Published on: October 10, 2023

ಖಾಸಗಿ ವಲಯದ ಅತಿ ದೊಡ್ಡ ಚಿನ್ನದ ಗಣಿ

ಖಾಸಗಿ ವಲಯದ ಅತಿ ದೊಡ್ಡ ಚಿನ್ನದ ಗಣಿ

ಸುದ್ದಿಯಲ್ಲಿ ಎಲ್ಲಿದೆ?  ಖಾಸಗಿ ವಲಯದ ಅತಿ ದೊಡ್ಡ ಚಿನ್ನದ ಗಣಿಯು ಮುಂದಿನ ವರ್ಷದ ಕೊನೆಯ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಡೆಕ್ಕನ್ ಗೋಲ್ಡ್ ಮೈನ್ಸ್ ಲಿ. (ಡಿಜಿಎಂ ಎಲ್) ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿರುವ ದೇಶದ ಏಕೈಕ ಚಿನ್ನ ಶೋಧ ಸಂಸ್ಥೆಯಾಗಿದೆ.
  • ಅಭಿವೃದ್ಧಿ: ಖಾಸಗಿ ಕ್ಷೇತ್ರದ ಮೊದಲ ಚಿನ್ನದ ಗಣಿಯನ್ನು ಜಿಯೊಮೈಸೂರ್ ಸರ್ವಿ ಸಸ್ ಲಿ. ಕಂಪನಿಯು ಅಭಿವೃದ್ಧಿಪಡಿಸುತ್ತಿದೆ.
  • ಇರುವ ಸ್ಥಳ : ಈ ಗಣಿಯು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಜೊನ್ನಗಿರಿಯಲ್ಲಿದೆ.
  • 2013ರಲ್ಲಿ ಗಣಿ ಮಂಜೂರು ಆಗಿತ್ತು.
  • ಗೋಲ್ಡ್ ಮೈನ್ಸ್ ನ ಇನ್ನೊಂದು ಚಿನ್ನದ ಗಣಿ ಯೋಜನೆ ಕಿರ್ಗಿಸ್ತಾನದಲ್ಲಿದೆ. ಈ ಯೋಜನೆಯಲ್ಲಿ ಡಿಜಿಎಂ ಎಲ್ ಶೇ 60ರಷ್ಟು ಪಾಲುಹೊಂದಿದೆ. ಇದು 2024ರ ನವೆಂಬರ್ ಒಳಗೆ ಕಾರ್ಯಾಚರಣೆ ಆರಂಭಿಸಲಿದೆ.
  • ಕರ್ನಾಟಕದ ಹಟ್ಟಿಯಲ್ಲಿನ ಚಿನ್ನದ ನಿಕ್ಷೇಪ ಪತ್ತೆಯಲ್ಲಿಯೂ ಈ ಕಂಪನಿ ಮಹತ್ವದ ಪಾತ್ರ ವಹಿಸಿತ್ತು.

ನಿಮಗಿದು ತಿಳಿದಿರಲಿ

  • 330 ಮೆಟ್ರಿಕ್ ಟನ್ (MT) ಉತ್ಪಾದನೆಯೊಂದಿಗೆ, ಚೀನಾ ವಿಶ್ವದ ಅತಿದೊಡ್ಡ ಚಿನ್ನದ ಉತ್ಪಾದಕವಾಗಿದೆ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
  • ಭಾರತದಲ್ಲಿ ಮುಖ್ಯವಾಗಿ ಮೂರು ಚಿನ್ನದ ಪ್ರದೇಶಗಳಿವೆ. – ಕರ್ನಾಟಕದ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್, ಕರ್ನಾಟಕದ ರಾಯಚೂರು ಜಿಲ್ಲೆಯ ಹಟ್ಟಿ ಗೋಲ್ಡ್ ಫೀಲ್ಡ್ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಮಗಿರಿ ಗೋಲ್ಡ್ ಫೀಲ್ಡ್.

ಕರ್ನಾಟಕದ ಚಿನ್ನದ ಗಣಿ

  • ದೇಶದಲ್ಲೇ ಅತೀ ಹೆಚ್ಚು ಬಂಗಾರ ಉತ್ಪಾದನೆಯಾಗೋದು ಕರ್ನಾಟಕದಲ್ಲೇ. ಜಗತ್ತಿನಲ್ಲಿ ಭಾರತವು ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾಗಿದ್ದು, ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ಹಾಗಾಗಿ, ಹೆಚ್ಚಿನ ಪ್ರಮಾಣದ ಚಿನ್ನವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಜುಲೈ ತಿಂಗಳಲ್ಲಿ ಚಿನ್ನದ ಆಮದು ಸುಂಕವನ್ನು 7.5 ಪ್ರತಿಶತದಿಂದ 12.5 ಪ್ರತಿಶತಕ್ಕೆ ಏರಿಕೆ ಮಾಡಲಾಗಿದೆ.
  • ಕರ್ನಾಟಕ ಚಿನ್ನದ ನಾಡು ಎಂದೇ ಖ್ಯಾತವಾಗಿದೆ. ಕೋಲಾರ್ ಗೋಲ್ಡ್ ಫೀಲ್ಡ್(KGF)‌ನಿಂದ ಬ್ರಿಟಿಷ್ ಕಾಲದಿಂದಲೂ ಚಿನ್ನವನ್ನು ಸಂಸ್ಕರಿಸಲಾಗುತ್ತಿತ್ತು. 20 ವರ್ಷಗಳ ಹಿಂದೆ ಈ ಗಣಿಯನ್ನು ಬಂದ್ ಮಾಡಲಾಗಿದೆ.