Published on: April 20, 2024

ಚುಟುಕು ಸಮಾಚಾರ : 20 ಏಪ್ರಿಲ್ 2024

ಚುಟುಕು ಸಮಾಚಾರ : 20 ಏಪ್ರಿಲ್ 2024

  • ಗೋಧಿ ಇತ್ತೀಚೆಗೆ ಗೋಧಿ ಬೆಳೆಗೆ ವ್ಯಾಪಕವಾಗಿ ಕಂಡುಬರುತ್ತಿರುವ ಶಿಲೀಂಧ್ರ ರೋಗವಾದ ‘ಗೋಧಿಸ್ಫೋಟ ರೋಗ’ವು, 2050ರ ವೇಳೆಗೆ ಜಾಗತಿಕ ಗೋಧಿ ಉತ್ಪಾದನೆಯಲ್ಲಿ ಶೇ.13ರಷ್ಟು ಇಳಿಕೆಗೆ ಕಾರಣವಾಗಬಹುದು. ಗೋಧಿಸ್ಫೋಟ ರೋಗವನ್ನು ಮೊದಲು ಬ್ರೆಜಿಲ್ನಲ್ಲಿ 1985ರಲ್ಲಿ ಗುರುತಿಸಲಾಯಿತು ಮತ್ತು ನಂತರ ದಕ್ಷಿ ಣ ಅಮೆರಿಕದ ನೆರೆಯ ದೇಶಗಳಿಗೂ ಈ ರೋಗ ಹರಡಿತು. ಏಷ್ಯಾದಲ್ಲಿ ಗೋಧಿಸ್ಫೋಟದ ಮೊದಲ ಪ್ರಕರಣವು ಬಾಂಗ್ಲಾದೇಶದಲ್ಲಿ 2016ರಲ್ಲಿ ವರದಿಯಾಗಿದೆ. ಈರೋಗವು ಶೀಘ್ರ ಹರಡುವಿಕೆ ಮತ್ತು ತೀವ್ರ ಇಳುವರಿ ನಷ್ಟ ಮಾಡುವ ಕಾರಣಗಳಿಂದಾಗಿ ಜಾಗತಿಕ ಗಮನವನ್ನು ಸೆಳೆಯಿತು. ರೋಗಕ್ಕೆ ಕಾರಣವಾದ ಶಿಲೀಂಧ್ರ: ಮ್ಯಾಗ್ನಾ ಪೋರ್ತೆ ಒರಿಜೆ ಪಾಥೋಟೈಪ್ ಟ್ರೈಟಿಕಮ್ (MoT) ಈ ಶಿಲೀಂಧ್ರವು ಅಕ್ಕಿ ಮತ್ತು ಬಾರ್ಲಿಯಂಥ ಇತರ ಏಕದಳ ಬೆಳೆಗಳಿಗೂಸೋಂಕನ್ನು ಹರಡುತ್ತದೆ.
  • ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಸಾಕಿರುವ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ(ಏವಿಯನ್ ಇನ್ಫ್ಲುಯೆನ್ಸ (H5N1) ರೋಗ) ದೃಢಪಟ್ಟಿದೆ.ಏವಿಯನ್ ಇನ್ಫ್ಲುಯೆನ್ಸ ಅಥವಾ ಹಕ್ಕಿ ಜ್ವರವು ಏವಿಯನ್ ಇನ್ಫ್ಲುಯೆನ್ಸ ಟೈಪ್ ಎ ವೈರಸ್ಗಳ ಸೋಂಕಿನಿಂದ ಉಂಟಾಗುವ ರೋಗವಾಗಿದೆ. ವಿರಳವಾಗಿ, ವೈರಸ್ ಪಕ್ಷಿಗಳಿಂದ ಸಸ್ತನಿಗಳಿಗೆ ಸೋಂಕು ತಗುಲಬಹುದು, ಈ ವಿದ್ಯಮಾನವನ್ನು ಸ್ಪಿಲ್ಓವರ್ ಎಂದು ಕರೆಯಲಾಗುತ್ತದೆ ಮತ್ತು ಅಪರೂಪವಾಗಿ ಸಸ್ತನಿಗಳ ನಡುವೆ ಹರಡಬಹುದು.
  • ಪಶ್ಚಿಮ ಘಟ್ಟಗಳ ಐದು ರಾಜ್ಯಗಳಲ್ಲಿ ಈ ವರ್ಷ ಹೆಣ್ಣು ಗ್ರೇಟ್ ಇಂಡಿಯನ್ ಹಾರ್ನಬಿಲ್ ವಿಶೇಷವಾಗಿ ಗ್ರೇಟ್ ಇಂಡಿಯನ್ ಹಾರ್ನಬಿಲ್ ಗೂಡುಕಟ್ಟುವ ತಾಣಗಳನ್ನು ತ್ಯಜಿಸುತ್ತಿರುವ ವಿಚಿತ್ರ ವಿದ್ಯಮಾನವು ಸಂಶೋಧಕರು ಮತ್ತು ಪಕ್ಷಿತಜ್ಞರಿಗೆ ಕುತೂಹಲ ಮೂಡಿಸಿದೆ. ಗೂಡುಕಟ್ಟುವ ತಾಣಗಳನ್ನು ತ್ಯಜಿಸಲು ಕಾರಣ: ಹಾರ್ನಬಿಲ್ ಜೀವನ ಚಕ್ರಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ದತ್ತಾಂಶದ ಕೊರತೆ ಇದೆ. ಆದರೆ, ಹಣ್ಣಿನ ಲಭ್ಯತೆ ಕೊರತೆ, ಹೆಚ್ಚಿನ ತಾಪಮಾನ ಮತ್ತು ಸೂಕ್ಷ್ಮ ಮಟ್ಟದಲ್ಲಿ ಹವಾಮಾನದ ಏರಿಳಿತವು ಪಕ್ಷಿಗಳು ಸಂತಾನೋತ್ಪತ್ತಿ ಪ್ರಕ್ರಿಯೆ ತ್ಯಜಿಸಲು ಕಾರಣವಾಗಿರಬಹುದು’ ಎಂಬುದು ಸಂಶೋಧಕರ ಊಹೆ.
  • ಬಾಲರಾಮನ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶಿಸುವ ಮೂಲಕ ‘ಸೂರ್ಯ ತಿಲಕ’ವನ್ನಿಟ್ಟ ಸಂಭ್ರಮದ ಘಳಿಗೆಗೆ ಅಯೋಧ್ಯೆ ನಗರ ಸಾಕ್ಷಿಯಾಯಿತು. ರಾಮ ನವಮಿಯ ದಿನದಂದು ‘ಬಾಲರಾಮನಮೂರ್ತಿಯ ಹಣೆ ಮಧ್ಯಾಹ್ನ 12 ಗಂಟೆಗೆ ಮೇಲೆ 4–5 ನಿಮಿಷಗಳ ಕಾಲ ಸೂರ್ಯರಶ್ಮಿಗಳು ಬಿದ್ದವು. IIA ತಂಡವು ಸೂರ್ಯ ತಿಲಕ್ ಯೋಜನೆಗಾಗಿ ಸೂರ್ಯನ ಸ್ಥಾನ, ವಿನ್ಯಾಸ ಮತ್ತು ಆಪ್ಟಿಕಲ್ ಸಿಸ್ಟಮ್ನ ಆಪ್ಟಿಮೈಸೇಶನ್ ಲೆಕ್ಕಾಚಾರವನ್ನು ನಡೆಸಿತು. ಸಾಧನವನ್ನು ಆಪ್ಟಿಕಾ, ಬೆಂಗಳೂರಿನಿಂದ ತಯಾರಿಸಲಾಗಿದೆ ಮತ್ತು ಸ್ಥಳದಲ್ಲಿ ಆಪ್ಟೊ-ಮೆಕ್ಯಾನಿಕಲ್ ಸಿಸ್ಟಮ್ನ ಅನುಷ್ಠಾನವನ್ನು CSIR-CBRI (ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್) ಮಾಡಿತು.