Published on: July 20, 2023

ಚುಟುಕು ಸಮಾಚಾರ : 19 ಜುಲೈ 2023

ಚುಟುಕು ಸಮಾಚಾರ : 19 ಜುಲೈ 2023

  • ಭಾರತ ಮತ್ತು ನೇಪಾಳ ನಡುವಿನ ಗಡಿಯಾಚೆಗಿನ ರೈಲ್ವೆ ಸಂಪರ್ಕ ಆರಂಭವಾಗಿದೆ. ಜಯನಗರ – ಬಿಜಾಲ್ಪುರ-ಬಾರ್ಡಿಬಾಸ್ನ ಕುರ್ತಾ-ಬಿಜಲ್ಪುರ ರೈಲು ವಿಭಾಗವು ಕಾರ್ಯಾರಂಭ ಮಾಡಿದೆ.
  • ಅಧಿಕ ತಾಪಮಾನದಲ್ಲಿ ಬೆಳೆಯುವ ಮತ್ತು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಅಣಬೆ ತಳಿಗಳನ್ನು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು(ಐಐಎಚ್ಆರ್) ಅಭಿವೃದ್ಧಿಪಡಿಸಿದೆ. ಮ್ಯಾಕ್ರೋ ಸೈಬೆ ತಳಿ ಹೆಸರಿನ ಅಣಬೆಯನ್ನು ಬೆಂಗಳೂರಿನ ಸಿದ್ದಾಪುರದಿಂದ ಸಂಗ್ರಹಿಸಲಾಗಿದ್ದು, ಟ್ಯೂಬರ್ ಆಯ್ಸ್ಟರ್ ಅಣಬೆಯನ್ನು ತ್ರಿಪುರಾದ ಮಾರುಕಟ್ಟೆಯಿಂದ ಸಂಗ್ರಹಿಸಲಾಗಿದೆ.
  • ತಮಿಳುನಾಡಿನ ಮೊದಲ ವಿಮಾನ ತರಬೇತಿ ಸಂಸ್ಥೆಗೆ (ಎಫ್ಟಿಒ) ನಾಗರಿಕ ವಿಮಾನಯಾನ ನಿರ್ದೇಶನಾಲಯ ಅನುಮೋದನೆ ನೀಡಿದೆ. ಇಕೆವಿಐ ಏರ್ ಟ್ರೇನಿಂಗ್ ಆರ್ಗನೈಸೇಶನ್ ಪ್ರೈ.ಲಿ. ತಮಿಳುನಾಡಿನ ಸೇಲಂ ವಿಮಾನ ನಿಲ್ದಾಣದಲ್ಲಿರುವ ಲಿಮಿಟೆಡ್ FTO ಸ್ಥಾಪಿಸಲು ಅನುಮೋದನೆಯನ್ನು ಪಡೆದುಕೊಂಡಿದೆ. “ಇದು ಇಡೀ ತಮಿಳುನಾಡು ರಾಜ್ಯದ ಏಕೈಕ ವಿಮಾನ ತರಬೇತಿ ಸಂಸ್ಥೆಯಾಗಿದೆ”. ಇದು ಡಿಜಿಸಿಎ ಅನುಮೋದಿಸಿದ ದೇಶದ 36ನೇ ಫ್ಲೈಯಿಂಗ್ ತರಬೇತಿ ಸಂಸ್ಥೆಯಾಗಿದೆ.
  • ಕೃತಕ ಬುದ್ಧಿಮತ್ತೆಯ (ಎಐ) ಸುದ್ದಿವಾಚಕಿ ಮಾಯಾ ಕನ್ನಡದಲ್ಲಿ ಸುದ್ದಿ ವಾಚಿಸಿದ್ದಾಳೆ. ಸುದ್ದಿವಾಹಿನಿ ನ್ಯೂಸ್ಫಸ್ಟ್ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.