Published on: August 2, 2021

ಅಂಚೆ ಇಲಾಖೆ ಯೋಜನೆ

ಅಂಚೆ ಇಲಾಖೆ ಯೋಜನೆ

ಸುದ್ಧಿಯಲ್ಲಿ ಏಕಿದೆ ?   ಸರಕಾರದ ಪ್ರತಿಯೊಂದು ಯೋಜನೆ, ಸವಲತ್ತು ಪಡೆದುಕೊಳ್ಳಲು ಆಧಾರ್‌ ಕಾರ್ಡ್‌ ಅಗತ್ಯ. ಆದರೆ ಗ್ರಾಮೀಣ ಭಾಗದ ಬಹುತೇಕ ಮಂದಿಯ ಆಧಾರ್‌ ಕಾರ್ಡ್‌ಗೆ ಮೊಬೈಲ್‌ ನಂಬರ್‌ ಲಿಂಕ್‌ ಆಗದಿರುವುದರಿಂದ ಸವಲತ್ತು ಪಡೆಯಲು ವಂಚಿತರಾಗುತ್ತಿದ್ದಾರೆ. ಇದಕ್ಕಾಗಿಯೇ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಮನೆ ಬಾಗಿಲಿಗೆ ಬಂದು ಆಧಾರ್‌ಗೆ ಮೊಬೈಲ್‌ ಲಿಂಕ್‌ ಮಾಡಲು ಯೋಜನೆ ರೂಪಿಸಿದೆ.

  • ಯುಐಎಡಿಐ ನೆರವಿನೊಂದಿಗೆ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌, ತಮ್ಮ ಪೋಸ್ಟ್‌ ಮ್ಯಾನ್‌ ಮತ್ತು ಸಿಬ್ಬಂದಿ ಮೂಲಕ ಈ ಯೋಜನೆ ಕಾರ್ಯಗತಗೊಳಿಸಲಿದೆ. ರಾಜ್ಯದಲ್ಲಿ ಕೆಲವೇ ದಿನಗಳ ಹಿಂದೆ ಈ ಯೋಜನೆ ಆರಂಭಿಸಲಾಗಿದ್ದು,ಸೇವಾ ಶುಲ್ಕ 50 ರೂ. ವಿಧಿಸಲಾಗಿದೆ.

ಯಾರಿಗೆ ಪ್ರಯೋಜನವಾಗಲಿದೆ ?

  • ‘ಬೀಡಿ ಕಾರ್ಮಿಕರು, ಪಿಎಫ್‌ ಸೌಲಭ್ಯ ಪಡೆಯುವವರಿಗೆ ಅವಕಾಶ ನೀಡಲಾಗಿದೆ. ಆಧಾರ್‌ಗೆ ಮೊಬೈಲನ್ನು ತುರ್ತಾಗಿ ಜೋಡಿಸಬೇಕಾಗಿರುವವರು, ಆಯುಷ್ಮಾನ್‌ ಭಾರತ್‌ ಕಾರ್ಡ್‌ ಪಡೆಯಲಿಚ್ಛಿಸುವವರು, ಆದಾಯ ವಿವರ ಸಲ್ಲಿಸುವವರು ಒಟಿಪಿ ಸಮಸ್ಯೆ ಇದ್ದಲ್ಲಿ ಪ್ರಯೋಜನ ಪಡೆಯಬಹುದಾಗಿದೆ
  • ಮೊಬೈಲ್‌ ನಂಬರ್‌, ವಿಳಾಸ ಸೇರಿದಂತೆ ಆಧಾರ್‌ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಲು ಬಯಸುವವರಿಗೆ
  • ಪ್ರಸ್ತುತ ಆಧಾರ್‌ ಸಂಖ್ಯೆಗೆ ಮೊಬೈಲ್ ನಂಬರ್‌ ಜೋಡಿಸದೇ ಇರುವವರು ಇದರ ಪ್ರಯೋಜನ ಪಡೆಯಬಹುದು
  • ಪೋಷಕರ ಮೊಬೈಲ್‌ ನಂಬರ್‌ ತೆಗೆದು, ಸ್ವಂತದ ಮೊಬೈಲ್‌ ನಂಬರ್‌ ಜೋಡಿಸಲು ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ