Published on: August 8, 2023

ಇ-ಸಂಜೀವನಿ

ಇ-ಸಂಜೀವನಿ

ಸುದ್ದಿಯಲ್ಲಿ ಏಕಿದೆ? ಕೇಂದ್ರ ಸರ್ಕಾರದ ಇ-ಸಂಜೀವನಿ ಯೋಜನೆ ಅಡಿ ಕರ್ನಾಟಕ ರಾಜ್ಯದಲ್ಲಿ 1.32 ಕೋಟಿ ಜನರಿಗೆ ಟೆಲಿ ಸಮಾಲೋಚನೆ ನೀಡಲಾಗಿದ್ದು, ಈ ಮೂಲಕ ದೇಶದಲ್ಲಿಯೇ ಯೋಜನೆಯ ಅತಿ ಹೆಚ್ಚು ಲಾಭ ಪಡೆದ ನಾಲ್ಕನೇ ರಾಜ್ಯವಾಗಿದೆ.

ಮುಖ್ಯಾಂಶಗಳು

  • ರಾಜ್ಯ ಆರೋಗ್ಯ ಇಲಾಖೆಯು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಒಟ್ಟು 1.32 ಕೋಟಿ ಟೆಲಿಕನ್ಸಲ್ಟೇಶನ್‌ಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಜನ ನೇರ ಆನ್‌ಲೈನ್ ಒಪಿಡಿ ಸಮಾಲೋಚನೆ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ.
  • ಉಳಿದ 96.81 ಲಕ್ಷ ಜನ ಅನೇಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವೈದ್ಯರು ಮತ್ತು ದಾದಿಯರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ.
  • ಆನ್‌ಲೈನ್ ಸಮಾಲೋಚನೆಗಳ ಸೌಲಭ್ಯವು ದೂರದ ಪ್ರದೇಶಗಳಲ್ಲಿನ ಜನರಿಗೆ ಸಹಾಯ ಮಾಡಿದೆ ಏಕೆಂದರೆ. ಅವರು ಈಗ ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿದೆ.

ಇ-ಸಂಜೀವಿನಿ

  • ಇ-ಸಂಜೀವಿನಿ ಅಂದರೆ ಇದೊಂದು ಇಂಟರ್ನೆಟ್ ಆಧಾರಿತ ಟೆಲಿಮೆಡಿಸಿನ್ ವೇದಿಕೆಯಾಗಿದೆ. ಇ-ಸಂಜೀವಿನಿ ವೈದ್ಯರಿಂದ ವೈದ್ಯರಿಗೆ (AB-HWC) ಮತ್ತು ರೋಗಿಯಿಂದ ವೈದ್ಯರಿಗೆ (ಇ- ಸಂಜೀವಿನಿ OPD) ಟೆಲಿ ಸಮಾಲೋಚನೆ ನಡೆಸುವುದನ್ನು ಸುಲಭಗೊಳಿಸಲು ಉಚಿತ, ಬ್ರೌಸರ್ ಆಧಾರಿತ ಆ್ಯಪ್ ಆಗಿದೆ.
  • ಪ್ರಾರಂಭ: 2009ರ ಜೂನ್‌ 16
  • ಆರಂಭಿಸಿದವರು: ಕೇಂದ್ರ ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಜಂಟಿಯಾಗಿ ಆಯೋಜಿಸಿರುವ ಡಿಜಿಟಲ್ ಕಾರ್ಯಕ್ರಮವಾಗಿದೆ.
  • ಉದ್ದೇಶ:ಆರೋಗ್ಯ ಸೇವೆಯನ್ನು ಡಿಜಿಟಲ್ ಮುಲಕ ಲಭ್ಯವಾಗುವಂತೆ ಮಾಡುವುದಾಗಿದೆ.

ಪ್ರಯೋಜನ

  • ಇ-ಸಂಜೀವನಿ’ಯು ಗ್ರಾಮೀಣ ಪ್ರದೇಶ ಸೇರಿದಂತೆ ಜನಸಾಮಾನ್ಯರಿಗೆ ವಿಶೇಷ ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.
  • ಇ-ಸಂಜೀವಿನಿಯು ಗ್ರಾಮೀಣ vs ನಗರ, ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಅವರ ನಡುವಿನ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವ ಮೂಲಕ ಆರೋಗ್ಯ ಸೇವೆಯನ್ನು ಸಮಾನಗೊಳಿಸುವ ಗುರಿ ಹೊಂದಿದೆ.

ಇ-ಸಂಜೀವಿನಿ OPD

  • ಇ-ಸಂಜೀವಿನಿ ಮಹತ್ವಾಕಾಂಕ್ಷೆಯ ಉಪಕ್ರಮದ ಎರಡನೇ ಆವೃತ್ತಿಯು ಇ-ಸಂಜೀವಿನಿ OPD ಟೆಲಿಮೆಡಿಸಿನ್ ಪ್ಲಾಟ್‌ಫಾರ್ಮ್ ಆಗಿದೆ.
  • ಇದನ್ನು 2020ರ ಏಪ್ರಿಲ್‌ 13ರಂದು ಆರಂಭಿಸಲಾಯಿತು.
  • ಉದ್ದೇಶ: ಕೊರೋನಾ ಸೋಂಕಿನ ಮೊದಲ ಅಲೆಯ ಲಾಕ್‌ಡೌನ್ ಸಮಯದಲ್ಲಿ ಇ-ಸಂಜೀವಿನಿ ಒಪಿಡಿಯನ್ನು ಪ್ರಾರಂಭಿಸಲಾಯಿತು. ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಅವರಿರುವ ಸ್ಥಳದಲ್ಲೇ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಯಿತು.
  • ಈ ವೇದಿಕೆಯು ವ್ಯಕ್ತಿಗಳಿಗೆ ಉಚಿತ ಸಮಾಲೋಚನೆಯನ್ನು ಒದಗಿಸುತ್ತದೆ.

ಇ-ಸಂಜೀವಿನಿ ಎಬಿ-ಎಚ್‌ಡಬ್ಲ್ಯೂಸಿ

  • ಇ-ಸಂಜೀವಿನಿ ಎಬಿ-ಎಚ್‌ಡಬ್ಲ್ಯೂಸಿ ಅಂದರೆ ‘ಆಯುಷ್ಮಾನ್ ಭಾರತ್-ಇ-ಸಂಜೀವಿನಿ ಒಪಿಡಿಯ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ’ವನ್ನು ಆರೋಗ್ಯ ಸಚಿವಾಲಯವು 2019ರ ನವೆಂಬರ್‌ನಲ್ಲಿ ಆರಂಭಿಸಿತು.
  • ಉದ್ದೇಶ: ವೈದ್ಯರಿಂದ ವೈದ್ಯರ ಟೆಲಿಮೆಡಿಸಿನ್ ಸಮಾಲೋಚನೆಗಾಗಿ ಇ-ಸಂಜೀವಿನಿ ಎಬಿ-ಎಚ್ಡಬ್ಲ್ಯೂಸಿಅನ್ನು ಕೂಡ ಆರಂಭಿಸಲಾಗಿದೆ. ಇದರಲ್ಲಿ ವಿಭಿನ್ನ ಸ್ಥಳದಲ್ಲಿರುವ ವೈದ್ಯರು ಡಿಜಿಟಲ್ ಮಾಧ್ಯಮದ ಮೂಲಕ ಸಮಾಲೋಚಿಸಬಹುದು.
  • 2022 ರ ಡಿಸೆಂಬರ್ ವೇಳೆಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ಗುರುತಿಸಲಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಒಟ್ಟು 1,55,000 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಇ-ಸಂಜೀವಿನಿ ಒಪಿಡಿ ಅನ್ನು ಜಾರಿಗೊಳಿಸಲಾಗಿದೆ.