Published on: July 19, 2023

ಚುಟುಕು ಸಮಾಚಾರ : 18 ಜುಲೈ 2023

ಚುಟುಕು ಸಮಾಚಾರ : 18 ಜುಲೈ 2023

  • ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಗಣಿ ಬಾಧಿತ ಗ್ರಾಮಗಳ ಜನರ ಆರೋಗ್ಯ ತಪಾಸಣೆಗಾಗಿ ನೂತನವಾಗಿ ಸಂಚಾರ ಆರೋಗ್ಯ ಘಟಕ ಸೇವೆ ಜಾರಿಗೆ ತರಲಾಗಿದೆ. ಚಿತ್ರದುರ್ಗ ಆರೋಗ್ಯ ಸೇವೆ ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ ಈ ಸೇವೆಯನ್ನು ರಾಜ್ಯ ಸರ್ಕಾರ ಜಾರಿ ಮಾಡುತ್ತಿದೆ. ಜಿಲ್ಲೆಯಲ್ಲಿ 163 ಗ್ರಾಮಗಳನ್ನು ಗುರುತಿಸಲಾಗಿದೆ’.
  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ(ಬಿಟಿಆರ್) ಕೆಲಸ ಮಾಡುತ್ತಿರುವ ಪಶುವೈದ್ಯ ಡಾ. ವಸೀಂ ಮಿರ್ಜಾ ಅವರು ಕೇಂದ್ರ ಸರ್ಕಾರದ ಪ್ರತಿಷ್ಠಿತ ಗಜ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಗಸ್ಟ್ 12 ರಂದು ವಿಶ್ವ ಆನೆ ದಿನದಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮೀರ್ಜಾ ಅವರಿಗೆ ಗಜ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಈ ವರ್ಷ ಆಗಸ್ಟ್ 12 ರಂದು ಒಡಿಶಾದ ಮಹಾನದಿ ಆನೆ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಅಂಗುಲ್ ನಲ್ಲಿ ವಿಶ್ವ ಆನೆ ದಿನ ಕಾರ್ಯಕ್ರಮ ನಡೆಯಲಿದೆ.
  • ಪೋರ್ಟ್ ಬ್ಲೇರನಲ್ಲಿ ನಿರ್ಮಿಸಿರುವ ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ನೂತನ ಏಕೀಕೃತ ಟರ್ಮಿನಲ್ ಕಟ್ಟಡವು ವಾರ್ಷಿಕ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
  • ಭಾರತ ಸರ್ಕಾರವು ತನ್ನ ಎಲ್ಲಾ ನಾಗರಿಕರಿಗೆ ಅಂತರ್ಗತ ಮತ್ತು ಸಮಾನ ಸಮಾಜವನ್ನು ರಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಅಟಲ್ ವಯೋ ಅಭ್ಯುದಯ ಯೋಜನೆ (AVYAY), ಭಾರತದಲ್ಲಿ ಹಿರಿಯ ನಾಗರಿಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಸಮಗ್ರ ಉಪಕ್ರಮವಾಗಿದೆ.
  • ಹುಲಿ ಬೇಟೆಯ ನೆಲೆ ವಿಸ್ತರಿಸುವ ದೃಷ್ಟಿಯಿಂದ ಜಾರ್ಖಂಡ್ನ ಪಲಾಮು ಹುಲಿ ಸಂರಕ್ಷಿತ ಪ್ರದೇಶ(ಪಿಟಿಆರ್)ದಲ್ಲಿ ಜಿಂಕೆಗಳಿಗಾಗಿ ನಾಲ್ಕು ಸೂಕ್ಷ್ಮ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
  • ಭಾರತ-ಜಪಾನ್ ವ್ಯಾಪಾರ ಶೃಂಗಸಭೆ: ಕರ್ನಾಟಕದಲ್ಲಿ ಉದ್ಯಮ ವಿಸ್ತರಿಸುತ್ತಿರುವ ಜಪಾನ್ ಮೂಲದ ಕಂಪೆನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಕ್ಟೋಬರ್ 2022 ರ ಹೊತ್ತಿಗೆ 228 ಕಂಪನಿಗಳು ರಾಜ್ಯದಾದ್ಯಂತ 537 ಕಚೇರಿಗಳನ್ನು ಸ್ಥಾಪಿಸಿವೆ. ಆಯೋಜನೆ : ಪಿಡಬ್ಲ್ಯೂಸಿ ಮತ್ತು ಇಂಡೋ-ಜಪಾನ್ ಬ್ಯುಸಿನೆಸ್ ಕೌನ್ಸಿಲ್ (IJBC) ಸಹಯೋಗದಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (BCIC). ನಡೆದ ಸ್ಥಳ :ಬೆಂಗಳೂರು   ವಿಷಯ : ಮೇಕ್ ಇನ್ ಇಂಡಿಯಾ ವಿತ್ ಜಪಾನ್ ಫಾರ್ ದಿ ಗ್ಲೋಬ್”

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ 

  • ಭಾರತದ ಲಾಂಗ್ಜಂಪ್ ಆಟಗಾರ ಮುರಳಿ ಶ್ರೀಶಂಕರ್, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಬೆಳ್ಳಿ ಪದಕ ಗೆಲ್ಲುವ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆಯನ್ನೂ ಪಡೆದರು. ಅವರು 8.37 ಮೀ. ದೂರ ಜಿಗಿದು ಎರಡನೇ ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿದರು. ಭುವನೇಶ್ವರದ ರಾಷ್ಟ್ರೀಯ ಅಂತರ ರಾಜ್ಯ ಕೂಟದಲ್ಲಿ ವಿಶ್ವದ ಎರಡನೇ ಅತ್ಯುತ್ತಮ ಜಿಗಿತ (8.41 ಮೀ.) ದಾಖಲಿಸಿ ಅವರು ವಿಶ್ವ ಚಾಂಪಿಯನ್ಷಿಪ್ಗೂ ಅರ್ಹತೆ ಪಡೆದಿದ್ದಾರೆ.
  • 4×400 ಮೀ. ಮಿಕ್ಸೆಡ್ ರಿಲೇ ಓಟದಲ್ಲಿ ರಾಜೇಶ್ ರಮೇಶ್, ಐಶ್ವರ್ಯಾ ಮಿಶ್ರಾ, ಅಮೋಜ್ ಜಾಕೋಬ್ ಮತ್ತು ಶುಭಾ ವೆಂಕಟೇಶನ್ ಅವರನ್ನೊಳಗೊಂಡ ತಂಡ ಚಿನ್ನಗೆದ್ದಿತು.
  • ಪುರುಷರ ಹೈಜಂಪ್ನಲ್ಲಿ ಸರ್ವೇಶ್ ಅನಿಲ್ ಕುಶಾರೆ ಅವರು ಬೆಳ್ಳಿಯ ಸಾಧನೆ ಮಾಡಿದರು. ಕುಶಾರೆ ಅವರಿಗೆ ಇದು ಮೊದಲ ಪ್ರಮುಖ ಅಂತರರಾಷ್ಟ್ರೀಯ ಕೂಟದ ಪದಕ ಎನಿಸಿತು. ಈ ಹಿಂದೆ 2019ರ ದಕ್ಷಿಣ ಏಷ್ಯಾ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದರು.
  • ಹೆಪ್ಟಾಥ್ಲಾನ್ನಲ್ಲಿ ಸ್ವಪ್ನಾ ಬರ್ಮನ್ ಅವರು ಬೆಳ್ಳಿಯ ಸಾಧನೆ ಮಾಡಿದರು.
  • ಪುರುಷರ 400 ಮೀ. ಹರ್ಡಲ್ಸ್ ಓಟವನ್ನು 49.09 ಸೆ.ಗಳಲ್ಲಿಓಡಿ ಕಂಚಿನ ಪದಕ ಗೆಲ್ಲುವ ಹಾದಿಯಲ್ಲಿ ಸಂತೋಷ್ ಕುಮಾರ್ ತಮ್ಮ ಶ್ರೇಷ್ಠ ವೈಯಕ್ತಿಕ ಸಾಧನೆ ದಾಖಲಿಸಿದರು.