Published on: August 10, 2021

ಆರ್‌ಬಿಐ ವರದಿ

ಆರ್‌ಬಿಐ ವರದಿ

ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲಿ ಜನತೆಯ ಆದಾಯ ಮಟ್ಟದಲ್ಲಿ ಇಳಿಮುಖವಾಗಿದ್ದು ದಿನ ನಿತ್ಯದ ಖರ್ಚು ವೆಚ್ಚಗಳು ಏರುತ್ತಿವೆ. ಹೀಗಾಗಿ ಜುಲೈನಲ್ಲಿ ಗ್ರಾಹಕರ ವಿಶ್ವಾಸದ ಮಟ್ಟ ದಾಖಲೆಯ ಕುಸಿತಕ್ಕೀಡಾಗಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ.

ವರದಿಯಲ್ಲಿ ಏನಿದೆ ?

  • ಆರ್‌ಬಿಐನ ಗ್ರಾಹಕ ವಿಶ್ವಾಸ ಸಮೀಕ್ಷಾ ಸೂಚ್ಯಂಕ ಮೇನಲ್ಲಿ 5 ಮತ್ತು ಜುಲೈನಲ್ಲಿ 48.6 ಅಂಕ ಗಳಿಸಿದ್ದು, ಇನ್ನೂ ನಿರಾಶಾದಾಯಕ ಸ್ಥಿತಿಯಲ್ಲಿದೆ. 100ಕ್ಕಿಂತ ಕೆಳಗಿನ ಮಟ್ಟ ಜನತೆ ಆರ್ಥಿಕವಾಗಿ ನಿರಾಶಾದಾಯಕ ಸ್ಥಿತಿಯಲ್ಲಿರುವುದನ್ನು ಬಿಂಬಿಸುತ್ತದೆ. ಹೀಗಿದ್ದರೂ ಭವಿಷ್ಯದ ನಿರೀಕ್ಷೆಗಳ ಬಗ್ಗೆ 96.4ರಿಂದ 104ಕ್ಕೆ ಅಂಕ ವೃದ್ಧಿಸಿದ್ದು, ಜನತೆ ಆಶಾವಾದಿಗಳಾಗಿದ್ದಾರೆ ಎಂದು ತಿಳಿಸಿದೆ.
  • ಒಟ್ಟಾರೆಯಾಗಿ ಸದ್ಯಕ್ಕೆ ಜನ ಅಗತ್ಯ ವಸ್ತು ಮತ್ತು ಸೇವೆ ಹೊರತುಪಡಿಸಿ ಉಳಿದ ಖರ್ಚು ವೆಚ್ಚಗಳನ್ನು ನಿಯಂತ್ರಿಸಿದ್ದಾರೆ. ಹೀಗಿದ್ದರೂ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದಿದೆ. ಒಟ್ಟು 13 ನಗರಗಳಲ್ಲಿ 5,384 ಮಂದಿಯನ್ನು ಗ್ರಾಹಕ ವಿಶ್ವಾಸ ಸಮೀಕ್ಷಾ ಸೂಚ್ಯಂಕಕ್ಕಾಗಿ ಸಂದರ್ಶಿಸಲಾಗಿದೆ.