Published on: November 1, 2023

ಅಡ್ಪಾ ಕಾರ್ಯಕ್ರಮ

ಅಡ್ಪಾ ಕಾರ್ಯಕ್ರಮ

ಸುದ್ದಿಯಲ್ಲಿ ಏಕಿದೆ?  ಬೆಂಗಳೂರು ಗ್ರಾಮಾಂತರ  ಜಿಲ್ಲೆಯಲ್ಲಿರುವವರ ಪೈಕಿ  ಶೇ.70ರಷ್ಟು ಮಂದಿ  ರಸ್ತೆ ಅಪಘಾತಗಳಿಂದ    ಊನಕ್ಕೆ  ಒಳಗಾಗುತ್ತಿದ್ದಾರೆ.  ಈ ನಿಟ್ಟಿನಲ್ಲಿ  ವಿಶೇಷ ಚೇತನರ  ಕಲ್ಯಾಣ ಇಲಾಖೆಯು ಯುವಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಮುಖ್ಯಾಂಶಗಳು

  • ಮೊದಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ  ಅಡ್ಪಾ  ((ADPA) ಅಪಘಾತಗಳಿಂದ ಆಗುವ  ಅಂಗವಿಕಲತೆಯ  ಮುನ್ನೆಚ್ಚರಿಕೆ  ಕಾರ್ಯಕ್ರಮ)  ಎನ್ನುವ ವಿಶೇಷ ಕಾರ್ಯಕ್ರಮ ರೂಪಿಸಿದೆ.
  • ಅಡ್ಪಾ ಕಾರ್ಯಕ್ರಮದ ಮೂಲಕ  ಅಪಘಾತಗಳ ಬಗ್ಗೆ ವಾಹನ ಚಲಾವಣೆಯ ವೇಳೆ  ಅನುಸರಿಸಬೇಕಾದ ನಿಯಮಗಳ ಜಾಗೃತಿ ಮೂಡಿಸಲಾಗುತ್ತದೆ .
  • ಈ ಹಿಂದೆ ವಿಶೇಷ ಚೇತನಕ್ಕೆ ನೀವು ದೇಹದಲ್ಲಿನ  ನ್ಯೂನತೆಗಳು ಕಾರಣವಾಗುತ್ತಿತ್ತು  ಆದರೆ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹಲವರನ್ನು ವಿಶೇಷವನ್ನಾಗಿ ಮಾಡುತ್ತಿದೆ ಇದರಲ್ಲಿ ಬಹುತೇಕರು ಯುವಕರಾಗಿದ್ದಾರೆ.

ಉದ್ದೇಶ

ಇತ್ತೀಚಿನ ದಿನಗಳಲ್ಲಿ ಅತಿಯಾದ ವೇಗ ವೀಲಿಂಗ್ ಸೇರಿದಂತೆ ನಾನ ಕಾರಣಗಳಿಂದ ಯುವ ಜನತೆ ಅಪಘಾತಕ್ಕೆ ಒಳಗಾಗಿ  ಕೈಕಾಲು ಬೆನ್ನು ಮೂಳೆಗೆ ಹಾನಿ ಮಾಡಿಕೊಂಡು  ವಿಶೇಷ ಚೇತನರಾಗುತ್ತಿದ್ದಾರೆ  ಇದನ್ನು ತಪ್ಪಿಸುವ ಉದ್ದೇಶದಿಂದ ಇಲಾಖೆಯು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಅಡ್ಪಾ  ಜಾಗೃತಿ ನಡೆಸುತ್ತಿದೆ

ಕಾರ್ಯಕ್ರಮಗಳು

ರಸ್ತೆ ನಿಯಮ ಪಾಲನೆ, ವೇಗಮಿತಿ,  ಶಾಲಾ ಕಾಲೇಜು ಸಮುದಾಯ ಹಂತದಲ್ಲಿ ಜಾಗೃತಿ, ಮಧ್ಯಪಾನದಿಂದಾಗುವ ಅಪಘಾತದ ಬಗ್ಗೆ ಅರಿವು, ವಾಹನ ಚಲಾವಣೆ ವೇಳೆ ಬೆಲ್ಟ್ ಹೆಲ್ಮೆಟ್ ಧಾರಣೆ 18 ವರ್ಷದೊಳಗಿನ ಮಕ್ಕಳು ವಾಹನ ಚಲಾವಣೆ ನಿರ್ಬಂಧ ಮಾಹಿತಿ, ವೈಜ್ಞಾನಿಕ ಹಾಗೂ ಗುಂಡಿ ಮುಕ್ತ ರಸ್ತೆ ನಿರ್ಮಾಣಕ್ಕೆ ಮನವಿ