Published on: January 2, 2023

ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ) ದ ಸಾಧನೆ

ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ) ದ ಸಾಧನೆ

ಸುದ್ದಿಯಲ್ಲಿ ಏಕಿದೆ? “BRO ದ ಅರುಣಾಂಕ್ ಯೋಜನೆ ಅರುಣಾಚಲ ಪ್ರದೇಶದ TCC-ಮಜಾ ರಸ್ತೆಯಲ್ಲಿರುವ ಉತ್ತರ ಗಡಿಯುದ್ದಕ್ಕೂ ಆಯಕಟ್ಟಿನ ಸ್ಥಳವಾದ ಮಜಾಗೆ ಸಂಪರ್ಕವನ್ನು ಸಾಧಿಸಿದೆ.

ಮುಖ್ಯಾಂಶಗಳು

  • ಚೀನಾ-ಭಾರತ ಗಡಿ ಪ್ರದೇಶ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚಾಲ್ತಿಯಲ್ಲಿರುವ ಉದ್ವಿಗ್ನತೆಯ ನಡುವೆಯೇ ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ) ಮಹತ್ವದ ಮೈಲಿಗಲ್ಲು ಸಾಧಿಸಿದೆ.
  • ಬಿಆರ್ ಒ ಯಾಂಗ್ಟ್ಸೆ ನಂತರ ಮತ್ತೊಂದು ಪ್ರಮುಖ ಪ್ರದೇಶವನ್ನು ಸಂಪರ್ಕಿಸಿದ್ದು, ಈ ಸಾಧನೆ ಮಾಡಲು BRO ಸಿಬ್ಬಂದಿ ಮತ್ತು ಯಂತ್ರೋಪಕರಣಗಳು ಭಾರೀ ಮಳೆ, ಕಠಿಣ ಭೂಪ್ರದೇಶ ಮತ್ತು ಅಪಾಯಕಾರಿ ಕೆಲಸದ ಪರಿಸ್ಥಿತಿಗಳ ಮೂಲಕ ಹಗಲಿರುಳು ಶ್ರಮಿಸಿ ಮಜಾ ಪ್ರದೇಶ ಸಂಪರ್ಕಿಸಿ ರಸ್ತೆ ನಿರ್ಮಾಣ ಮಾಡಿದೆ.
  • ಮಜಾ ಭೂಪ್ರದೇಶ: 1962 ರಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಪ್ರಮುಖ ಯುದ್ಧದಲ್ಲಿ ಹೋರಾಡಿದ ಮೇಲ್ ಸುಬನ್ಸಿರಿ ಜಿಲ್ಲೆಯಲ್ಲಿ ಮಜಾ ನೆಲೆಗೊಂಡಿದೆ. ಈ ಭೂಪ್ರದೇಶವು ಒರಟಾದ ಮತ್ತು ಪರ್ವತಮಯವಾಗಿದ್ದು, 7,000 ಅಡಿಗಳಿಂದ 18,000 ಅಡಿಗಳವರೆಗಿನ ಶಿಖರಗಳಿಂದ ಕೂಡಿದೆ.

ಅರುಣಾಂಕ್ ಯೋಜನೆ

  • ಅರುಣಾಂಕ್ ಯೋಜನೆಯು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಸರಿಸುಮಾರು 1113 ಕಿಮೀ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ.
  • ರಕ್ಷಣಾ ಸಚಿವಾಲಯದ ಪ್ರಮುಖ ಅಂಗವಾದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಇದನ್ನು ಕಾರ್ಯಗತಗೊಳಿಸುತ್ತಿದೆ.
  • ಅರುಣಾಂಕ್ ಯೋಜನೆಯು ಅರುಣಾಚಲ ಪ್ರದೇಶದ ಹೆಸರನ್ನು ಇಡಲಾಗಿದೆ.