Published on: March 13, 2024

ಚುಟುಕು ಸಮಾಚಾರ : 12 ಮಾರ್ಚ್ 2024

ಚುಟುಕು ಸಮಾಚಾರ : 12 ಮಾರ್ಚ್ 2024

  • ಕೃತಕ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದರಿಂದ ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಜೊತೆಗೆ ಗೋಬಿ ಮಂಚೂರಿ ತಯಾರಿಸುವಾಗ ಕೃತಕ ಬಣ್ಣ ಬಳಸುವುದನ್ನು ಕೂಡ ನಿಷೇಧಿಸಿ ಸರ್ಕಾರ ಆದೇಶಿಸಿದೆ. ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬೆರಕೆ ಹಿನ್ನೆಲೆ ಈ ಹಿಂದೆ ವಿವಿಧ ಸ್ಯಾಂಪಲ್ ಗಳ ಪರೀಕ್ಷೆಗೆ ನೀಡಲಾಗಿತ್ತು ಗೋಬಿ ಮಂಚೂರಿಯಲ್ಲಿ ಮಾದರಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ ಹಾಗೂ ಬಳಕೆಯ ಬಣ್ಣ ಸೇರಿದಂತೆ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಕಲಬೆರಕೆ ಕಲರ್ ಬಳಕೆ ಮಾಡೋದು ಮತ್ತು ಟಾರ್ಟ್ರಾಸೈನ್ ಸನ್ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಎಂಬ ರಾಸಾಯನಿಕಗಳು ಇದರಲ್ಲಿ ಕಂಡುಬಂದಿವೆ ಕಾಟನ್ ಕ್ಯಾಂಡಿಯಲ್ಲಿ ಕೂಡಾ ಟಾರ್ಟ್ರಾಸೈನ್ ಸನ್ಸೆಟ್ ಯೆಲ್ಲೋ ಮತ್ತು ವಿಶೇಷವಾಗಿ ರೋಡಮೈನ್ ಬಿ ಬಳಸಲಾಗಿದೆ.
  • ಮಿಷನ್ ದಿವ್ಯಾಸ್ತ್ರ ಎಂದು ಕರೆಯಲ್ಪಡುವ ಸ್ವಂತವಾಗಿ ಹಲವು ಟಾರ್ಗೆಟ್ ಗಳನ್ನು ಗುರಿಯಾಗಿಸುವ (ಬಹು ಸಿಡಿತಲೆ) ಸಾಮರ್ಥ್ಯಗಳೊಂದಿಗೆ ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್ವಿ) ತಂತ್ರಜ್ಞಾನವನ್ನು ಹೊಂದಿದ ಅಗ್ನಿ-5 ಕ್ಷಿಪಣಿಯ ಭಾರತದ ಇತ್ತೀಚಿನ ಪರೀಕ್ಷೆಯು ಯಶಸ್ವಿಯಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮಿಷನ್ ದಿವ್ಯಾಸ್ತ್ರವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
  • ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಎ ಎಂ ಖಾನ್ವಿಲ್ಕರ್(ಅಜಯ್ ಮಾಣಿಕ್ರಾವ್ ಖಾನ್ವಿಲ್ಕರ್) ಅವರು ಲೋಕಪಾಲ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಲೋಕಪಾಲ ಮುಖ್ಯಸ್ಥರಿಗೆ ಪ್ರಮಾಣ ವಚನ ಬೋಧಿಸಿದರು.
  • ಭಾರತದ ಪ್ರಧಾನಿ ಅವರು ಅರುಣಾಚಲ ಪ್ರದೇಶದಲ್ಲಿ ವಿಶ್ವದ ಅತಿ ಎತ್ತರದಲ್ಲಿ (13,000 ಅಡಿ) ನಿರ್ಮಿಸಲಾಗಿರುವ ಆಯಕಟ್ಟಿನ, ಪ್ರಮುಖವಾದ, ಬಹು ನಿರೀಕ್ಷಿತ ಮತ್ತು ಉದ್ದವಾದ ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು. ಸಂಪರ್ಕ: ಈ ಸುರಂಗ ಮಾರ್ಗವು ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ವಾಸ್ತವ ಗಡಿ ನಿಯಂತ್ರಣ ರೇಖೆ (LAC) ತಲುಪಲು ಇದು ಏಕೈಕ ಮಾರ್ಗವಾಗಿದೆ.  ಪ್ರಾಜೆಕ್ಟ್ ವರ್ತಕ್ ಅಡಿಯಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ನಿಂದ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವು ಟ್ರಾನ್ಸ್-ಅರುಣಾಚಲ ಹೆದ್ದಾರಿ ವ್ಯವಸ್ಥೆಯ ಒಂದು ಘಟಕವಾಗಿದೆ.