Published on: November 11, 2021

‘ಕುಂಕುಮ್ ಭಿಂಡಿ’

‘ಕುಂಕುಮ್ ಭಿಂಡಿ’

ಸುದ್ಧಿಯಲ್ಲಿ ಏಕಿದೆ ? ಉತ್ತರ ಪ್ರದೇಶದಲ್ಲಿ ಕೆಂಪು ಬಣ್ಣದ ‘ಕುಂಕುಮ್‌ ಭಿಂಡಿ’ ಎಂಬ ತಳಿಯ ಬೆಂಡೆಕಾಯಿಯನ್ನು ರೈತರು ಬೆಳೆಯುತ್ತಿದ್ದು, ಇದು ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ.

ಇದರಲ್ಲಿರುವ ಪೌಷ್ಟಿಕಾಂಶಗಳು

  • ‘ಕುಂಕುಮ ಭಿಂಡಿ’ ಶೇ. 94ರಷ್ಟು ಪಾಲಿಅನ್‌ಸ್ಯಾಚುರೇಟೆಡ್‌ ಕೊಬ್ಬನ್ನು ಹೊಂದಿದೆ, ಇದು ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ, ಬೆಂಡೆಕಾಯಿಯಲ್ಲಿರುವ ಶೇ. 66 ರಷ್ಟು ಸೋಡಿಯಂ ಅಂಶವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಶೇ. 21ರಷ್ಟಿರುವ ಕಬ್ಬಿಣದ ಅಂಶವು ರಕ್ತಹೀನತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಶೇ. 5ರಷ್ಟು ಇರುವ ಪ್ರೋಟೀನ್ ದೇಹದ ಚಯಾಪಚಯ ವ್ಯವಸ್ಥೆಯನ್ನು ಕ್ರಮವಾಗಿ ಇಡುತ್ತದೆ. ಇದಲ್ಲದೆ ಅಧಿಕ ರಕ್ತದೊತ್ತಡವನ್ನು ಉಪಶಮನಗೊಳಿಸಲೂ ಈ ತರಕಾರಿ ಸಹಕಾರಿ. ಹೀಗಾಗಿ ಉತ್ತರ ಪ್ರದೇಶದ ರೈತರು ಈ ವಿಶಿಷ್ಟ ಬೆಂಡೆಕಾಯಿ ತಳಿಯ ವ್ಯವಸಾಯದಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
  • ಈ ಕೆಂಪು ಬೆಂಡೆಕಾಯಿ ತಳಿಯಲ್ಲಿ ಆಂಥೋಸಯಾನಿನ್‌ಗಳು ಮತ್ತು ಫೀನಾಲಿಕ್‌ಗಳಿದ್ದು, ಇದು ಅದರ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಿದೆ.

ಯಾವಾಗ ಬೆಳೆಯಬಹುದು?

  • ಫೆಬ್ರವರಿಯಿಂದ ಏಪ್ರಿಲ್‌ ಎರಡನೇ ವಾರದ ತನಕ ಕುಂಕುಮ್‌ ಭಿಂಡಿ ಬೆಂಡೆಕಾಯಿಯನ್ನು ಬೆಳೆಯಬಹುದು. ನವೆಂಬರ್‌ನಲ್ಲಿ ಬಿತ್ತನೆ ಮಾಡಬಹುದು. ಆದರೆ ಡಿಸೆಂಬರ್ – ಜನವರಿ ಅವಧಿಯಲ್ಲಿ ಇದರ ಬೆಳವಣಿಗೆ ನಿಧಾನವಾಗಿರುತ್ತದೆ. ಫೆಬ್ರವರಿ ವೇಳೆಗೆ ಕಾಯಿ ಬರಲು ಆರಂಭವಾಗುತ್ತದೆ. ಜನ ಇದನ್ನು ಪೌಷ್ಟಿಕಾಂಶಯುಕ್ತ ಸೂಪರ್‌ ಫುಡ್‌ ಎಂದು ಪರಿಗಣಿಸುತ್ತಿದ್ದು, ಬೇಡಿಕೆ ವೃದ್ಧಿಸಿದೆ.