Published on: June 21, 2023

ಚುಟುಕು ಸಮಾಚಾರ : 20 ಜೂನ್ 2023

ಚುಟುಕು ಸಮಾಚಾರ : 20 ಜೂನ್ 2023

  • ವಿಜಯಪುರ ಜಿಲ್ಲೆಯ ಇಂಡಿ ಲಿಂಬೆಗೆ ಕೇಂದ್ರ ಸರ್ಕಾರದಿಂದ ಭೌಗೋಳಿಕ ಮಾನ್ಯತೆ (ಜಿಯೋ ಗ್ರಫಿಕಲ್ ಟ್ಯಾಗ್) ಲಭಿಸಿದೆ. ಅಸ್ಸಾಂ ಲಿಂಬೆಯ ಬಳಿಕ ‘ಜಿಐ ಟ್ಯಾಗ್’ ಪಡೆದ ಎರಡನೇ ಲಿಂಬೆ ತಳಿ ಎಂಬ ಹೆಗ್ಗಳಿಕೆಗೆ ‘ಇಂಡಿ ಲಿಂಬೆ‘ ಪಾತ್ರವಾಗಿದೆ. ಇದು ‘ಕಾಗ್ಝಿ’ ಲಿಂಬೆ ಎಂದೇ ಪ್ರಸಿದ್ಧವಾಗಿದೆ. ವಿಜಯಪುರ ಜಿಲ್ಲೆಯ ಇಂಡಿ (5,500 ಹೆಕ್ಟೇ ರ್) ಮತ್ತು ಸಿಂದಗಿ(4,500 ಹೆಕ್ಟೇ ರ್) ತಾಲ್ಲೂಕುಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಲಿಂಬೆ ಬೆಳೆಯಲಾಗುತ್ತದೆ.
  • ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ ವಿಶ್ವದಲ್ಲೇ ಅತಿ ಉದ್ದದ ರೈಲ್ವೆ ಪ್ಲಾಟ್ಫಾರ್ಮ್‌. ಈ ಹಿಂದೆ 550 ಮೀಟರ್ ಇದ್ದ ಪ್ಲಾಟ್ಫಾರ್ಮ್‌ ಉದ್ದವನ್ನು 1,507 ಮೀಟರ್ಗೆ ವಿಸ್ತರಿಸಲಾಗಿದೆ. ಗೋರಖ್ಪುರದಲ್ಲಿ 1,366 ಮೀಟರ್ ಉದ್ದ ಪ್ಲಾಟ್ಫಾರ್ಮ್‌ ಈವರೆಗಿನ ಅತಿ ಉದ್ದದ ಪ್ಲಾಟ್ಫಾಮ್ ಆಗಿತ್ತು.
  • ಕುಡಗೋಲು ಕಣ ರೋಗದ ಜಾಗೃತಿ ದಿನ (ವರ್ಲ್ಡ್ ಸಿಕಲ್ ಸೆಲ್ ಜಾಗೃತಿ ದಿನ) ವನ್ನು ಪ್ರತಿ ವರ್ಷ ಜೂನ್ 19 ರಂದು ಆಚರಿಸಲಾಗುತ್ತದೆ. ವಿಶ್ವ ಕುಡಗೋಲು ಕಣ ರೋಗದ ಜಾಗೃತಿ ದಿನವು ಡಿಸೆಂಬರ್ 22, 2008 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ಕಾಯಿಲೆಯನ್ನು 2047ರೊಳಗೆ ನಿರ್ಮೂಲನೆ ಮಾಡುವ ಗುರಿಯನ್ನು ಭಾರತ ಸರ್ಕಾರ ಹೊಂದಿದೆ.
  • ಪ್ರಿಡೇಟರ್’ ಎಂದು ಗುರುತಿಸುವ, ಕಡಲಗಡಿಯಲ್ಲಿ ಕಣ್ಗಾವಲು ಇಡುವ ಶಸ್ತ್ರಸಜ್ಜಿತ ‘ಎಂಕ್ಯೂ 9ಬಿ’ (ಸಶಸ್ತ್ರ ಮಾನವ  ರಹಿತ ವಾಹನ)   ಹೆಸರಿನ 30 ಡ್ರೋನ್ ಗಳನ್ನು  ಅಮೆರಿಕದಿಂದ  ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ  ಅನುಮೋದನೆ ನೀಡಿದೆ.
  • ಸಿರಿಧಾನ್ಯಗಳ ಮಹತ್ವ ಕುರಿತು ಉತ್ತೇಜನ ನೀಡಲು, ಭಾರತ ಮೂಲದ ಅಮೆರಿಕನ್ ಗಾಯಕಿ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಲು ರಚಿಸಿರುವ ‘ಅಬುಂಡನ್ಸ್ ಇನ್ ಮಿಲೆಟ್ಸ್’ ವಿಶೇಷ ಗೀತೆಗೆ ಪ್ರಧಾನಿ ನರೇಂದ್ರ ಮೋದಿ ಕೈಜೋಡಿಸಿದ್ದಾರೆ. ಫಲು ಎಂದೇ ಪ್ರಸಿದ್ಧಿ ಪಡೆದಿರುವ ಮುಂಬೈನ ಗಾಯಕಿ, ಗೀತೆ ರಚನೆಗಾರ್ತಿ ಫಾಲ್ಗುಣಿ ಶಾ ಮತ್ತು ಆಕೆಯ ಪತಿ ಗಾಯಕ ಗೌರವ್ ಶಾ ಈ ಗೀತೆ ರಚಿಸಿದ್ದಾರೆ. ‘ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಚಿಸಲಾಗಿರುವ ಈ ಗೀತೆಯು ಸಿರಿಧಾನ್ಯಗಳ ಮಹತ್ವವನ್ನು ಸಾರಲಿದ್ದು, ಪ್ರತಿಯೊಬ್ಬರಿಗೂ ತಲುಪುವಂತೆ ಕ್ರಮವಹಿಸಲಾಗುವುದು. 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ’ ಎಂದು ಘೋಷಿಸಲು ಭಾರತ ನೀಡಿದ ಸಲಹೆಯನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು ವಿಶ್ವ ಸಂಸ್ಥೆಯ 75ನೇ ಸಾಮಾನ್ಯ ಸಭೆಯಲ್ಲಿ ಅನುಮೋದಿಸಿದ್ದು, ಘೋಷಣೆ ಮಾಡಿದೆ. ವಿಶ್ವದ ಹಸಿವು ತಗ್ಗಿಸಲು ಸಿರಿಧಾನ್ಯ ಮಹತ್ವದ ಪಾತ್ರ ವಹಿಸಲಿದೆ ಎಂದು ಸಿರಿಧಾನ್ಯ ಬಳಕೆಗೆ ಈ ಮೂಲಕ ಉತ್ತೇಜನ ನೀಡಲಾಗುತ್ತಿದೆ.
  • ವಿಶ್ವ ಸಂಸ್ಥೆಯ ಕಾಂಬ್ಯಾಟ್ ಡಿಸರ್ಟಿಫಿಕೇಷನ್ ಸಮಾವೇಶದ (ಯುಎನ್ಸಿಸಿಡಿ) ಜಾಗತಿಕ ಸದ್ಭಾವನಾ ರಾಯಭಾರಿಯಾಗಿ ಡಾ.ರಿಕಿ ಕೇಜ್ ಅವರು ನೇಮಕಗೊಂಡಿದ್ದಾರೆ. ಯುಎನ್ಸಿಸಿಡಿಯ ಮುಖ್ಯಸ್ಥ ಇಬ್ರಾಹಿಂ ಥಿಯಾವ್ ಅವರು ಇತ್ತೀ ಚೆಗೆ ನ್ಯೂಯಾರ್ಕ್‌ ನಲ್ಲಿ ಇವರ ನೇಮಕವನ್ನು ಪ್ರಕಟಿಸಿದರು. ಡಾ.ರಿಕಿ ಕೇಜ್ ಅವರು ಪರಿಸರ ರಕ್ಷಣೆ, ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಅವರು ನಾಲ್ಕು ವರ್ಷಗಳಿಂದ ಯುಎನ್ಸಿಸಿಡಿ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ #HerLand campaign ಅಭಿಯಾನ ಆರಂಭಿಸಿದ್ದಾರೆ. ಇದು, ಮಹಿಳೆ ಭೂ ಹಕ್ಕು ಹೊಂದುವಲ್ಲಿ ಅಗತ್ಯ ಬೆಂಬಲ ಕ್ರೋಢೀಕರಿಸಲಿದೆ.
  • ಬೂಕರ್ ಪ್ರಶಸ್ತಿ ವಿಜೇತರಾದ ಲೇಖಕಿ ಅರುಂಧತಿ ರಾಯ್ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ 45ನೇ ‘ಯುರೋಪಿಯನ್ ಎಸ್ಸೇ ಪ್ರೈಜ್’ ನೀಡಲಾಗುತ್ತದೆ ಎಂದು ಚಾಲ್ಸ್ ವೈಲನ್ ಫೌಂಡೇಷನ್ ಪ್ರಕಟಿಸಿದೆ. ‘ಆಜಾದಿ’ (2021) ಎಂಬ ಶೀರ್ಷಿಕೆಯ ಪ್ರಬಂಧಗಳ ಸಂಕಲನದ ಫ್ರೆಂಚ್ ಅನುವಾದಕ್ಕಾಗಿ ರಾಯ್ ಅವರಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ಫೌಂಡೇಷನ್ ತಿಳಿಸಿದೆ. ಈ ಸಂಕಲನದಲ್ಲಿರಾಯ್ ಅವರು, ‘ಬೆಳೆಯುತ್ತಿರುವ ನಿರಂಕುಶವಾದ’ದ ಜಗತ್ತಿನಲ್ಲಿಸ್ವಾತಂತ್ರ್ಯದ ಅರ್ಥವನ್ನು ಪ್ರತಿಬಿಂಬಿಸಿದ್ದಾರೆ. ಅರುಂಧತಿ ರಾಯ್ ಸ್ವಿಟ್ಜರ್ಲೆಂಡ್ನ ಲುಸಾನ್ ನಗರದಲ್ಲಿಸೆಪ್ಟೆಂಬರ್ 12ರಂದು ನಡೆಯುವ ಸಮಾರಂಭದಲ್ಲಿಅಂದಾಜು 18 ಲಕ್ಷ ಮೊತ್ತದೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ದೆಹಲಿ ಮೂಲದ ಲೇಖಕಿಯಾದ ಅರುಂಧತಿ ರಾಯ್ ಅವರು, ‘ದಿ ಆಫ್ ಗಾಡ್ ಆಫ್ ಸ್ಮಾಲ್ ಥಿಂಗ್ಸ್’, ‘ದಿ ಮಿನಿಸ್ಟ್ರಿ ಅಟ್ಮೋಸ್ಟ್ ಹ್ಯಾಪಿನೆಸ್’ ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದು, ಅವು ರಾಷ್ಟ್ರೀಯ ಮತ್ತುಅಂತರರಾಷ್ಟ್ರೀಯ ಮಟ್ಟದಲ್ಲಿಮೆಚ್ಚುಗೆ ಪಡೆದಿವೆ.
  • ಜರ್ಮನಿಯ ಸಮಾಧಿಯೊಂದರಲ್ಲಿ 3,000 ವರ್ಷಗಳ ಹಿಂದಿನ ಖಡ್ಗ ದೊರಕಿರುವ ಸಂಗತಿ ಬೆಳಕಿಗೆ ಬಂದಿದೆ. ಜರ್ಮನಿಯ ದಕ್ಷಿಣದ ನಾರ್ಡ್ಲಿಂಗೆನ್ ಎಂಬ ಪಟ್ಟಣದ ಬಳಿ ಪತ್ತೆಯಾಗಿರುವ ಈ ಖಡ್ಗ ಅತ್ಯಂತ ಸುಸ್ಥಿತಿಯಲ್ಲಿತ್ತುಹಾಗೂ ಹಿತ್ತಾಳೆ ಯುಗದ್ದು ಎಂದು ಪುರಾತತ್ವಶಾಸ್ತ್ರಜ್ಞರು ತಿಳಿಸಿರುವುದಾಗಿ ಬಿಬಿಸಿ ಮಾಹಿತಿ ಆಧರಿಸಿ ಸುದ್ದಿಸಂಸ್ಥೆಐಎಎನ್ಎಸ್ ವರದಿ ಮಾಡಿದೆ. ‘ಉತ್ಖನನ ನಡೆಸುವ ಸಂದರ್ಭದಲ್ಲಿಸಿಕ್ಕಿರುವ ಈ ಖಡ್ಗ, ಕ್ರಿ.ಪೂ 14 ನೇ ಶತಮಾನಕ್ಕೆ ಸೇರಿದೆ. ಇನ್ನೂ ಫಳಫಳನೆ ಹೊಳೆ ಯುತ್ತಿದೆ’. ‘ಸಮಾಧಿಯಲ್ಲಿಪುರುಷ, ಮಹಿಳೆ ಹಾಗೂ ಮಕ್ಕಳ ಅಸ್ಥಿಪಂಜರಗಳು ದೊರಕಿವೆ. ಅವುಗಳ ಜೊತೆ ಖಡ್ಗಸಿಕ್ಕಿದೆ. ‘ಇದನ್ನು ಆಯುಧವಾಗಿ ಬಳಸುತ್ತಿದ್ದರು’ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.