Published on: February 13, 2024

ಗೋಲ್ಡನ್ ಐಟಿ ಕಾರಿಡಾರ್

ಗೋಲ್ಡನ್ ಐಟಿ ಕಾರಿಡಾರ್

ಸುದ್ದಿಯಲ್ಲಿ ಏಕಿದೆ? ಕೇರಳದ ನಿಲಂಬೂರಿನಿಂದ ಕರ್ನಾಟಕದ ನಂಜನಗೂಡಿಗೆ ಸಂಪರ್ಕ ಕಲ್ಪಿಸಲು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ ರೈಲು ಮಾರ್ಗದ ಯೋಜನೆಗೆ ಪರಿಸರಕ್ಕೆ ಹಾನಿಯುಂಟು ಮಾಡಬಹುದೆಂದು ವಿರೋಧ ವ್ಯಕ್ತವಾಗುತ್ತಿದೆ.

ಮುಖ್ಯಾಂಶಗಳು

  • ಗೋಲ್ಡನ್ ಐಟಿ ಕಾರಿಡಾರ್: ಇದು ಕೇರಳದ ನಿಲಂಬೂರ್‌ನಿಂದ ಕರ್ನಾಟಕದ ನಂಜನಗೂಡಿಗೆ ಸಂಪರ್ಕಿಸುವ 236 ಕಿಮೀ ಬ್ರಾಡ್-ಗೇಜ್ ರೈಲು ಮಾರ್ಗವಾಗಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ 19.7 ಕಿಲೋಮೀಟರ್ ಹಾಡು ಹೋಗುತ್ತದೆ.
  • ಯೋಜನಾ ವೆಚ್ಚವನ್ನು ಆರಂಭದಲ್ಲಿ 2010 ರಲ್ಲಿ ಯೋಜನಾ ಆಯೋಗವು ಅನುಮೋದಿಸಿತು ಮತ್ತು ಕೇರಳ ಸರ್ಕಾರವು ತಾಂತ್ರಿಕವಾಗಿ ಕಾರ್ಯಸಾಧ್ಯವೆಂದು ಪರಿಗಣಿಸಿತು, ಈ ಮಾರ್ಗ ಕೇರಳದಿಂದ ಬೆಂಗಳೂರಿಗೆ 70 ಕಿಮೀ ನಷ್ಟು ಹೆಚ್ಚಿನ ಪ್ರಯಾಣವನ್ನು ಕಡಿತಗೊಳಿಸುತ್ತದೆ.

ಯೋಜನೆಯ ಉದ್ದೇಶ:

ಅಂತರರಾಜ್ಯ ಸಂಪರ್ಕವನ್ನು ಸುಧಾರಿಸಲು ಮತ್ತು ಪ್ರಯಾಣದ ಸಮಯ ಮತ್ತು ದೂರವನ್ನು ಕಡಿಮೆ ಮಾಡುತ್ತದೆ. ಕೇರಳದ ಕೋಝಿಕ್ಕೋಡ್ ಮತ್ತು ಕರ್ನಾಟಕದ ಕೊಳ್ಳೇಗಾಲಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸುತ್ತದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನ:

  • ಉದ್ಯಾನವನವು ಚಾಮರಾಜನಗರ ಜಿಲ್ಲೆಯ ಗುಂಡುಲಪೇಟೆ ತಾಲ್ಲೂಕಿನಲ್ಲಿದೆ.
  • ರಚನೆ: ವೇಣುಗೋಪಾಲ ವನ್ಯಜೀವಿ ಉದ್ಯಾನವನದ ಅರಣ್ಯ ಪ್ರದೇಶಗಳನ್ನು ಸೇರಿಸಿ 1985 ರಲ್ಲಿ 874.20 ಚ.ಕಿ.ಮೀ ವಿಸ್ತೀರ್ಣದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನವನ್ನು ರಚಿಸಲಾಯಿತು. ಈ ಮೀಸಲು ಪ್ರದೇಶವನ್ನು 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ತರಲಾಯಿತು.
  • ಉದ್ಯಾನವನವು ನೀಲಗಿರಿ ಬಯೋಸ್ಫಿಯರ್ ರಿಸರ್ವ್‌ನ ಭಾಗವಾಗಿದ್ದು, ಇದು ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಸಂರಕ್ಷಿತ ಪ್ರದೇಶವಾಗಿದೆ ಮತ್ತು ದಕ್ಷಿಣ ಏಷ್ಯಾದಲ್ಲಿ ಕಾಡು ಆನೆಗಳ ಅತಿದೊಡ್ಡ ವಾಸಸ್ಥಾನವಾಗಿದೆ.
  • ಇದು ದಕ್ಷಿಣದಲ್ಲಿ ಮುದುಮಲೈ ಟೈಗರ್ ರಿಸರ್ವ್ (ತಮಿಳುನಾಡು), ನೈಋತ್ಯದಲ್ಲಿ ವಯನಾಡ್ ವನ್ಯಜೀವಿ ಅಭಯಾರಣ್ಯ (ಕೇರಳ) ಮತ್ತು ವಾಯುವ್ಯ ಭಾಗದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಹೊಂದಿದೆ. (ಕಬಿನಿ ಜಲಾಶಯವು ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಪ್ರತ್ಯೇಕಿಸುತ್ತದೆ)
  • ಭಾರತದಲ್ಲಿನ 12 UNESCO ಬಯೋಸ್ಪಿಯರ್ ರಿಸರ್ವ್‌ಗಳಲ್ಲಿ ಒಂದಾಗಿದೆ.