Published on: January 16, 2024

ಚುಟುಕು ಸಮಾಚಾರ : 16 ಜನವರಿ 2024

ಚುಟುಕು ಸಮಾಚಾರ : 16 ಜನವರಿ 2024

  • ಇತ್ತೀಚೆಗೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಒಡಿಶಾದ ಕರಾವಳಿಯ ಚಂಡೀಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ (ITR) ನಿಂದ ಹೊಸ ತಲೆಮಾರಿನ ಆಕಾಶ ಕ್ಷಿಪಣಿ ಎನ್ ಜಿಯ ಯಶಸ್ವಿ ಹಾರಾಟ ಪರೀಕ್ಷೆಯನ್ನು ನಡೆಸಿತು. ಅಭಿವೃದ್ಧಿಪಡಿಸಿದವರು: ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್
  • ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ) ಕೈಗೊಂಡಿರುವ ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಕೂಲಿ ಕಾರ್ಮಿಕರಿಗೆ ಅವಧಿ ವಿಮಾ ಸೌಲಭ್ಯ ಜಾರಿಗೊಳಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವರು ಅನುಮೋದನೆ ನೀಡಿದ್ದಾರೆ.
  • ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ನಿಖರವಾಗಿ ನೀಡಲು ಹೊಸ ತಂತ್ರಜ್ಞಾನಗಳ ಅಳವಡಿಸಿಕೊಳ್ಳಲು ಯೋಜಿಸುತ್ತಿದೆ ಮತ್ತು ‘ಪಂಚಾಯತ್ ಮೌಸಮ್ ಸೇವೆ’ಯನ್ನು ಜಾರಿಗೊಳಿಸುವ ಮೂಲಕ ಐಎಂಡಿ ತನ್ನ 150ನೇ ವರ್ಷವನ್ನು ಆಚರಿಸುತ್ತಿದೆ. ‘ಹವಾಮಾನ ಮುನ್ಸೂಚನೆ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ, ಮೆಷಿನ್ ಲರ್ನಿಂಗ್ (ಎಂ ಎಲ್) ಮತ್ತು ಕ್ಷಿಪ್ರವಾಗಿ ಕಾರ್ಯನಿರ್ವಹಿಸುವ ಸೂಪರ್ ಕಂಪ್ಯೂಟರ್ಗಳನ್ನು ಬಳಸಲು ಯೋಜನೆ ರೂಪಿಸಲಾಗಿದೆ’
  • ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಫೈನಲ್ ಪಂದ್ಯದಲ್ಲಿ ಚೀನಾದ ಲಿಯಾಂಗ್ ವೀಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ಪರಾಭವಗೊಂಡು, ರನ್ನರ್ ಅಪ್ ಸ್ಥಾನ ಪಡೆದರು. ಸಾತ್ವಿಕ್ ಮತ್ತು ಚಿರಾಗ್ ಅವರು ಚೀನಾದ ಈ ಜೋಡಿಯೊಂದಿಗೆ ಒಟ್ಟು 5 ಬಾರಿ ಮುಖಾಮುಖಿಯಾಗಿದ್ದು, ನಾಲ್ಕು ಬಾರಿ ಸೋತಿದ್ದಾರೆ. ಆದರೆ, ಕಳೆದ ವರ್ಷ ಕೊರಿಯಾ ಓಪನ್ ಸೂಪರ್ 500 ಟೂರ್ನಿಯಲ್ಲಿ ಮಾತ್ರ ಭಾರತದ ಆಟಗಾರರು ಗೆಲುವು ಸಾಧಿಸಿದ್ದರು.
  • ಆಪ್ಟಿಕಲ್–8 ಉಪಗ್ರಹ: ಗುಪ್ತಚರ ಮಾಹಿತಿಯನ್ನು ಒದಗಿಸುವ ಉಪಗ್ರಹಗಳನ್ನು ಒಳಗೊಂಡ ರಾಕೆಟ್ ಅನ್ನು ಜಪಾನ್ ಯಶಸ್ವಿಯಾಗಿ ಉಡಾವಣೆ ಮಾಡಿತು. ಉತ್ತರ ಕೊರಿಯಾದ ಸೇನಾ ನೆಲೆಗಳ ಚಲನವಲನಗಳ ಮೇಲೆ ನಿಗಾ ಇಡಲು ಹಾಗೂ ನೈಸರ್ಗಿಕ ವಿಕೋಪ ತಡೆಗೆ ಕ್ರಮ ರೂಪಿಸುವ ಉದ್ದೇಶದಿಂದ ಈ ಉಪಗ್ರಹವನ್ನು ಉಡಾವಣೆ ಮಾಡಿದೆ. ಮಿತ್ಸುಬಿಶಿ ಹೆವಿ ಇಂಡಸ್ಟ್ರೀಸ್ ಲಿಮಿಡೆಟ್, ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಎಚ್2ಎ ರಾಕೆಟ್ ಮೂಲಕ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸಿತು. ಉಪಗ್ರಹವು ನಿಯೋಜಿತ ಕಕ್ಷೆ ಸೇರಿದೆ. ಪ್ರತಿಕೂಲ ಹವಾಮಾನದಲ್ಲಿ ಕಾರ್ಯ ನಿರ್ವಹಿಸುವ ಮಿತಿಗಳಿದ್ದರೂ ಉಪಗ್ರಹವು ಸ್ಪಷ್ಟ ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ. 1998ರಲ್ಲಿ ಉತ್ತರ ಕೊರಿಯಾವು ಜಪಾನ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದಾಗಿನಿಂದ ಜಪಾನ್ ಗುಪ್ತಚರಮಾಹಿತಿ ನೀಡುವ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ.