Published on: September 15, 2023

ಏಕ ಬಳಕೆ ಪ್ಲಾಸ್ಟಿಕ್‌’ಗೆ ನಿಷೇಧ

ಏಕ ಬಳಕೆ ಪ್ಲಾಸ್ಟಿಕ್‌’ಗೆ ನಿಷೇಧ

ಸುದ್ದಿಯಲ್ಲಿ ಏಕಿದೆ? ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜು, ದೇವಸ್ಥಾನಗಳ ಆವರಣಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್‌’ಗೆ ನಿಷೇಧ ಮಾಡಲಾಗಿದೆ.

ಮುಖ್ಯಾಂಶಗಳು

  • ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು-2016ಗಳು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದನ್ನೂ ಸೂಚಿಸಲಾಗಿದೆ.
  • ಸೂಕ್ತ ನಿರ್ವಹಣಾ ತಂತ್ರಗಳನ್ನು ರೂಪಿಸುವ ಮೂಲಕ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಬಳಕೆಯನ್ನು ನಿಯಂತ್ರಿಸಬೇಕು ಮತ್ತು ಹಂತಹಂತವಾಗಿ ನಿರ್ಮೂಲನೆ ಮಾಡಬೇಕು ಎಂದು ಪಾಲಿಕೆ ಹೇಳಿದೆ.
  • ನಿಯಮಗಳಲ್ಲಿ ಗುರುತಿಸಲಾದ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮೇಲೆ ವಿಧಿಸಲಾದ ನಿರ್ದಿಷ್ಟ ನಿಷೇಧಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಏಕಬಳಕೆ ಪ್ಲಾಸ್ಟಿಕ್ ಬದಲಾಗಿ ಬಟ್ಟೆ ಅಥವಾ ಕಾಗದದಿಂದ ತಯಾರಾದ ವಸ್ತುಗಳನ್ನು ಬಳಸಬೇಕು.
  • ನಿಯಮಗಳನ್ನು ಪಾಲಿಸಲು ವಿಫಲವಾದರೆ ಘನತ್ಯಾಜ್ಯ ನಿರ್ವಹಣಾ ಬೈ-ಲಾ ಪ್ರಕಾರ ದಂಡ ವಿಧಿಸಲಾಗುವುದು. ಪಾಲಿಕೆಯಿಂದ ಹೊರಡಿಸಲಾದ ವಿವಿಧ ಆದೇಶಗಳು ಮತ್ತು ನಿಬಂಧನೆಗಳ ಉಲ್ಲಂಘನೆಯು ದಂಡದ ಷರತ್ತು ಮತ್ತು ಕ್ರಮವನ್ನು ಪರಿಗಣಿಸಿ ಕ್ರಮಕೈಗೊಳ್ಳಲಾಗುತ್ತದೆ.

ಏಕಬಳಕೆಯ ಪ್ಲಾಸ್ಟಿಕ್ ಎಂದರೇನು?

  • ಏಕ-ಬಳಕೆಯ ಪ್ಲಾಸ್ಟಿಕ್ ಎನ್ನುವುದು ಪ್ಲಾಸ್ಟಿಕ್ನಿಂದ ಮಾಡಿದ ವಸ್ತುವಾಗಿದ್ದು, ಅದನ್ನು ವಿಲೇವಾರಿ ಮಾಡುವ ಅಥವಾ ಮರುಬಳಕೆ ಮಾಡುವ ಮೊದಲು “ಒಮ್ಮೆ ಮಾತ್ರ” ಬಳಸಲು ಉದ್ದೇಶಿಸಲಾಗಿದೆ.
  • ಈ ವಸ್ತುಗಳು ಹೆಚ್ಚಾಗಿ ಪಾಲಿಥಿನ್ ಬ್ಯಾಗ್ಗಳು, ಸ್ಯಾಚೆಟ್ಗಳು, ಶಾಂಪೂ ಬಾಟಲಿಗಳು, ಬಿಸಾಡಬಹುದಾದ ಗ್ಲಾಸ್ಗಳು, ಇಯರ್ ಬಡ್ಸ್ ಕಡ್ಡಿಇತ್ಯಾದಿಗಳಾಗಿವೆ, ಇವುಗಳನ್ನು ಬಳಸಿದ ಕೂಡಲೇ ವಿಲೇವಾರಿ ಮಾಡಲಾಗುತ್ತದೆ. ಮರುಬಳಕೆ ಮಾಡುವುದಿಲ್ಲ. ಇವುಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಪರಿಸರದ ಮೇಲೆ ದುಷ್ಪರಿಣಾಮ ಬಿರುತ್ತದೆ.

ನಿಮಗಿದು ತಿಳಿದಿರಲಿ

  • 2030ರೊ ಳಗಾಗಿ ಪ್ಲಾಸ್ಟಿಕ್ ಬಳಕೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ಪ್ರತಿಜ್ಞೆಯನ್ನು 170 ದೇಶಗಳು 2019ರಲ್ಲಿ ನಡೆದ ವಿಶ್ವಸಂಸ್ಥೆ ಪರಿಸರ ಸಮಾವೇಶದಲ್ಲಿತೆಗೆದುಕೊಂಡಿದ್ದವು.
  • ವಿಶ್ವ ಆರ್ಥಿಕ ವೇದಿಕೆಯ ವರದಿ ಪ್ರಕಾರ, ಕೀನ್ಯಾದಲ್ಲಿ2017ರಲ್ಲೇ ಒಂದು ಬಾರಿ ಬಳಸಿ ಎಸೆಯುವ (Single use) ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಾಗಿದ