Published on: February 1, 2023

ಗಣರಾಜ್ಯೋತ್ಸವ ಪರೇಡ್

ಗಣರಾಜ್ಯೋತ್ಸವ ಪರೇಡ್


ಸುದ್ದಿಯಲ್ಲಿ ಏಕಿದೆ? ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಉತ್ತರಾಖಂಡದ ಸ್ತಬ್ಧ ಚಿತ್ರಕ್ಕೆ ಬಹುಮಾನ ದೊರೆತಿದೆ.


ಮುಖ್ಯಾಂಶಗಳು

  • ಮಾನಸ್ ಖಂಡ್ ಎಂಬ ಶೀರ್ಷಿಕೆಯಡಿ ಉತ್ತರಾಖಂಡ್ ನ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿತ್ತು. ಗರ್ಹ್ವಾಲ್ ಪ್ರದೇಶದಲ್ಲಿನ ಚಾರ್ ಧಾಮ್ ಮಾದರಿಯಲ್ಲಿ ಕುಮಾನ್ ಪ್ರದೇಶದಲ್ಲಿನ ಪ್ರಮುಖ ದೇವಾಲಯಗಳನ್ನು ಸಂಪರ್ಕಿಸುವ ಹಾಗೂ ಅದನ್ನು ಅಭಿವೃದ್ಧಿಪಡಿಸುವ ಮಾನಸ್ ಖಂಡ್ ಕಾರಿಡಾರ್ ಯೋಜನೆಯನ್ನು ಪ್ರದರ್ಶಿಸಲು ಈ ಸ್ತಬ್ಧಚಿತ್ರವನ್ನು ತಯಾರಿಸಲಾಗಿತ್ತು. ಇದರ ಜೊತೆಗೆ ರಾಜ್ಯದಲ್ಲಿನ ಶ್ರೀಮಂತ ವನ್ಯಜೀವಿ ಸಂಕುಲದ ಅಂಶಗಳನ್ನೂ ಪ್ರದರ್ಶಿಸಲಾಗಿತ್ತು.
  • ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಸ್ತಬ್ಧ ಚಿತ್ರಗಳು 2 ಹಾಗೂ 3 ನೇ ಸ್ಥಾನಗಳನ್ನು ಅನುಕ್ರಮವಾಗಿ ಪಡೆದಿವೆ. ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳೂ ಸಹ ತಮ್ಮ ಸ್ತಬ್ಧ ಚಿತ್ರಗಳನ್ನು ಧಾರ್ಮಿಕ ಥೀಮ್ ನಡಿಯಲ್ಲೇ ತಯಾರಿಸಿದ್ದವು.
  • ಸೇನೆಯ ಪಂಜಾಬ್ ರೆಜಿಮೆಂಟ್ ಕೇಂದ್ರ ತಂಡ ಮೂರು ಸೇನಾಪಡೆಗಳ ಪೈಕಿ ಅತ್ಯುತ್ತಮ ಮಾರ್ಚಿಂಗ್ ತಂಡ ಎನಿಸಿಕೊಂಡಿದೆ
  • ಮೈ ಗೌರ್ನಮೆಂಟ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ನಡೆಸಿದ ಸಾರ್ವಜನಿಕ ಪೋಲ್ ನಲ್ಲಿ ಭಾರತೀಯ ವಾಯುಪಡೆ ಮೊದಲ ಸ್ಥಾನವನ್ನು ಗಳಿಸಿದೆ.