Published on: January 25, 2024

ಚುಟುಕು ಸಮಾಚಾರ : 22 ಜನವರಿ 2024

ಚುಟುಕು ಸಮಾಚಾರ : 22 ಜನವರಿ 2024

  • ಸರ್ಜಿಕಲ್‌ ಸೊಸೈಟಿ ಆಫ್ ಬೆಂಗಳೂರು ಸಂಸ್ಥೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2,200ಕ್ಕೂ ಅಧಿಕ ಪೊಲೀಸರಿಗೆ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ತರಬೇತಿ (ಸಿಪಿಆರ್) ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಯಿತು. ಆ ಮೂಲಕ ಒಂದೇ ಸ್ಥಳದಲ್ಲಿ ಅತೀ ಹೆಚ್ಚು ಮಂದಿಗೆ ತರಬೇತಿ ನೀಡಿದ ಸಂಸ್ಥೆಯ ಈ ಕಾರ್ಯಕ್ಕೆ ವರ್ಲ್ಡ್‌ ರೆಕಾರ್ಡ್‌ ಆಫ್‌ ಲಂಡನ್‌ ಸಂಸ್ಥೆಯು ‘ವಿಶ್ವ ದಾಖಲೆ’ಯ ಪ್ರಮಾಣ ಪತ್ರ ನೀಡಿತು.
  • ದೃಷ್ಟಿ ವಿಕಲಾಂಗರು ಕನ್ನಡ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ಕೇಳಲು ಅನುವು ಮಾಡಿಕೊಡಲು Google ತನ್ನ ‘Lokout Assisted Vision’ ಅಪ್ಲಿಕೇಶನ್‌ಗೆ ಕನ್ನಡ ಭಾಷೆಯನ್ನು ಸೇರ್ಪಡೆಗೊಳಿಸಿದೆ. ಸಂಸ್ಥೆಯ ಈ ಮಹತ್ಕಾರ್ಯದಲ್ಲಿ ಕರ್ನಾಟಕದ ಬೆಳಗಾವಿಯ ಬೈಲಹೊಂಗಲದ ಸಿದ್ದಲಿಂಗೇಶ್ವರ ಇಂಗಳಗಿ ಅವರು ಎರಡು ವರ್ಷಗಳಿಂದ ಗೂಗಲ್‌ನೊಂದಿಗೆ ಶ್ರಮಿಸಿದ್ದಾರೆ.
  • ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ನಲ್ಲಿ ಒಟ್ಟು 1,600 ಕೋಟಿ ರೂಪಾಯಿ ವೆಚ್ಚದಲ್ಲಿ 43 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ (ಬಿಐಇಟಿಸಿ) ವನ್ನು ಪ್ರಧಾನಿ ಅವರು ಉದ್ಘಾಟಿಸಿದರು. ಇದು ಅಮೆರಿಕದ ಹೊರಗೆ ದೈತ್ಯ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಹೊಂದಿರುವ ಅತಿದೊಡ್ಡ ಕ್ಯಾಂಪಸ್ ಆಗಿದೆ. ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ: ಹೊಸ ಕ್ಯಾಂಪಸ್ ಉದ್ಘಾಟನೆ ಸಮಯದಲ್ಲಿಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದಾರೆ. ಇದು ಭಾರತದ ವಾಯುಯಾನ ಕ್ಷೇತ್ರವನ್ನು ಪ್ರವೇಶಿಸಲು ಬಯಸುವ ಮಹಿಳೆಯರನ್ನು ವಿವಿಧ ರೀತಿಯಲ್ಲಿ ಬೆಂಬಲಿಸುವ ಗುರಿ ಹೊಂದಿದೆ.
  • ವಿದೇಶಗಳಲ್ಲಿ ಭಾರತೀಯರಿಗೆ ಹಾಗೂ ಭಾರತೀಯ ಪ್ರವಾಸಿಗರಿಗೆ/ಪ್ರಯಾಣಿಕರಿಗೆ ಡಿಜಿಟಲ್ ಪಾವತಿಗೆ ಅನುಕೂಲ ಕಲ್ಪಿಸಲು National Payment Corporation Of India(NPCI)ದ NIPL ಜೊತೆ ಗೂಗಲ್ ಪೇ ಒಪ್ಪಂದ ಮಾಡಿಕೊಂಡಿದೆ. ಎಂದು ಗೂಗಲ್ ಇಂಡಿಯಾ ಡಿಜಿಟಲ್ ಸರ್ವಿಸಸ್ ತಿಳಿಸಿದೆ.
  • ಕಳೆದ 42 ವರ್ಷಗಳಿಂದ ಪರಿಸರದಲ್ಲಿ ಎಂದೂ ಕಂಡಿರದ ನಾಮ್ದಫಾ ಹಾರುವ ಅಳಿಲು ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದೆ. ನಾಮ್ದಫಾ ಹಾರುವ ಅಳಿಲು (ಬಿಸ್ವಾಮೊಯೋ ಪ್ಟೆರಸ್ ಬಿಸ್ವಾಸಿ) ತೀವ್ರ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಯಲ್ಲಿದೆ.
  • ವಿವಿಧ ಕ್ಷೇ ತ್ರಗಳಲ್ಲಿ ಅಧಮ್ಯ ಸಾಧನೆಗೈದ 19 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕೇಂದ್ರಾಡಳಿತ ಪ್ರದೇಶ ಮತ್ತು 18 ರಾಜ್ಯಗಳ ಒಟ್ಟು 9 ಬಾಲಕರು ಹಾಗೂ 10 ಬಾಲಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯನ್ನು ಅನ್ನು ಆರು ವಿಭಾಗಗಳಲ್ಲಿ ನೀಡಲಾಗುತ್ತಿದೆ. ಕಲೆ ಮತ್ತು ಸಂಸ್ಕೃತಿ (7), ಶೌರ್ಯ (1) ವಿಜ್ಞಾನ ಮತ್ತು ತಂತ್ರಜ್ಞಾನ (1), ಸಾಮಾಜಿಕ ಸೇವೆ (4) ಕ್ರೀಡೆ (5) ಹಾಗೂ ಆವಿಷ್ಕಾರ ಕ್ಷೇತ್ರದಲ್ಲಿ ಒಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದೆ. 5 ರಿಂದ 18 ವರ್ಷದೊಳಗಿನ ಮಕ್ಕಳ ಸಾಧನೆಯನ್ನು ಗುರುತಿಸಿ ಗೌರವಿಸುವುದೇ ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ.
  • ವಿಶ್ವಚೆಸ್ ಚಾಂಪಿಯನ್ ಚೀನಾದ ಡಿಂಗ್ ಲಿರೇನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್ ಸ್ಟರ್ ವಿಶ್ವನಾಥ್ ಆನಂದ್ ಅವರನ್ನು ಹಿಂದಿಕ್ಕಿ ಆರ್.ಪ್ರಜ್ಞಾನಂದ ಅವರು ನಂ.1 ಚೆಸ್ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ನೆದರ್ಲೆಂಡ್ಸ್ ನ ವಿಜ್ಕ್ ಆನ್ ಝೀ ನಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್ ಟೂರ್ನ್‌ಮೆಂಟ್ನಲ್ಲಿ ಪ್ರಜ್ಞಾನಂದ ಅವರು ಈ ದಾಖಲೆ ನಿರ್ಮಿಸಿದರು. ಗೆಲುವಿನ ನಂತರ, 18 ವರ್ಷ ದ ಪ್ರಜ್ಞಾನಂದ FIDE ಲೈವ್ ರೇಟಿಂಗ್ಗಳಲ್ಲಿ ಐದು ಬಾರಿಯ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ. ಇದರಿಂದ ಪ್ರಜ್ಞಾನಂದ ಅವರು ವಿಶ್ವನಾಥನ್ ಆನಂದ್ ನಂತರ ಚೆಸ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ನನ್ನು ಸೋಲಿಸಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.