Published on: April 18, 2024

ಕುಶ್ ಡ್ರಗ್ಸ್

ಕುಶ್ ಡ್ರಗ್ಸ್

ಸುದ್ದಿಯಲ್ಲಿ ಏಕಿದೆ? ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ ದೇಶದಲ್ಲಿ ‘ಕುಶ್’ ಡ್ರಗ್ಸ್ ಎನ್ನುವ ಹೊಸ ಬಗೆಯ ಸಂಶ್ಲೇಷಿತ ಡ್ರಗ್ಸ್ ಬಳಸುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲು ಆ ದೇಶದ ರಾಷ್ಟ್ರಕ್ಷರಾದ ಜುಲಿಯೂಸ ಮಾಡಾ ಬಿಯೋ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಮುಖ್ಯಾಂಶಗಳು

  • ಸಿಯೇರಾ ಲಿಯೋನ್ನಲ್ಲಿ ಇತ್ತೀಚೆಗೆ ಡ್ರಗ್ಸ್ ದಂಧೆಯ ಮೇಲೆ ಕ್ರಮಗಳನ್ನು ಕೈಗೊಂಡು ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ತರಲಾಗಿದೆ ಆದರೆ ಇದರಿಂದ ಪರ್ಯಾಯ ಮಾರ್ಗ ಕಂಡುಕೊಳ್ಳುವ ಸಲುವಾಗಿ ಡ್ರಗ್ಸ್ ತಯಾರಿಸುವವರು, ಪೆಡ್ಲರ್ಗಳು ‘ಕುಶ್ ಡ್ರಗ್ಸ್’ ಮೊರೆಹೋಗಿದ್ದಾರೆ.
  • ಜಾಂಬಿ ಡ್ರಗ್ಸ್ ಎಂದಲೂ ಭಯ ಹುಟ್ಟಿಸುತ್ತಿರುವ ಈ ಡ್ರಗ್ಸ್ ಸಿಯೆರಾ ಲಿಯೋನ್, ಲೈಬಿರಿಯಾ ಹಾಗೂ ಅದರ ಪಕ್ಕದ ಕೆಲ ರಾಷ್ಟ್ರಗಳಲ್ಲಿ ವ್ಯಾಪಕ ಭೀತಿ ಹುಟ್ಟಿಸಿದೆ.

ಏನಿದು ಕುಶ್ ಡ್ರಗ್ಸ್?

  • ಮಾನವನ ಮೂಳೆಯಿಂದ ಗಂಧಕ (ಸಲ್ಪರ್) ಸೇರಿದಂತೆ ಕೆಲ ವಸ್ತುಗಳನ್ನು ಬೇರ್ಪಡಿಸಿ ಅದನ್ನು ಮರಿಜುವಾನಾದಂತಹ ಡ್ರಗ್ಸ್ ಗಿಡಮೂಲಿಕೆಗಳಿಗೆ ಬೆರೆಯಿಸಿ ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಾರೆ.
  • ಇದಕ್ಕಾಗಿ ಸಿಯೆರಾದ ಡ್ರಗ್ಸ್ ತಯಾರಕರು, ವ್ಯಸನಿಗಳು ಸಮಾಧಿಗಳನ್ನು ಅಗೆದು ಮಾನವನ ಮೂಳೆಗಳನ್ನು ಕದ್ದೊಯ್ದು ಅದರಿಂದ ಕುಶ್ ಡ್ರಗ್ಸ್ ತಯಾರಿಸುತ್ತಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
  • ‘ಕುಶ್ ಒಮ್ಮೆ ಸೇವಿಸಿದ ವ್ಯಕ್ತಿ ಅದಿಲ್ಲದೇ ಬದುಕಲು ಆಗುವುದಿಲ್ಲ ಎನ್ನುವ ಮಟ್ಟಿಗೆ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾನೆ. ಕ್ರಮೇಣ ಕೈ ಕಾಲು ದೇಹದ ಭಾಗಗಳಲ್ಲಿ ತೂತು ಬಿದ್ದಿರುವ ಹಾಗೇ ವಿಕಾರವಾಗಿ ಬದಲಾಗುತ್ತಾನೆ. ನಂತರ ಅಂಗಾಂಗಗಳ ವೈಪಲ್ಯದಿಂದ ಸಾವು ಸಂಭವಿಸುತ್ತದೆ’ ಇದರಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
  • ಪೂರ್ವ ಆಫ್ರಿಕಾದ ಕೆಲ ರಾಷ್ಟ್ರಗಳಲ್ಲದೇ ಇಂಗ್ಲೆಂಡ್ ಹಾಗೂ ಅಮೆರಿಕಕ್ಕೂ ಇದರಿಂದ ಕೂಡ ಕೆಲವರು ಮೃತಪಟ್ಟಿದ್ದಾರೆ.

ಸಿಯೆರಾ ಲಿಯೋನ್

  • ರಾಜಧಾನಿ: ಫ್ರೀಟೌನ್
  • ಸಿಯೆರಾ ಲಿಯೋನ್ ಉತ್ತರ ಮತ್ತು ಪೂರ್ವದಲ್ಲಿ ಗಿನಿಯಾ, ದಕ್ಷಿಣದಲ್ಲಿ ಲೈಬೀರಿಯಾ ಮತ್ತು ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರದಿಂದ ಸುತ್ತುವರೆದಿದೆ
  • ಅಧ್ಯಕ್ಷ: ಜೂಲಿಯಸ್ ಮಾಡಾ ಬಿಯೊ
  • 90 ಲಕ್ಷ ಜನಸಂಖ್ಯೆ ಹೊಂದಿರುವ ಸಿಯೆರಾ ಲಿಯೋನ್ನಲ್ಲಿ ಕಾಲು ಭಾಗ ಜನ ಬಡತನದ ರೇಖೆ ಕೆಳಗಿದ್ದಾರೆ. 1961ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿದೆ.