್ನಲ್ಲಿ ಇತ್ತೀ ಚಿನ ದಿನಗಳಲ್ಲಿ ಒಂದಾದ ಮೇಲೊಂದು ಹುಲಿ ದಾಳಿ ಘಟನೆಗಳು ವರದಿಯಾಗಿವೆ.
- ಹುಲಿ ಸಂರಕ್ಷಣೆ ಬಗ್ಗೆ ನಡೆಸಿದ್ದ ವ್ಯಾಪಕ ಅಭಿಯಾನದಿಂದಾಗಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 2006ರಲ್ಲಿ 46 ಹುಲಿಗಳು ರಾಜ್ಯದಲ್ಲಿದ್ದವು. 2018ರಲ್ಲಿ ಇವುಗಳ ಸಂಖ್ಯೆ 190ಕ್ಕೆ ಏರಿಕೆಯಾಗಿದೆ.
- 344 ಚದರ ಕಿಲೋಮೀಟರ್ ವ್ಯಾಪ್ತಿಯ ವಯನಾಡ್ ಅಭಯಾರಣ್ಯದಲ್ಲಿ 120 ಹುಲಿಗಳಿವೆ. ರಾಜ್ಯದ ಅರಣ್ಯಾಧಿಕಾರಿಗಳ ಪ್ರಕಾರ, ವಯನಾಡ್ನಲ್ಲಿ ಹುಲಿಗಳ ಸಂತತಿ ವ್ಯಾಪಕವಾಗಿ ಹೆಚ್ಚಳ ಆಗಿಲ್ಲದಿದ್ದರೂ, ಸ್ಥಳಾಂತರ ಅಥವಾ ಕೊಲ್ಲುವ ಮೂಲಕ ಅವುಗಳ ಸಂಖ್ಯೆ ನಿಯಂತ್ರಿಸಲು ಸರ್ಕಾರ ಮುಂದಾಗಿದೆ.
- ಹುಲಿಗಳ ಸಂಖ್ಯೆ ನಿಯಂತ್ರಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಅರಣ್ಯಾಧಿಕಾರಿಗಳ ಸಭೆ ನಡೆಸಲಾಗಿದೆ.
ಪರಿಸರವಾದಿಗಳಾ ಆರೋಪ
- ಆದರೆ, ವಯನಾಡ್ ಅಥವಾ ಇತರೆ ಅರಣ್ಯದಲ್ಲಿ ಹುಲಿಗಳು ಅಥವಾ ಇತರೆ ವನ್ಯಜೀವಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿರುವ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ ಎಂದು ಪರಿಸರವಾದಿಗಳು ಹೇಳಿದ್ದಾರೆ.
- ನೈಜ ಕಾರಣಗಳನ್ನು ಮುಚ್ಚಿಹಾಕಲು, ಮಾನವ–ಪ್ರಾಣಿ ಸಂಘರ್ಷವನ್ನು ಮುಂದಿಟ್ಟುಕೊಂಡು ಹುಲಿ ಸಂತತಿ ನಿಯಂತ್ರಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಪರಿಸರವಾದಿಗಳಾ ಆರೋಪಿಸಿದ್ದಾರೆ.
‘ವಯನಾಡ್ ಅಭಯಾರಣ್ಯ’
- ‘ವಯನಾಡ್ ಅಭಯಾರಣ್ಯವು ಹುಲಿ ಸಂರಕ್ಷಿತ ಅರಣ್ಯಗಳನ್ನು ಸಂಪರ್ಕಿಸುತ್ತದೆ.
- ಕೇರಳದ ಎರಡನೆ ಪ್ರಮುಖ ವನ್ಯಜೀವಿ ಧಾಮವಾಗಿದೆ.
- ಈ ಧಾಮದಲ್ಲಿ, ಜಿಂಕೆ, ಆನೆ, ಇಂಡಿಯನ್ ಬೈಸನ್, ಹುಲಿಯಂತಹ ಪ್ರಾಣಿಗಳು ಮತ್ತು ನವಿಲು, ಪೀ ಫಾವ್ಲ್ಸ್ ನಂತಹ ಪಕ್ಷಿಗಳನ್ನು ಕಾಣಬಹುದಾಗಿದೆ.
- ಕೇರಳ ಅರಣ್ಯ ಇಲಾಖೆಯಿಂದ ನಿಯಂತ್ರಿಸಲ್ಪಡುವ ಈ ಧಾಮವು ಒಟ್ಟಾರೆಯಾಗಿ 344 ಚಕಿಮೀ ಗಳಷ್ಟು ವಿಸ್ತೀರ್ಣದಲ್ಲಿ ಹರಡಿದೆ
- ನೀಲ್ಗಿರಿ ಜೈವಿಕ ಮಂಡಳದ ಭಾಗವಾಗಿರುವ ಈ ಧಾಮವು ಸುತ್ತಲು ಕರ್ನಾಟಕದ ನಾಗರಹೊಳೆ, ಬಂಡೀಪುರ ಅಭಯಾರಣ್ಯ ಹಾಗೂ ತಮಿಳುನಾಡಿನ ಮುದುಮಲೈ ಅಭಯಾರಣ್ಯ ಗಳಿಂದ ಸುತ್ತುವರೆದಿದೆ.