Published on: May 2, 2023

ಕರ್ನಾಟಕದಲ್ಲಿ ಮೊದಲ ಬಾರಿಗೆ ಇಟಿಪಿಬಿಎಸ್

ಕರ್ನಾಟಕದಲ್ಲಿ ಮೊದಲ ಬಾರಿಗೆ ಇಟಿಪಿಬಿಎಸ್

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಇಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್ ಪೋಸ್ಟಲ್  ಬ್ಯಾಲೆಟ್ ಸಿಸ್ಟಂ (ಇಟಿಪಿಬಿಎಸ್) ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ 47,488 ಸೇವಾ ಮತದಾರರು ಮತದಾನ ಮಾಡಲು ಹೆಸರು ನೋಂದಾಯಿಸಿದ್ದಾರೆ.
  • ಕರ್ತವ್ಯ ನಿರತ ಸಿಬ್ಬಂದಿ, ಅಂಗವಿಕಲರು ಹಾಗೂ ವೃದ್ಧರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇನ್ನೂ ಅವರಾರಿಗೂ ಇಟಿಪಿಬಿಎಸ್ ಮತದಾನಕ್ಕೆ  ಅವಕಾಶವಿಲ್ಲ.
  • 2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಆಗ ಇದ್ದ 10.84 ಲಕ್ಷದಲ್ಲಿ ಶೇ. 60.14 ಸೇವಾ ಮತದಾರರು ಮತ ಚಲಾವಣಿ ಮಾಡಿದ್ದರು.

ಯಾರಿಗೆ ಈ ಅವಕಾಶ

  • ರಾಜ್ಯದ ಹೊರಗೆ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ  ವಿದೇಶಗಳಲ್ಲಿ ಭಾರತ ಸರ್ಕಾರದ ಉದ್ಯೋಗದಲ್ಲಿ ಇರುವವರಿಗೆ ಮಾತ್ರ ಈ ಮತದಾನ ಪದ್ಧತಿಯನ್ನು  ರಾಜ್ಯದಲ್ಲಿ ಚುನಾವಣಾ ಆಯೋಗ ಜಾರಿಗೆ ತಂದಿದೆ.

ಉದ್ದೇಶ : 2013ರ ಲೋಕಸಭಾ ಚುನಾವಣೆಯಲ್ಲಿ ಸೇವಾ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್‌ಗಳು ತಲುಪಲು ವಿಳಂಬವಾಗಿ ಮತದಾನ ಪ್ರಮಾಣ  ಕಡಿಮೆಯಾಗಿತ್ತು. ಇದರಿಂದ ಆನ್‌ಲೈನ್ ಮತದ ಮೂಲಕವೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ.

 ಏನಿದು ವ್ಯವಸ್ಥೆ?

  • ಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆದು ಅಂತಿಮ ಅಭ್ಯರ್ಥಿಗಳ ಅಧಿಸೂಚನೆ ಹೊರಡಿಸಿದ 24 ಗಂಟೆಯ ನಂತರ ಆಯೋಗದ ವೆಬ್‌ಸೈಟ್‌ ಮೂಲಕ ಮತದಾನಕ್ಕೆ  ಅವಕಾಶ ನೀಡಲಾಗುತ್ತದೆ.
  • ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡ ಸೇವಾ ಮತದಾರರಿಗೆ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಆನ್‌ಲೈನ್ – ಮೂಲಕವೇ ಬ್ಯಾಲೆಟ್ ಪೇಪರ್ ಕಳಿಸಿಕೊಡುತ್ತಾರೆ. ಸಂಬಂಧಪಟ್ಟ ಮತದಾರ ಆನ್‌ಲೈನ್‌ನಲ್ಲೇ   ಮತದಾನ ಮಾಡಿ ನಂತರ ಅದರ ಪ್ರತಿಯನ್ನು ಡೌನ್ ಲೋಡ್ ಮಾಡಿ, ಮುದ್ರಣ ಮಾಡಿ, ಸಂಬಂಧಪಟ್ಟ ಚುನಾವಣಾಧಿಕಾರಿಗೆ ಅಂಚೆ ಮೂಲಕ ಕಳಿಸಿಕೊಡಬೇಕಿದೆ.
  • ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಮತ ಎಣಿಕೆ ಮಾಡುಹುದು. ನಕಲು ಮಾಡಲಾಗದಂತೆ ಪಿನ್ ಮತ್ತು ಒಟಿಪಿ ಎರಡು ಹಂತದ ಭದ್ರತಾ ವ್ಯವಸ್ಥೆ ಅಳವಡಿಸಲಾಗಿದೆ.
  • ಎಲ್ಲೆಲ್ಲಿ ಎಷ್ಟು ಮತದಾರರು? ಇಟಿಪಿಬಿಎಸ್‌  ಮೂಲಕ ನೊಂದಾಯಿಸಿಕೊಂಡವರಲ್ಲಿ 45,897  1591 ಮತದಾರರಿದ್ದಾರೆ. ಶೇ.90 ಮತದಾರರು ಸಶಸ್ತ್ರ ಪಡೆಗಳಿಗೆ ಸೇರಿದವರಾಗಿದ್ದಾರೆ. ರಾಜ್ಯದಲ್ಲಿ  ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಇಲೆಕ್ಟ್ರಾನಿಕ್ ಬ್ಯಾಲೆಟ್’ ಪತ್ರದ ಮತದಾರರಿದ್ದಾರೆ.