Published on: March 11, 2024

ಐಎನ್ಎಸ್ ಜಟಾಯು

ಐಎನ್ಎಸ್ ಜಟಾಯು

ಸುದ್ದಿಯಲ್ಲಿ ಏಕಿದೆ? ಭಾರತೀಯ ನೌಕಾಪಡೆ ಕಡಲ ಗಡಿ ರಕ್ಷಣೆಯಲ್ಲಿ ನೂತನ ನೌಕಾನೆಲೆಯಾದ ‘ಐಎನ್ಎಸ್ ಜಟಾಯು’ ಗೆ ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿ ಕಾರ್ಯಾರಂಭಿಸಲಾಯಿತು.ಇದೇ ಸಂದರ್ಭದಲ್ಲಿ, ‘ಐಎನ್ಎಸ್ ಜಟಾಯು’ವಿನ ಮೊದಲ ಕಮಾಂಡಿಂಗ್ ಆಫೀಸರ್ ಆಗಿ ನೇಮಕವಾಗಿರುವ ಕಮಾಂಡರ್ ವ್ರತ ಬಘೇಲ್ ಅಧಿಕಾರ ವಹಿಸಿಕೊಂಡರು.

ಮುಖ್ಯಾಂಶಗಳು

  • INS ಜಟಾಯು ಲಕ್ಷದ್ವೀಪ ಸಮೂಹದಲ್ಲಿ ಎರಡನೇ ನೌಕಾ ನೆಲೆಯಾಗಿದೆ. ಈ ದ್ವೀಪಗಳಲ್ಲಿ ನೌಕಾಪಡೆಯ ಮೊದಲ ನೌಕಾನೆಲೆ, ಕವರಟ್ಟಿಯಲ್ಲಿ INS ದ್ವೀಪರಕ್ಷಕ ಅನ್ನು 2012 ರಲ್ಲಿ ಕಾರ್ಯಾರಂಭ ಮಾಡಲಾಗಿತ್ತು.
  • ಮಿನಿಕಾಯ್ ದ್ವೀಪವು ಎಂಟು ಡಿಗ್ರಿ ಚಾನೆಲ್ ಮತ್ತು ಒಂಬತ್ತು ಡಿಗ್ರಿ ಚಾನೆಲ್‌ನಂತಹ ನಿರ್ಣಾಯಕ ಸಮುದ್ರ ಸಂಪರ್ಕಗಳ (ಎಸ್‌ಎಲ್‌ಒಸಿ) ಛೇದಕದಲ್ಲಿದೆ, ಇದು ಭಾರೀ ಕಡಲ ಸಂಚಾರದಿಂದಾಗಿ ಸಮುದ್ರ ಮಾಲಿನ್ಯಕ್ಕೆ ಗುರಿಯಾಗುತ್ತದೆ.

ಮಹತ್ವ

INS ಜಟಾಯು ಕಾರ್ಯಾರಂಭವು ಭಾರತದ ಕಡಲ ಭದ್ರತಾ ಕಾರ್ಯತಂತ್ರದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸೂಚಿಸುತ್ತದೆ, ವಾಯುಪಡೆ ಸಿಬ್ಬಂದಿ ಸೇರಿದಂತೆ ಭಾರತದ ಎಲ್ಲ ಸಿಬ್ಬಂದಿ ತನ್ನ ನೆಲದಿಂದ ಹೊರಹೋಗಬೇಕು ಎಂದು ಮಾಲ್ದೀವ್ಸ್ ಘೋಷಿಸಿದ ನಂತರ ಮತ್ತು ವಿಶೇಷವಾಗಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬೆಳೆಯುತ್ತಿರುವ ಚೀನಾದ ಪ್ರಭಾವದ ಸಂದರ್ಭದಲ್ಲಿ ಕಡಲ ಗಡಿ ರಕ್ಷಣೆ ವಿಚಾರದಲ್ಲಿ ಈ ನೌಕಾನೆಲೆಗಳ ಕಾರ್ಯಾರಂಭಕ್ಕೆ ಮಹತ್ವ ಬಂದಿದೆ.

ಲಕ್ಷದ್ವೀಪ ದ್ವೀಪಗಳು

  • ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶ, ಲಕ್ಷದ್ವೀಪ (ಸಂಸ್ಕೃತ ಮತ್ತು ಮಲಯಾಳಂನಲ್ಲಿ ‘ನೂರು ಸಾವಿರ ದ್ವೀಪಗಳು’ಎಂದರ್ಥ) ಕೊಚ್ಚಿಯಿಂದ 220 ಕಿಮೀ ಮತ್ತು 440 ಕಿಮೀ ನಡುವೆ ಇರುವ 36 ದ್ವೀಪಗಳನ್ನು ಒಳಗೊಂಡಿರುವ ದ್ವೀಪಸಮೂಹವಾಗಿದೆ.
  • ಅದರಲ್ಲಿ ಕೇವಲ 11 ದ್ವೀಪಗಳಲ್ಲಿ ಜನರು ವಾಸಿಸುತ್ತಾರೆ. ಒಟ್ಟು 32 ಚದರ ಕಿ.ಮೀ. ಇರುವ ಈ ಕೇಂದ್ರಾಡಳಿತ ಪ್ರದೇಶ  ನೇರವಾಗಿ  ಕೇಂದ್ರದ ನಿಯಂತ್ರಣದಲ್ಲಿದೆ.
  • ಲಕ್ಷದ್ವೀಪವು ಹಿಂದೂ ಮಹಾಸಾಗರದ ಹವಳದ ದ್ವೀಪಗಳ ಸರಪಳಿಯ ಭಾಗವಾಗಿದೆ, ಇದು ದಕ್ಷಿಣಕ್ಕೆ ಮಾಲ್ಡೀವ್ಸ್ ಮತ್ತು ಸಮಭಾಜಕದ ದಕ್ಷಿಣಕ್ಕೆ ಚಾಗೋಸ್ ದ್ವೀಪಸಮೂಹವನ್ನು ಒಳಗೊಂಡಿದೆ.

ನಿಮಗಿದು ತಿಳಿದಿರಲಿ

ಎಂಟು ಡಿಗ್ರಿ ಚಾನೆಲ್ ಭಾರತೀಯ ಮಿನಿಕಾಯ್ ದ್ವೀಪವನ್ನು ಮಾಲ್ಡೀವ್ಸ್‌ನಿಂದ ಪ್ರತ್ಯೇಕಿಸುತ್ತದೆ.

ಒಂಭತ್ತು ಡಿಗ್ರಿ ಚಾನೆಲ್ ಮಿನಿಕಾಯ್ ದ್ವೀಪವನ್ನು ಲಕ್ಷದ್ವೀಪ ದ್ವೀಪಸಮೂಹದಿಂದ ಪ್ರತ್ಯೇಕಿಸುತ್ತದೆ.