Published on: August 3, 2023

ಚುಟುಕು ಸಮಾಚಾರ : 1 ಆಗಸ್ಟ್ 2023

ಚುಟುಕು ಸಮಾಚಾರ : 1 ಆಗಸ್ಟ್ 2023

  • ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರ ಕಾರ್ಯ ವೈಖರಿ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ‘ಲೋಕ ಸ್ಪಂದನ’ ಕ್ಯೂಆರ್ ಕೋಡ್ ವ್ಯವಸ್ಥೆ ರೂಪಿಸಲಾಗಿದೆ.
  • ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ–1969ಕ್ಕೆ ತಿದ್ದುಪಡಿ ತರುವ ಉದ್ದೇಶದ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಈ ಕಾಯ್ದೆಜಾರಿಗೆ ಬಂದು 54 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಿದ್ದುಪಡಿ ಮಾಡುತ್ತಿರುವುದು ಗಮನಾರ್ಹ. ‘ಸಾಮಾಜಿಕ ಬದಲಾವಣೆ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಗೆ ತಕ್ಕಂತೆ ಈ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ’.
  • ಲಡಾಕ್ನ ಹಿಮಾಲಯದಲ್ಲಿರುವ ಪರ್ಕಾ ಚಿಕ್ ನೀರ್ಗಲ್ಲು ಅತಿವೇಗವಾಗಿ ಕರಗುತ್ತಿದ್ದು, ಇದರಿಂದ ಹಿಮಗಡ್ಡೆಗಳಿಂದ ಕೂಡಿರುವ ಮೂರು ಹೊಸ ಸರೋವರಗಳು ರೂಪುಗೊಳ್ಳುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಇವು ಭಾರಿ ಹಿಮಪ್ರವಾಹಕ್ಕೂ ಕಾರಣವಾಗುವ ಸಂಭವ ಇದೆ ಎಂದು ಡೆಹ್ರಾಡೂನ್ನ ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ವಿಜ್ಞಾನಿಗಳು ಕೈಗೊಂಡ ಅಧ್ಯಯನವೊಂದು ತಿಳಿಸಿದೆ.
  • ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಲೋಕಮಾನ್ಯ ತಿಲಕ್ ರಾಷ್ಟ್ರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕರ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ಪುಣೆಯಲ್ಲಿರುವ ‘ತಿಲಕ ಸ್ಮಾರಕ ಮಂದಿರ ಟ್ರಸ್ಟ್’ 1983ರಲ್ಲಿಈ ಪ್ರಶಸ್ತಿಯನ್ನು ನೀಡಲಾರಂಭಿಸಿದೆ.  ಈ ಪ್ರಶಸ್ತಿಯನ್ನು ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಿದ ಮತ್ತು ದೇಶಕ್ಕೆ ಗಮನಾರ್ಹ ಮತ್ತು ಅಸಾಧಾರಣ ಕೊಡುಗೆ ನೀಡಿದವರಿಗೆ ಪ್ರದಾನ ಮಾಡಲಾಗುತ್ತದೆ.  ಪ್ರತೀ ವರ್ಷ ಆಗಸ್ಟ್ 1 ರಂದು ಲೋಕಮಾನ್ಯ ತಿಲಕ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಾರಿಯ ಪ್ರಶಸ್ತಿಗೆ ಭಾಜನರಾಗಿರುವ ಪ್ರಧಾನಿ ಮೋದಿ ಅವರು ಪ್ರಶಸ್ತಿಪಡೆದ 41ನೇ ವ್ಯಕ್ತಿಯಾಗಲಿದ್ದಾರೆ. ಇದುವರೆಗೆ ಡಾ. ಶಂಕರ್ ದಯಾಳ್ ಶರ್ಮಾ, ಪ್ರಣಬ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ. ಇಂದಿರಾ ಗಾಂಧಿ, ಮನಮೋಹನ್ ಸಿಂಗ್. ಎನ್. ಆರ್ ನಾರಾಯಣ ಮೂರ್ತಿ. ಇ. ಶ್ರೀಧರ್ ಸೇರಿ ಹಲವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ
  • ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ ಹೆಣ್ಣು ಹುಲಿ ಮರಿಗೆ ಪ್ಯಾರಾಲಿಂಪಿಕ್ ವಿಜೇತೆ ಅವನಿ ಲೆಖರಾ ಅವರ ಹೆಸರನ್ನು ಇಡಲಾಗಿದೆ. 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಲೆಖರಾ ಅವರು ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದರು. ಒಟ್ಟು ಮೂರು ಹುಲಿ ಮರಿಗಳು ಜನಿಸಿದ್ದು, ಇನ್ನೆರಡು ಹುಲಿ ಮರಿಗೆ ಚಿರಂಜೀವಿ ಮತ್ತು ಚಿರಾಯು ಎಂದು ನಾಮಕರಣ ಮಾಡಲಾಗಿದೆ. ಈ ಹಿಂದೆ ಜನಿಸಿದ ಹೆಣ್ಣು ಮರಿಗೆ(ಟಿ–17) ಕಾಮೆನ್ವೆಲ್ತ್ನ ಚಿನ್ನದ ಪದಕ ವಿಜೇತೆ ಕೃಷ್ಣಪೂನಿಯಾ ಅವರ ಹೆಸರನ್ನು ಇಡಲಾಗಿತ್ತು’. ‘ದೇಶದಲ್ಲಿಹುಲಿಗಳು ವಿನಾಶದ ಅಂಚಿನಲ್ಲಿದ್ದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1973ರಲ್ಲಿ ‘ಪ್ರಾಜೆಕ್ಟ್ ಟೈಗರ್’ ಅನ್ನು ಪ್ರಾರಂಭಿಸಿದರು. ಇದು ದೇಶದಲ್ಲಿಹುಲಿಗಳ ಸಂಖ್ಯೆಯಲ್ಲಿಅಭೂತಪೂರ್ವ ಹೆಚ್ಚಳಕ್ಕೆ ಕಾರಣವಾಯಿತು’.