Published on: February 15, 2024

ಕಾಜಿ ನೀಮು ಅಸ್ಸಾಂನ ರಾಜ್ಯ ಹಣ್ಣು

ಕಾಜಿ ನೀಮು ಅಸ್ಸಾಂನ ರಾಜ್ಯ ಹಣ್ಣು

ಸುದ್ದಿಯಲ್ಲಿ ಏಕಿದೆ? ಕಾಜಿ ನೀಮು(ಸಿಟ್ರಸ್ ಲೆಮನ್) ಹಣ್ಣನ್ನು ‘ರಾಜ್ಯ ಹಣ್ಣು’ ಎಂದು ಅಸ್ಸಾಂ ಸರ್ಕಾರ ಘೋಷಿಸಿದೆ.

ಮುಖ್ಯಾಂಶಗಳು

  • ನಿಂಬೆ ಜಾತಿಗೆ ಸೇರಿದ ‘ಕಾಜಿ ನೀಮು’ ಅಸ್ಸಾಂನಲ್ಲಿ ಸಿಗುವ ಒಂದು ವಿಶೇಷ ಫಲವಾಗಿದೆ.
  • 2016ರಲ್ಲಿ ಭೌಗೋಳಿಕ ಗುರುತಿನ ಸ್ಥಾನಮಾನವನ್ನು(ಜಿಐ ಟ್ಯಾಗ್) ಈ ಹಣ್ಣಿಗೆ ನೀಡಲಾಗಿತ್ತು.
  • ‘ಆಹಾರಕ್ಕೆ ವಿಶೇಷವಾದ ಸ್ವಾದವನ್ನು ನೀಡುವುದಲ್ಲದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ
  • ಅಸ್ಸಾಂ ನಿಂಬೆ ಎಂದೇ ಹೆಸರುವಾಸಿಯಾದ ಕಾಜಿ ನೀಮು ಅಸ್ಸಾಂ ನ ಪ್ರಮುಖ ಬೆಳೆಯಾಗಿದೆ.
  • ನಿಂಬೆ ಜಾತಿಗೆ ಸೇರಿದ ಈ ಹಣ್ಣು ಉಪ್ಪಿನಕಾಯಿ ಸೇರಿದಂತೆ ವಿವಿಧ ಖಾದ್ಯಗಳಲ್ಲಿ ಬಳಕೆಯಾಗುತ್ತಿದೆ.
  • ಇದರಿಂದ ಕಾಜಿ ನೀಮು ಜಾಗತಿಕ ನಕ್ಷೆಯಲ್ಲಿ ಗುರುತಿಸಿಕೊಳ್ಳಲಿದ್ದು, ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.