Published on: September 16, 2023

ಚುಟುಕು ಸಮಾಚಾರ : 14 ಸೆಪ್ಟೆಂಬರ್ 2023

ಚುಟುಕು ಸಮಾಚಾರ : 14 ಸೆಪ್ಟೆಂಬರ್ 2023

  • ಕರ್ನಾಟಕದ ಮೊದಲ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಕೇಂದ್ರ ಬೆಂಗಳೂರಿನ ದೇವನಹಳ್ಳಿಯಲ್ಲಿ ಆರಂಭಗೊಳ್ಳಲಿದೆ.  15 ವರ್ಷಕ್ಕಿಂತ ಹಳೆಯ ವಾಹನಗಳನ್ನು ರದ್ದಿಗೆ ಹಾಕಲಾಗುತ್ತದೆ. ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಕೊಪ್ಪಳದಲ್ಲಿ ಇನ್ನೂ ಎರಡು ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.
  • ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕೇರಳ ಆರೋಗ್ಯ ಇಲಾಖೆ ನಿಪಾ ವೈರಸ್ನಿಂದ ಕೋಯಿಕ್ಕೋಡ್ನಲ್ಲಿ ಇಬ್ಬರು ಸಾವಿಗೀಡಾಗಿರುವುದನ್ನು ದೃಢಪಡಿಸಿದ ನಂತರ, ಮಡಿಕೇರಿ, ದಕ್ಷಿಣ ಕನ್ನಡ ಗಡಿಜಿಲ್ಲೆಗಳಲ್ಲೂ ಕರ್ನಾಟಕ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ನಿಪಾ ವೈರಸ್ (NiV) ಎಂದರೆ :ಒಂದು ಝೂನೋಟಿಕ್ ವೈರಸ್ (ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ) ಮತ್ತು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ಜನರ ನಡುವೆ ಹರಡಬಹುದು. Pteropodidae ಕುಟುಂಬದ ಹಣ್ಣು ತಿನ್ನುವ  ಬಾವಲಿಗಳು ನಿಪಾ ವೈರಸ್ನ  ಆತಿಥೇಯ ಪ್ರಾಣಿಗಳಾಗಿವೆ
  • ಭಾರತೀಯ ವಿಜ್ಞಾನಿಗಳು ಮಹತ್ವಾಕಾಂಕ್ಷಿಯ ‘ಸಮುದ್ರಯಾನ’ ಯೋಜನೆಗೆ ಸಿದ್ಧತೆ ಆರಂಭಿಸಿದ್ದು, ‘ಮತ್ಸ್ಯ- 6000’ ಸಬ್ಮರ್ಸಿಬಲ್ ನೌಕೆ ಮೂಲಕ ಮೂವರು ಮಾನವರನ್ನು ಸಮುದ್ರದಾಳದ 6 ಕಿ.ಮೀ. ದೂರಕ್ಕೆ ಕರೆದೊಯ್ಯುತ್ತಿದ್ದಾರೆ. ಆಳವಾದ ಸಾಗರವನ್ನು ಅನ್ವೇಷಿಸಲು ಇದು ಭಾರತದ ಮೊದಲ ಮಾನವಸಹಿತ ಮಿಷನ್ ಆಗಿದೆ. ಕೇಂದ್ರ ಸರಕಾರ ‘ನೀಲಿ ಆರ್ಥಿಕತೆ’ (ಬ್ಲ್ಯೂ ಎಕನಾಮಿ) ಭಾಗವಾಗಿ ಈ ಯೋಜನೆ ಕೈಗೊಂಡಿದೆ. ನೋಡಲ್ ಸಚಿವಾಲಯ: ಭೂ ವಿಜ್ಞಾನ ಸಚಿವಾಲಯ (MoES)