Published on: April 16, 2023

ಗೋಲ್ಡ್ ಕ್ಲಸ್ಟರ್

ಗೋಲ್ಡ್ ಕ್ಲಸ್ಟರ್

ಸುದ್ದಿಯಲ್ಲಿ ಏಕಿದೆ? ರಾಜ್ಯದಲ್ಲೇ ಪ್ರಥಮ ಗೋಲ್ಡ್‌ ಕ್ಲಸ್ಟರ್‌ ಅನ್ನು ಹಾಸನದಲ್ಲಿ ಆರಂಭಿಸಲು ಯೋಜಿಸಲಾಗಿದೆ.  10 ಕೋಟಿ ರೂಪಾಯಿ ವೆಚ್ಚದಲ್ಲಿ ಗೋಲ್ಡ್‌ ಕ್ಲಸ್ಟರ್‌ ತೆರೆಯಲು ಈಗಾಗಲೇ ಡಿಪಿಆರ್‌ ಸಿದ್ಧಪಡಿಸಲಾಗಿದೆ.

ಮುಖ್ಯಾಂಶಗಳು

  • ಗೋಲ್ಡ್‌ ಕ್ಲಸ್ಟರ್‌ ಪ್ರಾರಂಭಿಸುವ ಕುರಿತು ಟೆಕ್ಸಾಸ್‌ ಸಂಸ್ಥೆ ಡಿಪಿಆರ್‌ ಸಿದ್ಧಪಡಿಸಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಅನುಮತಿ ನೀಡಿದೆ.
  • ಆಭರಣವನ್ನು ಅಕ್ಕಸಾಲಿಗ ಕೈಯಲ್ಲಿ ತಯಾರಿಸುವುದನ್ನು ಕಡಿಮೆ ಮಾಡಿ ತಂತ್ರಜ್ಞಾನ ಮೊರೆ ಹೋಗುತ್ತಿದ್ದಾನೆ. ಇದರಿಂದ ಸಮಯ ಉಳಿತಾಯದ ಜತೆಗೆ ಹೊಸ, ಹೊಸ ವಿನ್ಯಾಸದ ಆಭರಣ ತಯಾರಿಕೆ ಸಾಧ್ಯವಿದೆ.
  • ಅನುದಾನ : ಕೇಂದ್ರ ಮತ್ತು ರಾಜ್ಯ ಸರಕಾರ ಶೇ.80 ಬಂಡವಾಳ ನೀಡಿದರೆ ಸೊಸೈಟಿ ಶೇ.20 ರಷ್ಟು ಬಂಡವಾಳ ತೊಡಗಿಸಬೇಕಾಗುತ್ತದೆ.

ಪ್ರಯೋಜನಗಳು

  • ಹೊಸ ಕಾಲದ ವಿಧವಿಧದ ಶೈಲಿಯ ಚಿನ್ನದ ಆಭರಣ ತಯಾರಿಸಲು ವರ್ತಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಗೋಲ್ಡ್ ಕ್ಲಸ್ಟರ್ ರೂಪುಗೊಳ್ಳಲಿದೆ.
  • ಕ್ಲಸ್ಟರ್​ನಿಂದ ಹೆಚ್ಚಿನ ಉದ್ಯೋಗಾವಕಾಶ ಗ್ರಾಮೀಣ ಭಾಗದಲ್ಲಿಯೇ ರೂಪುಗೊಳ್ಳುವ ಸಾಧ್ಯತೆ ಇದೆ.ಇದರ ಮೂಲಕ ಆಭರಣ ತಯಾರಕರಿಗೆ ಆಭರಣಗಳನ್ನು ಸ್ಥಳೀಯ ಮಟ್ಟದಲ್ಲಿಯೇ ರೂಪಿಸಿಕೊಲ್ಳಲು ಸಹಾಯವಾಗಲಿದೆ.
  • ಈ ಗೋಲ್ಡ್ ಕ್ಲಸ್ಟರ್​ನಿಂದ ಆಭರಣ ಕೊಂಡುಕೊಳ್ಳುವವರಿಗೂ ಸಹಾಯವಾಗಲಿದೆ. ಗ್ರಾಹಕರು ಹೇಳಿದ ಸಮಯಕ್ಕೇ ಚಿನ್ನಾಭರಣಗಳು ಅವರ ಕೈಗೆ ಸೇರುವ ಸಾಧ್ಯತೆ ಈ ಗೋಲ್ಡ್ ಕ್ಲಸ್ಟರ್​ನಿಂದ ನಿರ್ಮಾಣವಾಗಲಿದೆ.