Published on: November 18, 2021

ಆ್ಯಂಟಿ ಮೈಕ್ರೊಬಿಯಲ್ ರೆಸಿಸ್ಟನ್ಸ್ (ಎಎಂಆರ್)

ಆ್ಯಂಟಿ ಮೈಕ್ರೊಬಿಯಲ್ ರೆಸಿಸ್ಟನ್ಸ್ (ಎಎಂಆರ್)

ಸುದ್ಧಿಯಲ್ಲಿ ಏಕಿದೆ ?  ಕೊರೊನಾ ಮತ್ತು ಅದರ ರೂಪಾಂತರಿಗಳು ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಬೆನ್ನಲ್ಲಿಯೇ ಹೊಸ ಸೋಂಕು ಸದ್ದಿಲ್ಲದೆ ಭಾರತದಲ್ಲಿ ವ್ಯಾಪಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

  • ‘ಕೊರೊನಾ ಬಳಿಕ ಆ್ಯಂಟಿ ಮೈಕ್ರೊಬಿಯಲ್‌ ರೆಸಿಸ್ಟನ್ಸ್‌ (ಎಎಂಆರ್‌) ಎಂಬ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ.

ಏನಿದು ಎಎಂಆರ್‌?

  • ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದೇ ಆ್ಯಂಟಿ ಮೈಕ್ರೋಬಿಯಲ್‌ ರೆಸಿಸ್ಟನ್ಸ್‌ ಎಂದು ತಜ್ಞರು ವಿವರಿಸಿದ್ದಾರೆ. ಯಾವುದೇ ವ್ಯಕ್ತಿಯಲ್ಲಿ ಎಎಂಆರ್‌ ಕಾಣಿಸಿಕೊಂಡರೆ ಆ್ಯಂಟಿ ಬಯೋಟಿಕ್‌ ಸೇರಿದಂತೆ ಯಾವುದೇ ಮಾತ್ರೆ, ಔಷಧಗಳು ಸಹ ಪರಿಣಾಮಕಾರಿಯಾಗುವುದಿಲ್ಲ. ಹೀಗಾಗಿ ಎಎಂಆರ್‌ನಿಂದ ಸಾವು ಸಹ ಸಂಭವಿಸುವ ಅಪಾಯ ಇದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ಸೋಂಕು ತಗುಲುವುದು ಹೇಗೆ?

  • ವೈದ್ಯರ ನಿರ್ದೇಶನದಂತೆ ರೋಗಿಗಳು ಆ್ಯಂಟಿ ಬಯೋಟಿಕ್ಸ್‌ ತೆಗೆದುಕೊಳ್ಳಲು ನಿರ್ಲಕ್ಷಿಸಿದಾಗ
  • ನಿಯಮಿತವಾಗಿ ಕೈ ತೊಳೆಯದಿರುವುದು ಸೇರಿ ನೈರ್ಮಲ್ಯ ಕಾಪಾಡದೆ ಇದ್ದಾಗ
  • ಪದೇ ಪದೇ ವಿದೇಶಕ್ಕೆ ತೆರಳುವವರಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು