Published on: August 10, 2021

ಎನ್‌ಎಂಇಒ–ಒಪಿ ಮಿಷನ್‌

ಎನ್‌ಎಂಇಒ–ಒಪಿ ಮಿಷನ್‌

ಸುದ್ಧಿಯಲ್ಲಿ ಏಕಿದೆ ? ಅಡುಗೆ ಎಣ್ಣೆ ಆಮದಿನ ಮೇಲಿನ ಅವಲಂಬನೆ ತಗ್ಗಿಸಲು ಹಾಗೂ ತಾಳೆ ಎಣ್ಣೆ ಸೇರಿದಂತೆ ಎಲ್ಲ ರೀತಿಯ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವ ‘ನ್ಯಾಷನಲ್‌ ಎಡಿಬಲ್‌ ಆಯಿಲ್‌ ಮಿಷನ್‌– ಆಯಿಲ್‌ ಪಾಮ್‌(ಎನ್‌ಎಂಇಒ–ಒಪಿ) ಅನ್ನು ಘೋಷಿಸಿದರು.

ಉದ್ದೇಶ

  • ಭಾರತ ಅಕ್ಕಿ, ಗೋದಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಸ್ವಾಲಂಬನೆ ಸಾಧಿಸಿದೆ. ಆದರೆ, ಅಡುಗೆ ತೈಲವನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಅಡುಗೆ ತೈಲ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕು. ಈ ಉದ್ದೇಶದಿಂದಲೇ ಎನ್‌ಎಂಇಪಿ–ಒಪಿಯನ್ನು ಆರಂಭಿಸಲಾಗಿದೆ

ಯೋಜನೆಯ ಪ್ರಮುಖ ಲಕ್ಷಣಗಳು:

  • ತಾಳೆ ಎಣ್ಣೆ ಮತ್ತು ಇತರ ಎಣ್ಣೆ ಕಾಳುಗಳನ್ನು ಉತ್ಪಾದನೆಯನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರ, ರೈತರಿಗೆ ಗುಣಮಟ್ಟದ ಬೀಜಗಳಿಂದ ಹಿಡಿದು ತಂತ್ರಜ್ಞಾನದವರೆಗೆ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ.
  • ದೇಶದಲ್ಲಿ ತಾಳೆ ಎಣ್ಣೆ ಉತ್ಪಾದನೆ ಹೆಚ್ಚಿಸಲು ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪಗಳನ್ನು ‌ಉತ್ತೇಜಿಸಬಹುದು.

ಇಂತಹ ಯೋಜನೆಗಳ ಅಗತ್ಯವೇನು ?

  • ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಜನ್ಯ ಎಣ್ಣೆಯನ್ನು ಬಳಸುವ ದೇಶವಾಗಿದೆ. ಒಟ್ಟು ಆಮದು ಪ್ರಮಾಣದಲ್ಲಿ ತಾಳೆ ಎಣ್ಣೆ ಪ್ರಮಾಣ ಶೇ 55ರಷ್ಟಿದೆ. ಹಾಗಾಗಿ, ದೇಶದಲ್ಲಿರುವ ಅಡುಗೆ ಎಣ್ಣೆ ಬೇಡಿಕೆಯನ್ನು ಪೂರೈಸಲು ಆಮದಿನ ಮೇಲೆ ಅವಲಂಬಿಸಲಾಗಿದೆ.
  • 2016- 2017 ರಲ್ಲಿ, ಭಾರತದ ಒಟ್ಟು ದೇಶೀಯ ಪಾಮ್ ಆಯಿಲ್ ಬಳಕೆ 3 ದಶಲಕ್ಷ ಮೆ.ಟನ್ ಆಗಿದ್ದು, ಅದರಲ್ಲಿ 98.97 ಪ್ರತಿಶತ ಮಲೇಷಿಯಾ ಮತ್ತು ಇಂಡೋನೇಷಿಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ಇದರರ್ಥ ಭಾರತವು ಅದರ ಅವಶ್ಯಕತೆಯ ಶೇಕಡಾ 1.027 ರಷ್ಟು ಮಾತ್ರ ಉತ್ಪಾದಿಸುತ್ತಿದೆ.
  • ಅಲ್ಲದೆ, ಭಾರತದಲ್ಲಿ, ಅದರ ಪಾಮ್ ಎಣ್ಣೆಯ ಶೇಕಡಾ 1 ಅನ್ನು ಆಹಾರ ಉತ್ಪನ್ನಗಳಲ್ಲಿ, ವಿಶೇಷವಾಗಿ ಅಡುಗೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದು ಭಾರತದ ಖಾದ್ಯ ತೈಲಗಳ ಆರ್ಥಿಕತೆಗೆ ತಾಳೆ ಎಣ್ಣೆಯನ್ನು ಅತ್ಯಂತ ನಿರ್ಣಾಯಕವಾಗಿಸುತ್ತದೆ.