Published on: September 2, 2023

ಗೀತಿಕಾ ಶ್ರೀವಾಸ್ತವ್‌

ಗೀತಿಕಾ ಶ್ರೀವಾಸ್ತವ್‌

ಸುದ್ದಿಯಲ್ಲಿ ಏಕಿದೆ? ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯ ರಾಯಭಾರ ವ್ಯವಹಾರಗಳ ಪ್ರಭಾರ ಮುಖ್ಯಸ್ಥರಾಗಿ ಗೀತಿಕಾ ಶ್ರೀವಾಸ್ತವ್‌ ಅವರನ್ನು ನೇಮಿಸಲಾಗಿದೆ. ಈ ಮೂಲಕ ಆ ಹುದ್ದೆಗೇರಿದ ಪ್ರಥಮ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಗೀತಿಕಾ ಪಾತ್ರರಾಗಿದ್ದಾರೆ.

ಮುಖ್ಯಾಂಶಗಳು

  • ವಿದೇಶದಲ್ಲಿ ರಾಯಭಾರಿ ಅಥವಾ ಹೈಕಮಿಷನರ್‌ ಅವರ ಅನುಪಸ್ಥಿತಿಯಲ್ಲಿ ರಾಜತಾಂತ್ರಿಕ ಕೆಲಸಗಳನ್ನು ತಾತ್ಕಾಲಿಕವಾಗಿ ನೋಡಿಕೊಳ್ಳಬೇಕಾಗುತ್ತದೆ. ಕಾಮನ್‌ವೆಲ್ತ್‌ ದೇಶಗಳ ನಡುವಿನ ರಾಜತಾಂತ್ರಿಕತೆ ಕಾರ್ಯಾಚರಣೆಗಳನ್ನು ‘ಹೈಕಮಿಷನ್‌’ ಎಂದೂ, ಕಾಮನ್‌ವೆಲ್ತ್‌ ಅಲ್ಲದ ದೇಶಗಳ‌ನ್ನು ‘ರಾಯಭಾರಿ’ಗಳೆಂದು ಕರೆಯಲಾಗುತ್ತದೆ.
  • ಇಸ್ಲಾಮಾಬಾದ್ ಮತ್ತು ನವದೆಹಲಿಯಲ್ಲಿರುವ ಭಾರತ- ಪಾಕಿಸ್ತಾನಿ ರಾಯಭಾರಿ ಕಚೇರಿಯಲ್ಲಿ ಆಗಸ್ಟ್ 2019ರಿಂದ ಯಾವ ರಾಯಭಾರಿ ಅಧಿಕಾರಿಗಳು ಇಲ್ಲ. ಈ ಎರಡು ರಾಯಭಾರಿ ಕಚೇರಿಗಳು ಚಾರ್ಜ್ ಡಿ’ ಅಫೇರ್‌ಗಳ ನೇತೃತ್ವದಲ್ಲಿ ನಡೆಯುತ್ತಿದೆ.

ಗೀತಿಕಾ ಶ್ರೀವಾಸ್ತವ್‌

  • ಮೂಲತಃ ಉತ್ತರ ಪ್ರದೇಶದವರಾಗಿದ್ದಾರೆ
  • 2005ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿಯಾಗಿರುವ ಗೀತಿಕಾ ಆವರು ಈ ಮೊದಲು ಭಾರತ ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
  • ಗೀತಿಕಾ ಅವರು ಈಗಾಗಲೇ ಚೀನಾ‌ದ ರಾಯಭಾರ ಕಚೇರಿಯಲ್ಲಿ 2007ರಿಂದ 2009ರವರೆಗೆ ಕಾರ್ಯನಿರ್ವಹಿಸಿದ್ದರು.