Published on: September 4, 2023

ಚುಟುಕು ಸಮಾಚಾರ : 2 ಸೆಪ್ಟೆಂಬರ್ 2023

ಚುಟುಕು ಸಮಾಚಾರ : 2 ಸೆಪ್ಟೆಂಬರ್ 2023

  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಅಕ್ರಮ ತಡೆಯಲು ಇದೇ ಮೊದಲ ಬಾರಿಗೆ ‘ಕೃತಕ ಬುದ್ದಿಮತ್ತೆ’ (ಎಐ) ತಂತ್ರಜ್ಞಾನ ಬಳಸಲು ಹಾಗೂ ಪರೀಕ್ಷಾ ಕೊಠಡಿಗಳ ಮೇಲ್ವಿಚಾರಕರು ಧರಿಸುವ ಶರ್ಟ್ನ ಬಟನ್ ಅಥವಾ ಕಾಲರ್ನಲ್ಲಿ ಅತಿಸೂಕ್ಷ್ಮ ಕ್ಯಾಮೆರಾ ಅಳವಡಿಸಿ ಇಡೀ ಕೇಂದ್ರದಲ್ಲಿ ನಡೆಯುವ ಚಟುವಟಿಕೆಯನ್ನು ಚಿತ್ರೀಕರಿಸಿ, ನಿಗಾ ವಹಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲು ಲೋಕಸೇವಾ ಆಯೋಗ (ಕೆಪಿಎಸ್ಸಿ) ನಿರ್ಧರಿಸಿದೆ. ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಈ ಸುಧಾರಣಾ ಕ್ರಮಗಳ ಅನುಷ್ಠಾನಕ್ಕೆ ಆಯೋಗದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸೆಪ್ಟೆಂಬರ್ 2023ರ ನಂತರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಈ ವ್ಯವಸ್ಥೆಜಾರಿಗೆ ಬರಲಿದೆ.
  • 2019 ರ ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ  ಹಾಸನ ಲೋಕಸಭಾ ಕ್ಷೇತ್ರ ಸಂಸದ ಪ್ರಜ್ವಲ್ ರೇವಣ್ಣ ಸಂಸತ್ ಸದಸ್ಯತ್ವವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಪ್ರಜ್ವಲ್ ರೇವಣ್ಣ ಅವರಿಗೆ ಒಂದು ತಿಂಗಳು ಕಾಲವಕಾಶವಿದ್ದು, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಬಹುದಾಗಿದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ನಿಂದ ತಡೆ ತರಬಹುದು. ಒಂದು ವೇಳೆ ತಡೆಯಾಜ್ಞೆ ನೀಡದಿದ್ದರೆ ಆಯ್ಕೆ ಅಸಿಂಧು ಆಗಲಿದೆ.
  • ಭಾರತದ ಕ್ಯಾನ್ಸರ್ ತಜ್ಞ ರವಿ ಕಣ್ಣನ್ ಅವರು ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2023 ನೇ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ನಾಲ್ವರಿಗೆ ಹಂಚಿಕೆಯಾಗಿದೆ. 2007 ರಿಂದ ಅಸ್ಸಾಂನ ಕ್ಯಾಚರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(CCHRC) ನಿರ್ದೇಶಕರಾಗಿರುವ ರವಿ ಕಣ್ಣನ್, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಡ ರೋಗಿಗಳಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಪ್ರಮುಖರಾಗಿದ್ದಾರೆ.
  • ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮೊದಲ ಸೌರ ಯೋಜನೆ ಆದಿತ್ಯ ಎಲ್‌1 ಯಶಸ್ವಿಯಾಗಿ ಉಡಾವಣೆಗೊಂಡಿದೆ. ನಾನಾ ಹಂತಗಳ ಮೂಲಕ 120 ದಿನ ಪಯಣಿಸಿ, ಅಂತಿಮವಾಗಿ ಎಲ್‌1 ಪಾಯಿಂಟ್‌ನಲ್ಲಿ ಸ್ಥಾಪನೆಗೊಳ್ಳಲಿದೆ. 4 ಬಾರಿ ಚಂದ್ರನಲ್ಲಿಗೆ ಹೋದಷ್ಟು ದೂರವನ್ನು ಆದಿತ್ಯ-ಎಲ್‌1 ಕ್ರಮಿಸಲಿದೆ. ಉಡಾವಣಾ ವಾಹನ : ಪಿಎಸ್‌ಎಲ್‌ವಿ- ಸಿ57 (ಪಿಎಸ್‌ಎಲ್‌ವಿ- ಎಕ್ಸ್‌ಎಲ್‌ ವೇರಿಯಂಟ್ ರಾಕೆಟ್ 4 ಮೀಟರ್ ಉದ್ದವಿದ್ದು,  ರಾಕೆಟ್‌ಗೆ ಇದು 25ನೇ ಬಾಹ್ಯಾಕಾಶ ಯಾನವಾಗಿದೆ). ತೂಕ :1,480.7 ಕೆಜಿ
  • ತಮ್ಮ ಚೊಚ್ಚಲ ನಿರ್ದೇಶನದರಾಕೆಟ್ರಿ ದಿ ನಂಬಿ ಎಫೆಕ್ಟ್’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ನಟ ಆರ್. ಮಾಧವನ್ ಅವರು ಇದೀಗ ಪುಣೆಯಲ್ಲಿರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಗೆ (ಎಫ್ಟಿಐಐ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
  • ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕಂಚು ಗೆದ್ದ ಭಾರತದ ಎಚ್.ಎಸ್. ಪ್ರಣಯ್ ಅವರು ಡಬ್ಲ್ಯುಟಿಎ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್ನಲ್ಲಿ 6ನೇ ಸ್ಥಾನಕ್ಕೆ ಏರುವ ಮೂಲಕ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ. 9ನೇ ಸ್ಥಾನದಲ್ಲಿದ್ದಪ್ರಣಯ್ ಅವರು ಮೂರು ಸ್ಥಾನ ಬಡ್ತಿ ಪಡೆದಿದ್ದಾರೆ. ಭಾರತದ ಲಕ್ಷ್ಯ ಸೇನ್ ಅವರು 12ನೇ ರ‍್ಯಾಂಕ್ನಲ್ಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು 14ನೇ ರ‍್ಯಾಂಕ್ ಗಳಿಸಿದ್ದಾರೆ. ಪುರುಷರ ಡಬಲ್ಸ್ನ ಸ್ಟಾರ್ ಜೋಡಿ ಸಾತ್ವಿಕ್ಸಾಯಿ ರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಎರಡನೇ ರ‍್ಯಾಂಕ್ನಲ್ಲಿ ಮುಂದುವರಿದಿದ್ದಾರೆ.
  • ಗ್ರ್ಯಾಂಡ್ಮಾಸ್ಟರ್ ಡಿ.ಗುಕೇಶ್ ಅವರು ಅಧಿಕೃತವಾಗಿ ದೇಶದ ಅಗ್ರಮಾನ್ಯ ಆಟಗಾರ ಸ್ಥಾನಕ್ಕೇರಿದ್ದಾರೆ. ಆ ಮೂಲಕ 37 ವರ್ಷಗಳ ದೀರ್ಘಕಾಲದ ದೇಶದ ಅಗ್ರಮಾನ್ಯ ಆಟಗಾರನಾಗಿದ್ದ ವಿಶ್ವನಾಥನ್ ಆನಂದ್ ಅವರು ಎರಡನೇ ಸ್ಥಾನಕ್ಕೆ ಇಳಿದ್ದಿದ್ದಾರೆ . 1986ರ ಜುಲೈ 1 ರಿಂದ ಆನಂದ್ ಅವರು ದೇಶದ ನಂಬರ್ ವನ್ ಆಟಗಾರರಾಗಿದ್ದರು. ಚೆನ್ನೈನ ಗುಕೇಶ್ ಅವರು ಬಾಕುವಿನಲ್ಲಿ (ಅಜರ್ಬೈಜಾನ್) ನಡೆದ ವಿಶ್ವಕಪ್ ಚೆಸ್ ಟೂರ್ನಿಯ ವೇಳೆ ರ‍್ಯಾಂಕಿಂಗ್ನಲ್ಲಿ ಆನಂದ್ ಅವರನ್ನು ಹಿಂದೆ ಹಾಕಿದ್ದರು. ಅವರು ಕ್ವಾರ್ಟರ್ಫೈನಲ್ನಲ್ಲಿ ಸೋತಿದ್ದರು. ಚೆಸ್ ವಿಶ್ವಕಪ್ ಫೈನಲ್ ತಲುಪಿ ಎರಡನೇ ಸ್ಥಾನ ಪಡೆದ ಪ್ರತಿಭಾವಂತ ಆರ್.ಪ್ರಜ್ಞಾನಂದ (2727) ಅವರೂ ಬಡ್ತಿಪಡೆದಿದ್ದು 19ನೇ ಸ್ಥಾನಕ್ಕೇರಿದ್ದಾರೆ. ಅವರು ಭಾರತದ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಐವರು ಆಟಗಾರರು ಅಗ್ರ 30ರೊಳಗೆ ಸ್ಥಾನ ಪಡೆದಿದ್ದಾರೆ.
  • ಬುಡಾಪೆಸ್ಟ್ನಲ್ಲಿ ಈಚೆಗೆ ನಡೆದ ವಿಶ್ವ ಅಥ್ಲೆಟಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನ ಜಯಿಸಿದ್ದು ಚಾರಿತ್ರಿಕ ದಾಖಲೆ. ಇದರ ಜೊತೆಗೆ ಇದೇ ಮೊದಲ ಬಾರಿ ಭಾರತದ ಮೂವರು ಅಥ್ಲೀಟ್ಗಳು ಜಾವೆಲಿನ್ ಥ್ರೋ ಫೈನಲ್ ತಲುಪಿದ್ದು ಕೂಡ ಇತಿಹಾಸ.  ಆ ಮೂವರಲ್ಲಿ ಕನ್ನಡಿಗ ಡಿ.ಪಿ. ಮನು ಅವರೂ ಒಬ್ಬರು. ಕಿಶೋರ್ ಜೇನಾ (ಒಡಿಶಾ) ಐದನೇ ಸ್ಥಾನ ಗಳಿಸಿದರು. ಡಿ.ಪಿ. ಮನು ಅವರು ‘ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿದ್ದಾರೆ.