Published on: July 2, 2023

ಚುಟುಕು ಸಮಾಚಾರ : 1 ಜುಲೈ 2023

ಚುಟುಕು ಸಮಾಚಾರ : 1 ಜುಲೈ 2023

  • ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಂತ್ರಜ್ಞಾನ ಬಳಸುತ್ತಿದ್ದು, ಆನೆಗಳನ್ನು ಪತ್ತೆ ಹಚ್ಚಲು ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ‘ಥರ್ಮಲ್ ಡ್ರೋನ್’ ಬಳಕೆ ಮಾಡಲಾಗುತ್ತಿದೆ.
  • ಬೆಂಗಳೂರು ಮೂಲದ ಡ್ರೋನ್ ತಂತ್ರಜ್ಞಾನ ಸ್ಟಾರ್ಟ್ ಅಪ್, ಭೂ ನಕ್ಷೆಯ ಜಗತ್ತಿನ ಅತಿ ದೊಡ್ಡ ಯೋಜನೆಯ ಭಾಗವಾಗಿರಲಿದೆ.  ಈ ಹಿಂದೆ ಆರವ್ ಅನ್ ಮ್ಯಾನ್ಡ್ ಸಿಸ್ಟಮ್ಸ್ ಎಂಬ ಸಂಸ್ಥೆಯಾಗಿದ್ದ ಏರಿಯೊ, ಈ ಯೋಜನೆಯ ಭಾಗವಾಗಿರಲಿದೆ. ಕರ್ನಾಟಕ ರಾಜ್ಯ ಸರ್ಕಾರದ ಮುಕ್ತ ಟೆಂಡರ್ ಪ್ರಕ್ರಿಯೆಯಲ್ಲಿ ಆಲ್ಟೆರಾ ಮತ್ತು ನಿಯೋಜಿಯೋ (Allterra ಮತ್ತು NeoGeo), ಎರಡು ಜಿಯೋಸ್ಪೇಷಿಯಲ್ ಸಂಸ್ಥೆಗಳು ಲ್ಯಾಂಡ್ ಪಾರ್ಸೆಲ್ ಮ್ಯಾಪಿಂಗ್ ಗುತ್ತಿಗೆಯನ್ನು ಪಡೆದಿವೆ. ಎರಡು ಸಂಸ್ಥೆಗಳು ಕರ್ನಾಟಕದ ಹತ್ತು ಜಿಲ್ಲೆಗಳನ್ನು ಒಳಗೊಂಡಿರುವ 86,000 ಚದರ ಕಿಮೀಗಳನ್ನು ಮ್ಯಾಪಿಂಗ್ ಮಾಡಲು ಏರಿಯೊದ ಸಹಾಯವನ್ನು ಪಡೆದಿವೆ.
  • ಕೇಂದ್ರ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (National Research Foundation) ಮಸೂದೆ 2023 ಅನ್ನು ಸಂಸತ್ತಿನಲ್ಲಿ ಮಂಡಿಸಲು ಅನುಮೋದನೆ ನೀಡಲಾಗಿದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಭಾರತದಾದ್ಯಂತ ನಾವೀನ್ಯತೆಯ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.
  • 5 ನೇ ವಾರ್ಷಿಕ ಯುಕೆ ಇಂಡಿಯಾ ಪ್ರಶಸ್ತಿ ಸಮಾರಂಭವನ್ನು ವೀಕ್ ಅಂಗವಾಗಿ ಇಂಡಿಯನ್ ಗ್ಲೋಬಲ್ ಫೋರಮ್ ಆಯೋಜಿಸಿತ್ತು. ಕ್ರೀಡಾ ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರತಿ ಮತ್ತು ಮಹಿಳಾ ಬಾಕ್ಸಿಂಗ್ನಲ್ಲಿ ಭಾರತದ ಮೊದಲ ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಅವರಿಗೆ ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.’ಎಲಿಜಬೆತ್: ದಿ ಗೋಲ್ಡನ್ ಏಜ್’ ಚಲಚಿತ್ರದ ನಿರ್ದೇಶಕ ಶೇಖರ್ ಕಪೂರ್ ಅವರು ಎರಡೂ ದೇಶಗಳಲ್ಲಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.
  • ಒಡಿಶಾ ಗುಣವತ್ತಾಸಂಕಲ್ಪ್ (ಒಡಿಶಾ ಕ್ವಾಲಿಟಿ ಮಿಷನ್): ಒಡಿಶಾ ಸರ್ಕಾರ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ಮತ್ತು ವಿವಿಧ ಉದ್ಯಮ ಸಂಘಗಳು ಪ್ರಾರಂಭಿಸಿದ ಸಹಯೋಗದ ಉಪಕ್ರಮವಾಗಿದೆ. ಈ ಮಿಷನ್ ಒಡಿಶಾರಾಜ್ಯದ ವಿವಧ ಕ್ಷೇತ್ರಗಳಲ್ಲಿ ಗುಣಮಟ್ಟವನ್ನು ಆದ್ಯತೆಯನ್ನಾಗಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ.ಇದು ಸಾರ್ವಜನಿಕ ಸೇವೆ, ಪಾರಂಪರಿಕ ಪ್ರವಾಸೋದ್ಯಮ, ಆರೋಗ್ಯ ರಕ್ಷಣೆ, ಶಿಕ್ಷಣ, ಕೌಶಲ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ಕ್ಷೇತ್ರಗಳನ್ನು ಒಳಗೊಂಡಿದೆ. ಗುಣಮಟ್ಟವನ್ನು ಒತ್ತಿಹೇಳುವ ಮೂಲಕ, ಒಡಿಶಾವು ಭಾರತದ ಬೆಳವಣಿಗೆಯಲ್ಲಿ ತನ್ನನ್ನು ಪ್ರಮುಖ ರಾಜ್ಯವಾಗಿ ಇರಿಸಿಕೊಳ್ಳುವ ಗುರಿಯನ್ನು ಹೊಂದಿದೆ.