Published on: July 14, 2023

ಗುರುತ್ವ ರಂಧ್ರ

ಗುರುತ್ವ ರಂಧ್ರ

ಸುದ್ದಿಯಲ್ಲಿ ಏಕಿದೆ? ಹಿಂದೂ ಮಹಾಸಾಗರದಲ್ಲಿ ಕಂಡುಬರುವ ‘ಗುರುತ್ವ ರಂಧ್ರ’ (ಗ್ರ್ಯಾವಿಟಿ ಹೋಲ್) ಸೃಷ್ಟಿಯ ಹಿಂದಿರುವ ಕಾರಣವನ್ನು ಬೆಂಗಳೂರು ಮೂಲದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಂಶೋಧಕರು ಕಂಡು ಹಿಡಿದಿದ್ದಾರೆ.

ಮುಖ್ಯಾಂಶಗಳು

  • ‘ಜಿಎಫ್ಝಡ್ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೊಸೈನ್ಸಸ್’ನ ಸಂಶೋಧಕರೊಂದಿಗೆ ಐಐಎಸ್ಸಿ ವಿಜ್ಞಾನಿಗಳು(ದೇಬಂಜನ್‌ ಪಾಲ್‌ ಮತ್ತು ಆತ್ರೇಯ ಘೋಷ್‌) ಈ ಬಗ್ಗೆ ಸಂಶೋಧನೆಯನ್ನು ಜಿಯೋಫಿಸಿಕಲ್‌ ರಿಸರ್ಚ್‌ ಲೆಟರ್ಸ್‌ನಲ್ಲಿ ಪ್ರಕಟಿಸಿದ್ದಾರೆ.  ಈ ಭೌಗೋಳಿಕ ವಿದ್ಯಮಾನ ಕುರಿತು ನಡೆಸಿರುವ ಅಧ್ಯಯನದ ವರದಿ ‘ಜಿಯೊಫಿಜಿಕಲ್ ರಿಸರ್ಚ್‌ ಲೆಟರ್ಸ್ ’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
  • ‘ಗುರುತ್ವ ರಂಧ್ರ’ದಿಂದಾಗಿ ಸಾಗರ ಮೇಲ್ಮೈನಲ್ಲಿ ಕಂಡುಬರುವ ಈ ಅಸಮಾನತೆಯನ್ನು ‘ಇಂಡಿಯನ್ ಓಷನ್ ಜಿಯಾಯ್ಡ್ ಲೊ’ (ಐಒಜಿಎಲ್ (ವೈಜ್ಞಾನಿಕ ಹೆಸರು)) ಎಂದು ಕರೆಯಲಾಗುತ್ತದೆ.
  • ಹಿಂದೂ ಮಹಾಸಾಗರದಲ್ಲಿ ಗುರುತ್ವಾಕರ್ಷಣೆಯ ರಂಧ್ರವು ವಾಸ್ತವವಾಗಿ ಪರಿಪೂರ್ಣ ಗೋಳವಾಗಿ ರೂಪುಗೊಂಡಿಲ್ಲ
  • ಗುರುತ್ವಾಕರ್ಷಣೆಯ ಅನಿಯಮಿತತೆಯು ಭೂಮಿ ಮೇಲೆ ವೈಪರೀತ್ಯಗಳನ್ನು ಉಂಟುಮಾಡುತ್ತದೆ. ಅದಲ್ಲದೇ ಗುರುತ್ವಾಕರ್ಷಣೆಯ ಬಲದಲ್ಲಿನ ವ್ಯತ್ಯಾಸಗಳು ವಿವಿಧ ಸ್ಥಳಗಳಲ್ಲಿ ಭೂಮಿಯ ಆಕಾರವನ್ನು ಪ್ರಭಾವಿಸುತ್ತದೆ.
  • ಗ್ರಹದ ತಿರುಗುವಿಕೆ, ಗುರುತ್ವಾಕರ್ಷಣೆಯ ಬಲಗಳು ಮತ್ತು ಆಂತರಿಕ ರಚನೆಯಿಂದಲೂ ಗುರುತ್ವಾಕರ್ಷಣ ರಂಧ್ರದ ಆಕಾರವು ಪ್ರಭಾವಿತವಾಗಿರುತ್ತದೆ.

 ‘ಗುರುತ್ವ ರಂಧ್ರ’ ಸೃಷ್ಟಿಯ ಕಾರಣ

  • ಶ್ರೀಲಂಕಾದ ದಕ್ಷಿಣಕ್ಕೆ ಈ ‘ಗುರುತ್ವ ರಂಧ್ರ’ ಇದ್ದು, 30 ಲಕ್ಷ ಚದರ ಕಿ.ಮೀ.ಗಿಂತಲೂ ಅಧಿಕ ವಿಸ್ತೀರ್ಣ ಹೊಂದಿದೆ. ‘ಈ ಪ್ರದೇಶದಲ್ಲಿ ಗುರುತ್ವಾಕರ್ಷಣ ಬಲವು ದುರ್ಬಲವಾಗಿರುವುದೇ ಗುರುತ್ವ ರಂಧ್ರ ಸೃಷ್ಟಿಯಾಗಲು ಕಾರಣ’.
  • ಗುರುತ್ವಾಕರ್ಷಣೆಯ ರಂಧ್ರ ರೂಪುಗೊಳ್ಳಲು ಬಿಸಿಯಾದ ಅಲೆಗಳು ಹಾಗೂ ಕಡಿಮೆ-ಸಾಂದ್ರತೆಯ ಮ್ಯಾಗ್ಮಾ ಪ್ರತಿಬಾರಿಯೂ ಅಗತ್ಯವಿದೆ
  • ಸುಮಾರು 20 ಮಿಲಿಯನ್‌ ವರ್ಷಗಳ ಹಿಂದೆ ಅಂತಹ ಮೊದಲ ಬಿಸಿಯಾದ ಅಲೆ ಕಾಣಿಸಿಕೊಂಡಿದ್ದು, ಅದರ ತೀವ್ರತೆಗೆ ಗುರುತ್ವಾಕರ್ಷಣೆಯ ರಂಧ್ರವು ಕಾಣಿಸಿಕೊಂಡಿದೆ. ಇಂಡಿಯನ್‌ ಒಷನ್‌ ಜಿಯೋಲ್ಡ್‌ ಲೋ (IOGL) ಅನ್ನು ಉತ್ಪಾದಿಸುವಲ್ಲಿ ಬಿಸಿ ಅಲೆಗಳು ಅವಿಭಾಜ್ಯ ಅಂಗವಾಗಿವೆ ಎಂಬುದನ್ನು ಸಂಶೋಧನೆ ತಿಳಿಸಿದೆ.
  • ಹಿಂದೂ ಮಹಾಸಾಗರದಲ್ಲಿ ಈ ಗುರುತ್ವಾಕರ್ಷಣ ರಂಧ್ರ ಉಂಟಾಗಿರುವುದಕ್ಕೆ ಆಳವಾದ ಮ್ಯಾಂಟಲ್‌ ಸಮೂಹದ ಕೊರತೆಯಿಂದ ಉಂಟಾಗುತ್ತದೆ. ಉತ್ತರ ಹಿಂದೂ ಮಹಾಸಾಗರದಲ್ಲಿ 300 ಕಿಮೀ ಆಳದಿಂದ 900 ಕಿಮೀ ವರೆಗೆ ವಿಸ್ತರಿಸಿರುವ ಬಿಸಿಯಾದ, ಹಗುರವಾದ ವಸ್ತುಗಳೊಂದಿಗೆ ಈ ಕುಳಿ ಉಂಟಾಗಿದೆ ಎಂದು ನಮ್ಮ ಅಧ್ಯಯನ ವಿವರಿಸುತ್ತದೆ. ಇದು ಆಫ್ರಿಕನ್ ಸೂಪರ್‌ ಪ್ಲೂಮ್‌ನಿಂದ ಹುಟ್ಟಿಕೊಂಡಿದೆ.

‘ಗುರುತ್ವ ರಂಧ್ರ’ ಎಂದರೇನು?

  • ಸಾಂದ್ರತೆ ಮತ್ತು ದ್ರವ್ಯರಾಶಿಯ ವಿತರಣೆಯಲ್ಲಿನ ವ್ಯತ್ಯಾಸಗಳಿಂದ ಭೂಮಿಯ ಗುರುತ್ವಾಕರ್ಷಣೆ ಕ್ಷೇತ್ರ ಏಕರೂಪ ಆಗಿರುವುದಿಲ್ಲ. ಕೆಲವು ಪ್ರದೇಶಗಳಲ್ಲಿ ದಟ್ಟವಾದ ಸಾಂದ್ರತೆ ಇದ್ದರೆ, ಕೆಲವು ಪ್ರದೇಶಗಳಲ್ಲಿ ಕಡಿಮೆ ಸಾಂದ್ರತೆ ಇರುತ್ತದೆ. ಸಾಂದ್ರತೆ ಮತ್ತು ದ್ರವ್ಯರಾಶಿಯಲ್ಲಿನ ಈ ವ್ಯತ್ಯಾಸಗಳು ಗುರುತ್ವದ ಆಕರ್ಷಣೆಯಲ್ಲಿ ವ್ಯತ್ಯಾಸಗಳನ್ನು ಸೃಷ್ಟಿಸುತ್ತವೆ. ಇದು ಜಿಯೋಡ್‌ನ ರಚನೆಗೆ ಕಾರಣವಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.
  • ‘ಗುರುತ್ವ ರಂಧ್ರ’ ಇರುವ ಪ್ರದೇಶದಲ್ಲಿ ಸಮುದ್ರ ಮಟ್ಟವು ಜಾಗತಿಕ ಸರಾಸರಿ ಮಟ್ಟಕ್ಕಿಂತ 100 ಮೀ ಟರ್ನಷ್ಟು ಕೆಳಗೆ ಇದೆ. ಗುರುತ್ವಾಕರ್ಷಣೆ ಬಲವು ಕಡಿಮೆ ಇರುವ ಕಾರಣ ಈ ಸ್ಥಳದಲ್ಲಿ ಸಮುದ್ರದ ಮೇ ಲ್ಮೈ 106 ಮೀಟರ್ನಷ್ಟು ಆಳಕ್ಕೆ ಕುಸಿದಿದೆ.

ಸಂಶೋಧನೆಗೆ ಸಹಾಯಕವಾದ  ಅಂಶಗಳು: ಕಳೆದ 140 ಮಿಲಿಯನ್ ವರ್ಷಗಳಲ್ಲಿ ಇಂಡಿಯನ್‌ ಪ್ಲೇಟ್‌ ದೊಡ್ಡ ಗೊಂಡ್ವಾನಾಲ್ಯಾಂಡ್‌ನಿಂದ ಬೇರ್ಪಡಲು ಪ್ರಾರಂಭಿಸಿದಾಗ ಟೆಕ್ಟೋನಿಕ್ ಪ್ಲೇಟ್‌ಗಳು ಹೇಗೆ ಪರಸ್ಪರ ಚಲಿಸಿದವು ಎಂಬುದನ್ನು ಸಂಶೋಧಕರ ತಂಡವು ಗಮನಿಸಿದೆ. 2018ರಲ್ಲಿ ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಅಂಡ್ ಓಷನ್ ರಿಸರ್ಚ್‌ನ ಸಂಶೋಧಕರು ವಿರೂಪ ವಲಯದ ಉದ್ದಕ್ಕೂ ನಿಯೋಜಿಸಲಾದ ಸಿಸ್ಮೋಮೀಟರ್‌ಗಳು ಸಂಗ್ರಹಿಸಿದ ಡೇಟಾ ಆಧರಿಸಿ ಈ ವಿಶ್ಲೇಷಣೆಯನ್ನು ಮಾಡಲಾಗಿದೆ.